ಉಜಿರೆ: ವಿಶ್ವಶಾಂತಿಗಾಗಿ ಅಣುಬಾಂಬು ತ್ಯಜಿಸಿ, ಸತ್ಯ, ಅಹಿಂಸೆ, ತ್ಯಾಗ, ಅಪರಿಗ್ರಹ ಮೊದಲಾದ ಅಣುವ್ರತಗಳನ್ನು ಎಲ್ಲರೂ ಪಾಲಿಸಿದಾಗ ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದು ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರು ಹೇಳಿದರು.

ಬೆಳ್ತಂಗಡಿಯ ಜೈನಪೇಟೆಯ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಮಂಗಳವಾರ ಭಗವಾನ್ ಮಹಾ ವೀರರ 2625ನೇ ಜಯಂತ್ಯುತ್ಸವದಲ್ಲಿ ಅವರು ಮಂಗಲ ಪ್ರವಚನ ನೀಡಿದರು.

ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಉದಾತ್ತ ತತ್ವವಾಗಿದೆ. ಭಗವಾನ್ ಮಹಾವೀರರು ಬೋಧಿಸಿದ ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತ ತತ್ವಗಳಿಂದ ವಿಶ್ವದ ಸಕಲ ಸಮಸ್ಯೆಗಳನ್ನೂ ಸೌಹಾರ್ದಯುತವಾಗಿ ಪರಿಹರಿಸಲು ಸಾಧ್ಯವಿದೆ.ಭಗವಾನ್ ಮಹಾವೀರರ ತತ್ವ ಅಳವಡಿಕೆಯಿಂದ ಶಾಂತಿ-ಸಾಮರಸ್ಯದ, ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದರು.

ಮಹಾವೀರಜಯಂತಿ ಆಚರಣೆಯೊಂದಿಗೆ, ಶ್ರದ್ಧಾ-ಭಕ್ತಿಯಿಂದ ದೇವರ ಪೂಜೆ, ಆರಾಧನೆ ಮಾಡಿ, ವ್ರತ-ನಿಯಮಗಳನ್ನು ಪಾಲಿಸಿ, ಸಾಧು-ಸಂತರ ಸೇವೆ ಮಾಡಿದಾಗ ಜೀವನ ಪಾವನವಾಗುತ್ತದೆ. ಮದ್ಯ-ಮಾಂಸ ಸೇವನೆ ತ್ಯಾಗ ಮಾಡಿ ಧನಾತ್ಮಕ ಚಿಂತನೆಯೊದಿಗೆ, ಅಹಿಂಸಾ ತತ್ವ ಪಾಲನೆ ಮಾಡಿದಾಗ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.

ಬಸದಿಯ ಸ್ವಚ್ಛತೆ, ನಿರ್ವಹಣೆ ಬಗ್ಗೆ ಮಹಾರಾಜರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ತೀರ್ಥಂಕರರು ರಾಗ-ದ್ವೇಷ ರಹಿತವಾಗಿ ಸಕಲ ಜೀವಿಗಳಿಗೂ ಆತ್ಮಕಲ್ಯಾಣಕ್ಕಾಗಿ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಸಮವಸರಣದಲ್ಲಿ ಸಕಲ ಜೀವಿಗಳಿಗೂ ಉಪದೇಶ ಆಲಿಸಲು ಸಮಾನ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಜನ್ ಮಜಯಂತಿ ಆಚರಣೆಯೊಂದಿಗೆ ಮಹಾವೀರರ ತತ್ವಗಳನ್ನೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಕೆ.ಜೀವಂಧರ ಬಳ್ಳಾಲ್, ಕೆ.ರಾಜವರ್ಮ ಬಳ್ಳಾಲ್, ಡಾ.ಮಾಲತಿ ಹೆಗ್ಡೆ, ಡಾ.ಪ್ರಿಯಾ ಬಳ್ಳಾಲ್, ಸುಮತಿ ಬಳ್ಳಾಲ್, ವಿನಯಾ ಜೆ.ಬಳ್ಳಾಲ್, ಮಣಿಮಾಲಾ ಬಳ್ಳಾಲ್, ವನಮಾಲಾ ಬಳ್ಳಾಲ್, ಶ್ರೀನಾಥ ಬಳ್ಳಾಲ್, ಪ್ರಸನ್ನಕುಮಾರ್, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಪ್ರಬಂಧಕ ಎಂ.ಜಿನರಾಜ ಶೆಟ್ಟಿ ಉಪಸ್ಥಿತರಿದ್ದರು.

ಬಸದಿಯ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು. ಬಸದಿಯ ಪ್ರಧಾನ ಅರ್ಚಕ ಜಯವರ್ಮರಾಜ ಇಂದ್ರ ಅವರಿಂದ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು.

ಶಿಕ್ಷಕ ಧರಣೇಂದ್ರಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-29-937929784

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.