ಉಳ್ಳಾಲ: ‘ಶಿಕ್ಷಣದೊಂದಿಗೆ ಮಕ್ಕಳಲ್ಲಿ ಧಾರ್ಮಿಕತೆ ಮತ್ತು ಸಂಸ್ಕಾರದ ಕುತೂಹಲ ಮೂಡಿಸುವ ಜವಾಬ್ದಾರಿ ಪೋಷಕರ ಮೇಲಿದೆ’ ಎಂದು ಕೋಟೆಕಾರು ಬೀರಿ ಗಣೇಶ ಮಂದಿರದ ಪ್ರಧಾನ ಕಾರ್ಯದರ್ಶಿ ಆಶಿಕ್ ಗೋಪಾಲಕೃಷ್ಣ ಹೇಳಿದರು.

ತೊಕ್ಕೊಟ್ಟು ಮೂಲದ ಶ್ರೀಸಾಯಿ ಪರಿವಾರ್ ಟ್ರಸ್ಟ್ ಆಶ್ರಯದಲ್ಲಿ ಕೊಲ್ಯದಲ್ಲಿ ನಡೆದ 2026ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಶ್ರೀ ಸಾಯಿ ಬೊಲ್ಪು’ ಅಭಿನಂದನಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊಲ್ಯ ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್, ವಿದ್ಯಾರ್ಥಿಗಳು ಇಂದು ಪಡೆದ ಗೌರವಕ್ಕೆ ತಕ್ಕ ಸಾಧನೆಯನ್ನು ಜೀವನದಲ್ಲಿ ಮಾಡಬೇಕು ಎಂದು ಹೇಳಿದರು.

ಮಾಡೂರು ಶ್ರೀಸಾಯಿ ಮಂದಿರದ ಆಡಳಿತ ಮೊಕ್ತೇಸರ ಕೆ.ಪಿ.ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು.

ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ಕೊಲ್ಯ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಶೆಟ್ಟಿ ಕುಂಪಲ, ಕುಂಪಲ ಆಸರೆ ಬಳಗದ ಸ್ಥಾಪಕ ಸೂರಜ್ ಸಾಗರ್, ಟ್ರಸ್ಟಿಗಳಾದ ಗಣೇಶ್ ಅಂಚನ್, ಗೀತೇಶ್ ಕುತ್ತಾರು, ಧನಲಕ್ಷ್ಮಿ ಗಟ್ಟಿ, ಪುರುಷೋತ್ತಮ ಕಲ್ಲಾಪು ಭಾಗವಹಿಸಿದ್ದರು.

ಪ್ರವೀಣ್ ಎಸ್. ಕುಂಪಲ ಸ್ವಾಗತಿಸಿ, ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ರಜನೀಶ್ ನಾಯ್ಕ್ ಅಭಿನಂದನಾ ಪತ್ರ ವಾಚಿಸಿದರು. ಕೃಷ್ಣ ಪೊನ್ನತ್ತೋಡು ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-29-1360392662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.