ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಆಸೆಯ ಬಂಧನದಲ್ಲಿ ಸಿಲುಕದಿರಿ

Last Updated 4 ನವೆಂಬರ್ 2020, 7:27 IST
ಅಕ್ಷರ ಗಾತ್ರ

ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ!

ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲವಯ್ಯಾ!

ಕರುಣಾಕರ, ಅಭಯಕರ, ವರದ ನೀ ಕರುಣಿಸಯ್ಯಾ;

ಸಂಸಾರ ಬಂಧನವನು ಮಾಣಿಸಿ ಎನಗೆ ಕೃಪೆ ಮಾಡಿ

ನಿಮ್ಮ ಶ್ರೀಪಾದ ಪದ್ಮದಲ್ಲಿ ಭ್ರಮರನಾಗಿರಿಸು

ಭಕ್ತ ಜನ ಮನೋವಲ್ಲಭ ಕೂಡಲಸಂಗಮದೇವಾ

ಆಸೆ ಎಂಬುದು ಮನುಷ್ಯನ ಜೀವನದ ಆನಂದವನ್ನು ಹಾಳು ಮಾಡುತ್ತದೆ. ಆಸೆಯ ಬಂಧನದಲ್ಲಿ ಸಿಲುಕಿರುವ ಮಾನವನು ತನ್ನ ಆಧ್ಯಾತ್ಮಿಕ ಜೀವನದ ಆನಂದವನ್ನೆ ಮರೆತಿದ್ದಾನೆ. ಆಸೆ ಇರಬೇಕು. ಆದರೆ, ದುರಾಸೆ ಇರಬಾರದು. ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧನು ಹೇಳಿದ್ದು ಇದೇ ಕಾರಣಕ್ಕೆ ಇರಬಹುದು. ಮಾನವನು ತನ್ನ ಆಸೆಯ ಪ್ರವೃತ್ತಿಯಿಂದ ಭಗವಂತನ ಸ್ಮರಣೆಯನ್ನೆ ಮರೆತಿದ್ದಾನೆ. ಎಲ್ಲವನ್ನೂ ಬಲ್ಲ ಭಗವಂತನೆ ಈ ಸಂಸಾರ ಸಾಗರವೆಂಬ ದುಃಖದಿಂದ ನನ್ನನ್ನು ಪಾರು ಮಾಡಿ ನಿನ್ನ ಚರಣ ಕಮಲದಲ್ಲಿ ದುಂಬಿಯಾಗಿ ಸೇವೆ ಸಲ್ಲಿಸುವಂತೆ ಕೃಪೆ ಮಾಡು. ಆಸೆಯಿಂದೊಡಗೂಡಿದ ಸಂಸಾರದ ವ್ಯಾಮೋಹದಲ್ಲಿರುವ ಮಾನವನಿಗೆ ಸದಾ ಕಾಲ ಶ್ರದ್ಧೆ, ಭಕ್ತಿಯನ್ನು ಒಳಗೊಳ್ಳುವಂತೆ ಮಾಡು ಎಂದು ಬಸವಣ್ಣನವರು ದೇವರನ್ನು ಪ್ರಾರ್ಥಿಸಿದ್ದಾರೆ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT