ಉಪ್ಪಿನಂಗಡಿ: ‘ದೇಶದೆಲ್ಲೆಡೆ ಶಿಕ್ಷಣ, ಉದ್ಯೋಗದ ಹೆಸರಿನಲ್ಲಿ ಮತಾಂಧ ಶಕ್ತಿಗಳ ವ್ಯವಸ್ಥಿತ ಮೋಸಕ್ಕೆ ಮಕ್ಕಳು ಸಿಲುಕುತ್ತಿದ್ದು, ಅವರನ್ನು ರಕ್ಷಿಸುವಲ್ಲಿ ಪೋಷಕರು ನಿಗಾ ವಹಿಸಬೇಕು. ಧರ್ಮ ರಕ್ಷಣೆಯ ಕಾರ್ಯದೊಂದಿಗೆ ಮಕ್ಕಳ ರಕ್ಷಣೆಯೂ ಆದ್ಯತೆಯಲ್ಲಿ ನಡೆಯಬೇಕಿದೆ’ ಎಂದು ನರಸಿಂಹರಾಜಪುರದ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಪುನರ್ ನಿರ್ಮಾಣಗೊಂಡ ಇಲ್ಲಿನ ಕದಿಕಾರು ಭಗವಾನ್ 1008 ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಜಿನಬಿಂಬಗಳ ಪಂಚಕಲ್ಯಾಣ, ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಚಂದ್ರನಾಥ ಸ್ವಾಮಿ, ಮಹಾಮಾತೆ ಪದ್ಮಾವತಿ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವದ 4ನೇ ದಿನವಾದ ಶನಿವಾರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದೇಶದ ಇತಿಹಾಸದಲ್ಲಿ ಜೈನ ಧರ್ಮವು ಪ್ರಧಾನ ಪಾತ್ರವಹಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜೈನ ಧರ್ಮದ ಸಂಸ್ಥೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕು. ಎಲ್ಲೆಡೆಯಿಂದಲೂ ಜಿನ ಸ್ಮರಣೆ ಮಾಡುವ ಸಲುವಾಗಿ ಬಸದಿಯಲ್ಲಿನ ಮಾನಸ್ತಂಭದಲ್ಲಿ ಚತುರ್ಮುಖ ಜಿನ ಬಿಂಬಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಮುಖಂಡ ಅಭಯಚಂದ್ರ ಜೈನ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜೈನ ಬಸದಿಗಳಿಗೆ ಗರಿಷ್ಠ ಅನುದಾನ ಒದಗಿಸಿದೆ. ಜೈನ ಸಮುದಾಯದವರಿಗೆ ಮಂತ್ರಿ ಸ್ಥಾನ ನೀಡಿ ಸಮುದಾಯಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದರು.

ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಮಾತನಾಡಿ, ದೇಶಕ್ಕೆ ಜೈನ ಸಮುದಾಯ ನೀಡಿರು ಕೊಡುಗೆಯನ್ನು ಇತರ ಯಾವ ಸಮುದಾಯವೂ ನೀಡಿಲ್ಲ. ಭೂಮಿ ಕಳೆದುಕೊಂಡಿರುವ ಜೈನ ಸಮುದಾಯದವರು ವಿಚಲಿತರಾಗಿಲ್ಲ. ಸಮುದಾಯವು ಆತ್ಮಸಾಕ್ಷಿಯಾಗಿ ಸಮಾಜಕ್ಕೆ ಒಳಿತು ಮಾಡುತ್ತಿದೆ ಎಂದರು.

ಕದಿಕ್ಕಾರು ಭಗವಾನ್ ಚಂದ್ರನಾಥ ಸ್ವಾಮಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಧನ್ಯಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಎಕ್ಸಲೆಂಟ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಯುವರಾಜ ಜೈನ್, ಸುರ್ಯ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶ್ಚಂದ್ರ, ವಕೀಲೆ ಶ್ವೇತಾ ಜೈನ್ ಮಾತನಾಡಿದರು. ಉದ್ಯಮಿ ಮಹಾವೀರ್ ಜೈನ್, ಸೇವಾದಾರರಾದ ನಾಭಿರಾಜ ಪೂವಣಿ, ಯಶೋಧರ ಪೂವಣಿ, ಶಾಂತಿಪ್ರಕಾಶ್ ನೇರೆಂಕಿ, ಪಂಚಕಲ್ಯಾಣ ಸಮಿತಿ ಅಧ್ಯಕ್ಷ ವಿಧ್ಯಾಧರ ಜೈನ್, ಸ್ಥಳೀಯ ಮುಖಂಡರಾದ ಡಾ.ಕೆ.ಜಿ.ಭಟ್, ಡಾ.ಸುಪ್ರೀತ್ ಲೋಬೊ, ಕೈಲಾರ್ ರಾಜಗೋಪಾಲ ಭಟ್, ಅಶ್ರಫ್ ಬಸ್ತಿಕಾರ್, ಇಸ್ಮಾಯಿಲ್ ಇಕ್ಬಾಲ್, ಅಜೀಜ್ ಬಸ್ತಿಕಾರ್, ಇಸ್ಮಾಯಿಲ್, ರಾಜಶೇಖರ್ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಜ್ರಕುಮಾರ್ ಜೈನ್, ಸಮಿತಿ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ, ಅನುದೀಪ್ ರೈ, ನಿತೇಶ್ ಕುಮಾರ್ ಪುತ್ತಿಲ, ಪ್ರಭಾಕರ್ ರೈ, ರಕ್ಷಿತ್ ಕುಮಾರ್ ಪುತ್ತಿಲ, ಜಯರಾಜ್ ಜಾರಳಿಕೆ, ಸುಭಾಶ್ ಜೈನ್, ನಿರಂಜನ್ ಕೊಂಡೆ, ಅರುಣಾ ಡಿ. ರೈ, ಸಮಂತ್ ನೆಲ್ಯಾಡಿ, ಪುನಿತ್ ನೆಲ್ಯಾಡಿ, ಉದಯ ಕುಮಾರ್ ಜೈನ್, ಅಭಯ್ ಜೈನ್, ವಿಜೇತ್ ಜೈನ್, ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಮಹೇಶ್ ಪಡಿವಾಳ್ ಭಾಗವಹಿಸಿದ್ದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಜೈನ ಸಮುದಾಯದ ವಿದ್ಯಾರ್ಥಿಗಳಾದ ಅನುಷ್ಕಾ ಜೈನ್, ಶ್ರದ್ಧಾ ಬಿ. ಹೆಗ್ಡೆ, ಪ್ರಾಬಲ್ಯ ಜೈನ್, ಉದತ್ ವರ್ಮ, ಶ್ರೀಯಾನ್ ಜೈನ್, ಮಾನನಿ ಎಸ್. ಜೈನ್ ಅವರನ್ನು ಅಭಿನಂದಿಸಲಾಯಿತು.

ಮಿತ್ರಸೇನ್ ಜೈನ್ ಸ್ವಾಗತಿಸಿದರು. ಪಾರ್ಶ್ವನಾಥ ಜೈನ್ ವಂದಿಸಿದರು. ಅಜಿತ್ ಜೈನ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-29-1590686941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.