ಉಪ್ಪಿನಂಗಡಿ: ನಮ್ಮ ಬದುಕಿನಲ್ಲಿ ಕಳೆದು ಹೋದ ವರ್ಷಗಳ ಬಗ್ಗೆ ಚಿಂತಿಸುವುದಿಲ್ಲ. ಆದರೆ, ನಾಳೆಯ ವೈಭವದ ಜೀವನ, ಮೋಹದ ಬಗ್ಗೆ ಕನಸು ಕಾಣುತ್ತೇವೆ. ಇದನ್ನು ಬದಿಗಿಟ್ಟು ಧರ್ಮ ಪಾಲನೆ ಪ್ರಕಾರ ಜೀವನ ಅನುಭವಿಸಿದರೆ ಅದರಲ್ಲಿ ಸಿಗುವ ಸುಖವೇ ನಿಜವಾದ ಸುಖ ಎಂದು ಜೈನ ದಿಗಂಬರ ಪರಂಪರೆಯ 108 ವೀರಸಾಗರ ಮುನಿ ಮಹಾರಾಜರು ಗುರುವಾರ ಹೇಳಿದರು.

ಉಪ್ಪಿನಂಗಡಿ ಗಾಂಧಿಪಾರ್ಕ್ ಎಂಬಲ್ಲಿ ಪುನರ್ ನಿರ್ಮಿತ ಕದಿಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಜಿನ ಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗ ವಾನ್ 1008 ಚಂದ್ರನಾಥ ಸ್ವಾಮಿ, ಮಹಾ ಮಾತೆ ಪದ್ಮಾವತಿ ದೇವಿಯ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಜೈನ ಧರ್ಮದ ನಾವು ನಾಚಿಕೆ, ಅಂಜಿಕೆ ಬಿಡಬೇಕು. ನಮ್ಮೊಳಗೆ ಶಾಂತಿ, ಸಂವೇದ, ನಿರ್ವೇದ, ಅನುಕಂಪ, ಆಸ್ತಿಕೆ ಇರಬೇಕು. ಇದನ್ನು ಅಳವಡಿಸಿಕೊಂಡರೆ ಮಾತ್ರ ಜೈನ ಧರ್ಮ ಪಾಲನೆ ಸಾಧ್ಯ. ದಿಗಂಬರ ಮುನಿಗಳು ಇರುವವರೆಗೆ ಮಾತ್ರ ಜೈನ ಧರ್ಮ ಇರುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಾವು ಚಿಂತಿತರಾಗಬೇಕಾಗಿದೆ ಎಂದರು.

ಉಜಿರೆ ಎಸ್ಡಿಎಂ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಇಚ್ಲಂಪಾಡಿ ಮಾತನಾಡಿ, ಜೈನಧರ್ಮ ಶ್ರೇಷ್ಠ ಮತ್ತು ವೈಜ್ಞಾನಿಕ ಧರ್ಮವಾಗಿದೆ. ನಮ್ಮ ಬದುಕು ಹಣ, ಅಂಕಗಳ ಸಂಪಾದನೆಯಲ್ಲಿದೆ. ಇಂಥ ಲೋಪ ಇಲ್ಲದ ಬದುಕು ನಮ್ಮದಾಗಬೇಕು ಎಂದರು.

ಜೈನ ಧರ್ಮದ ಮುಖಂಡರಾದ ಧನಂಜಯ ಆಳ್ವ ಅಳಿಯೂರು, ಜಯವರ್ಮ ಬಳ್ಳಾಲ್, ರಾಜವರ್ಮ ಬಳ್ಳಾಲ್, ಜಿನರಾಜ ಆರಿಗ ಕಾರಿಂಜ, ಮುನಿರಾಜ ರೆಂಜಾಳ, ಪ್ರಸನ್ನ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಜ್ರಕುಮಾರ್ ಜೈನ್, ಕಾರ್ಯದರ್ಶಿ ಶಾಂತಿಪ್ರಕಾಶ್, ಸಮಿತಿಯ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ, ಅನುದೀಪ್ ರೈ, ಸುಭಾಶ್ ಜೈನ್, ನಿರಂಜನ್ ಕೊಂಡೆ, ಪಾರ್ಶ್ವನಾಥ್ ನೆಲ್ಯಾಡಿ, ಸಮಂತ್ ನೆಲ್ಯಾಡಿ, ಪುನಿತ್ ನೆಲ್ಯಾಡಿ, ಉದಯ ಕುಮಾರ್ ಜೈನ್, ಅಭಯ್ ಜೈನ್, ವಿಜೇತ್ ಜೈನ್, ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಸತೀಶ್ ಪಡಿವಾಳ್, ಮಹೇಶ್ ಪಡಿವಾಳ ಭಾಗವಹಿಸಿದ್ದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾ ಧ್ಯಕ್ಷ ಧನ್ಯಕುಮಾರ್ ರೈ ಸ್ವಾಗತಿಸಿ, ಪಂಚಕಲ್ಯಾಣ ಸಮಿತಿ ಅಧ್ಯಕ್ಷ ವಿಧ್ಯಾಧರ ಜೈನ್ ವಂದಿಸಿದರು. ಪಾರ್ಶ್ವನಾಥ ಜೈನ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-29-1300766656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.