ಇಂದು ಅನ್ನ, ಆಹಾರ, ಬಟ್ಟೆಯ ಕೊರತೆ ಇಲ್ಲ. ಆದರೆ, ನೆಮ್ಮದಿಯ ಹುಡುಕಾಟ, ಹಂಬಲ ಹೆಚ್ಚಾಗಿದೆ. ಆ ನೆಮ್ಮದಿಯ ಸೂತ್ರ ಇರುವುದು ಆಧ್ಯಾತ್ಮದಲ್ಲಿ. ವಚನ ಸಾಹಿತ್ಯದ ಸಂರಕ್ಷಣೆ, ಪುನರುತ್ಥಾನ ಮಾಡಿದವರು ಫ.ಗು. ಹಳಕಟ್ಟಿ. ಸಮಾಜಕ್ಕೆ ಅವರ ಕೊಡುಗೆ ಬಹಳ ದೊಡ್ಡದು. ಅವರು ವಕೀಲರಾಗಿದ್ದರು. ಮನೆ ಮನೆಗಳಿಗೆ ಹೋಗಿ ವಚನ ಸಾಹಿತ್ಯವನ್ನು ಪ್ರಚಾರ ಮಾಡಿದವರು. ಹಳಕಟ್ಟಿ ಅವರು ಆ ಕೆಲಸ ಮಾಡಿರದಿದ್ದರೆ ಇಂದು ವಚನಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಮನೆ, ಮಠಗಳಲ್ಲಿ ಇದ್ದ ವಚನಗಳ ತಾಳೆಗರಿಗಳನ್ನು ಸಂಗ್ರಹಿಸಿ ಮುದ್ರಿಸಿದ್ದರು. ಬಸವಣ್ಣನ ಜೊತೆಗೆ ಹಳಕಟ್ಟಿಯವರ ಭಾವಚಿತ್ರ ಹಾಕಿ ಗೌರವ ಸಲ್ಲಿಸಬೇಕು. ಅಷ್ಟರಮಟ್ಟಿಗೆ ದೊಡ್ಡ ಮನುಷ್ಯ ಅವರು. ಹಳಕಟ್ಟಿಯಂಥ ಮಹಾತ್ಮರು ಈ ನಾಡಿಗೆ ಸಿಗದೇ ಇದ್ದಿದ್ದರೆ ವಚನ ಸಾಹಿತ್ಯ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಅಂಬೇಡ್ಜರ್ ಜಗತ್ತಿಗೆ ಬಹಳ ದೊಡ್ಡ ಜ್ಞಾನ ರತ್ನ. ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರು. ಇಂಥ ಮಹಾನುಭಾವರ ಶ್ರದ್ಧೆಯಿಂದ ನೈತಿಕ ಭಾವಗಳು ಬರುತ್ತವೆ. ಚರಿತ್ರೆಯಿದ್ದರೆ ಸಾಲದು, ಚಾರಿತ್ರ್ಯ ಇರಬೇಕು. ಇವರೆಲ್ಲ ಶ್ರದ್ಧೆ, ಪ್ರಾಮಾಣಿಕತೆಯಿಂದ ಬದುಕಿದವರು. ಶ್ರದ್ಧೆ ಇರದಿದ್ದರೆ ಯಾರು ಏನು ಮಾಡಲಿಕ್ಕಾಗಲ್ಲ. ಮನಸ್ಸು ಬಹಳ ಶುದ್ಧವಾಗಿ ಇಟ್ಟುಕೊಳ್ಳಬೇಕು. ಸತ್ತ ಶವದ ಮುಂದೆ ಕುಳಿತುಕೊಳ್ಳಬಹುದು. ಕೊಳೆತ ಮನಸ್ಸಿನ ಎದುರು ಕೂರಲಾಗದು.

ಶ್ರದ್ಧೆಯ ಇನ್ನೊಂದು ಹೆಸರೇ ಹರ್ಡೇಕರ್ ಮಂಜಪ್ಪನವರು. ಬಸವ ಜಯಂತಿ ಪ್ರಾರಂಭಿಸಿದ ಶ್ರೇಯಸ್ಸು ಇವರಿಗೆ ಹಾಗೂ ಧಾರವಾಡದ ಮೃತ್ಯುಂಜಯ ಸ್ವಾಮೀಜಿಗಳಿಗೆ ಸಲ್ಲುತ್ತದೆ. ರೈತ ತಾನು ಬೆಳೆದ ಬೀಜಕ್ಕೆ ಶ್ರದ್ಧೆ ತೋರದಿದ್ದರೆ, ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜ ಸೇವೆ ಮಾಡುವ ಶ್ರದ್ಧೆಯಿರದಿದ್ದರೆ? ಆಧ್ಯಾತ್ಮದ ಶ್ರದ್ಧೆ ಬರಬೇಕಾದರೆ ಮನುಷ್ಯ ಮಹಾತ್ಮರ ಬಗ್ಗೆ ತಿಳಿಯಬೇಕು. ಇಂದಿನ ದಿನಮಾನಗಳಲ್ಲಿ ಶ್ರದ್ಧೆ ಕಡಿಮೆಯಾಗುತ್ತಿದೆ. ಮನುಷ್ಯ ಒಂದು ಶಿಸ್ತಿನ ಜೀವನ ನಡೆಸಬೇಕು. ಮಾತಿನ ವ್ಯವಹಾರ, ನಡತೆ ಸಜ್ಜನವಾಗಿರಬೇಕು. ಎಲ್ಲರೂ ಶ್ರದ್ಧೆಗೆ ಒಳಪಡಬೇಕು. ನಡೆವಾಗ, ನುಡಿವಾಗ ಶ್ರದ್ಧೆ ಇರಬೇಕು. ‘ನಡೆಯ ಕಲಿಸಿದ ಬಸವ, ನುಡಿಯ ಕಲಿಸಿದ ಬಸವ, ಉಣಲು ಕಲಿಸಿದ ಬಸವ’ ಎನ್ನುತ್ತಾರೆ ಜನಪದರು. ಅಂಥ ಶ್ರದ್ಧೆಯ ವ್ಯಕ್ತಿತ್ವ ಬಸವಣ್ಣನವರದಾಗಿತ್ತು. ಬಸವಣ್ಣನವರ ಶ್ರದ್ಧೆಯ ವಿಚಾರಗಳನ್ನು ಮನುಷ್ಯರೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರದ್ಧೆಯೇ ಮನುಷ್ಯನಿಗೆ ಭೂಷಣ.–ನಿಜಗುಣಪ್ರಭು ಸ್ವಾಮೀಜಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-33-1059203213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.