ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ | ದೀಕ್ಷೆ ಇಲ್ಲದೇ ಮೋಕ್ಷವಿಲ್ಲ

Last Updated 24 ಜುಲೈ 2020, 19:30 IST
ಅಕ್ಷರ ಗಾತ್ರ

ಬಸವಾದಿ ಶರಣರು ಅಂಗದ ಮೇಲೆ ಲಿಂಗವ ಧರಿಸಿ ಪೂಜಿಸಿ ಪಾವನರಾದರು. ‘ಗುರು ವಚನವಲ್ಲದೇ ಲಿಂಗವೆಂದೆನಿಸದು, ನೇಮವೆಂದೆನಿಸದು. ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ ವಿಷಯ ಭ್ರಷ್ಟರ ಮೆಚ್ಚುವನೆ ಕೂಡಲಸಂಗಮದೇವ’ ಎಂದು ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ.

ಇಷ್ಟಲಿಂಗವನ್ನು ಎಲ್ಲಿಂದಲೋ ತಂದು ಕೊರಳಲ್ಲಿ ಕಟ್ಟಿಕೊಳ್ಳುವುದಲ್ಲ. ಅದು ಗುರುವಿನಿಂದ ಅನುಗ್ರಹ ರೂಪದಲ್ಲಿ ಭಕ್ತರಿಗೆ ದೊರೆಯಬೇಕು. ಲಿಂಗವು ಗುರುವಿನ ಅನುಗ್ರಹ ದ್ರಷ್ಟಿ, ಸಂಯೋಜನೆ ಹಾಗೂ ಹಸ್ತ ಮಸ್ತಕ ಸಹಯೋಗದಿಂದ ದೊರೆಯುತ್ತದೆ. ಇದನ್ನು ಲಿಂಗದೀಕ್ಷೆ ಎಂದು ಕರೆಯುತ್ತಾರೆ.

ಶ್ರೀ ಸಿದ್ದಾಂತ ಶಿಖಾಮಣಿಯಲ್ಲಿ ದೀ ಎಂದರೆ ಕೊಡುವುದು. ಕ್ಷೆ ಎಂದರೆ ಕಳೆಯುವುದು. ಶಿವಜ್ಞಾನವನ್ನು ಕೊಡುವುದು ಮತ್ತು ಅಜ್ಞಾನವನ್ನು ಕಳೆಯುವುದು ಎಂದಾಗಿದೆ.

ಸರ್ವಾತ್ಮನಾದ ದೇವರು ತನ್ನಲ್ಲಿ ಇದ್ದಾನೆ ಎಂಬುದನ್ನು ಮರೆತು ಎಲ್ಲೆಲ್ಲೋ ಹುಡುಕಾಡುವುದೇ ಅಜ್ಞಾನ. ಮನುಷ್ಯನಿಗೆ ಸ್ಥೂಲ, ಸೂಕ್ಷ್ಮ, ಕಾರಣ ಎಂಬ ತನುತ್ರಯಗಳಿವೆ. ಇಂಥ ಶರೀರಕ್ಕೆ ಅಣವ ಮಲ, ಮಾಯಾ ಮಲ, ಕಾರ್ಮಿಕ ಮಲ ಎಂಬ ಮಲತ್ರಯ ಅಂಟಿಕೊಂಡಿರುತ್ತವೆ. ಲಿಂಗದೀಕ್ಷೆಯಿಂದ ಇವುಗಳು ದೂರವಾಗುವುದು. ವೇದಾ ದೀಕ್ಷೆ, ಮಂತ್ರ ದೀಕ್ಷೆ, ಕ್ರಿಯಾ ದೀಕ್ಷೆಯ ಮೂಲಕ ಗುರುವಿನಿಂದ ಭಕ್ತರು ಲಿಂಗವನ್ನು ಪಡೆದುಕೊಳ್ಳುತ್ತಾರೆ.

ಲಿಂಗ ಧರಿಸಿದವರಿಗೆ ಪಂಚ ಸೂತಕಗಳಿಲ್ಲ. ಅವರು ಸದಾ ಪವಿತ್ರರು. ಅದಕ್ಕಾಗಿ ಬಸವಾದಿ ಶರಣರು ಲಿಂಗವ ಪೂಜಿಸಿ ಲಿಂಗವೇ ತಾವಾದರೂ…

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT