ಉಪ್ಪಿನಂಗಡಿ: ‘ಉಲಮಾ ನಾಯಕನಾಗುವುದು, ವಾಗ್ಮಿ, ಪಂಡಿತನಾಗುವುದು ಅವರ ಪ್ರತಿಭೆ, ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ. ಆದರೆ ಕುರಾನ್ನ ಮಹತ್ವ, ಅದಕ್ಕೆ ನೀಡಬೇಕಾದ ಗೌರವ, ಆಶಯ ತಿಳಿದು ಮತ್ತೊಬ್ಬರಿಗೆ ತಿಳಿಸುವುದು ಅತಿ ಮುಖ್ಯ’ ಎಂದು ‘ಸಮಸ್ತ’ ರಾಷ್ಟ್ರೀಯ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜಿನ 8ನೇ ವಾರ್ಷಿಕೋತ್ಸವ ಹಾಗೂ ಸನದುದಾನ ಸಮಾರಂಭದಲ್ಲಿ ಮಾತನಾಡಿ, ‘ನೆಬಿವರ್ಯರು ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟಿದ್ದರಿಂದ ಶರೀಅತ್ ಕಲಿಕೆಗೆ ಮಹತ್ವ ದೊರಕಿದೆ. ಈ ಮೂಲಕ ಸ್ತ್ರೀ ಮಾನ್ಯತೆ ಮತ್ತು ಅವರ ರಕ್ಷಣೆ ಇಸ್ಲಾಮಿನ ಬದ್ಧತೆ ಆಗಿದೆ. ತಾಯಂದಿರು, ಹೆಣ್ಣು ಮಕ್ಕಳು ತಮ್ಮ ಕಲಿಕೆಯ ಮೂಲಕ ಕುಟುಂಬ, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಜುನೈದ್ ಜಿಫ್ರಿ ತಂಙಳ್ ದುವಾಃ ನೆರವೇರಿಸಿ ಸಮುದಾಯದ ಉನ್ನತಿಗೆ ಮಹಿಳೆಯರು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಬಗ್ಗೆ ಚಿಂತಿತರಾಗಬೇಕು ಎಂದರು.

ಶರೀಅತ್ ಕಾಲೇಜು ಸಮಿತಿ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ, ಹೆಣ್ಣು ಕಲಿತರೆ ಗ್ರಾಮವೇ ಕಲಿತ ಹಾಗೇ ಹೀಗಿರುವಾಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯ ಎಂದರು.

ಗಂಡಿಬಾಗಿಲು ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಕುಂಡಾಜೆ ಧಾರ್ಮಿಕ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಫೈಝಿ ಮಾತನಾಡಿದರು.

ಶರೀಅತ್ ಕಾಲೇಜು ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಎಲ್.ಟಿ. ಅಬ್ದುಲ್ ರಜಾಕ್ ಹಾಜಿ, ಬಡಿಲ ಹುಸೇನ್, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್, ಕಾರ್ಯದರ್ಶಿ ನಝೀರ್ ಪೂರಿಂಗ, ಕೆಮ್ಮಾರ ಮದ್ರಸ ಕಮಿಟಿ ಅಧ್ಯಕ್ಷ ಕೆಕೆ. ಕಮಾಲ್, ಉಪಾಧ್ಯಕ್ಷ ಎನ್.ಎ. ಇಸಾಕ್, ಇಸ್ಮಾಯಿಲ್ ತಂಙಳ್, ಯುನಿಕ್ ಅಬ್ದುಲ್ ರಹಿಮಾನ್, ಅಬ್ದುಲ್ಲ ಮುಸ್ಲಿಯಾರ್, ಜಿ.ರಫೀಕ್ ಉಪಸ್ಥಿತರಿದ್ದರು. ಕೆ.ಎಂ. ಕೊಡುಂಗೈ ಸ್ವಾಗತಿಸಿದರು. ರಫೀಕ್ ಗೋಳಿತ್ತಡಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-29-1307634195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.