ಸೋಮವಾರ, ಅಕ್ಟೋಬರ್ 18, 2021
25 °C

ವಚನಾಮೃತ: ಮಾಯೆಗೆ ಮಾರು ಹೋಗದಿರೋಣ

ಡಾ.ಅಲ್ಲಮಪ್ರಭು ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

––––––

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ

ಮೋಹಕ್ಕೆ ಮಗುವಾಗಿ ಹುಟ್ಟಿದಳು ಮಾಯೆ

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ

ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ

ಈ ಮಾಯೆಯ ಕಳೆವಡೆ ಎನ್ನಳವಲ್ಲ

ನೀವೆ ಬಲ್ಲಿರಿ ಕೂಡಲಸಂಗಮದೇವಾ!

ಮಾಯೆ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ ಹಲವು ವಿಧಗಳಲ್ಲಿ ಕಾಣಿಸಿಕೊಂಡು ಆತನ ಸಾಧನೆಗೆ ಅಡ್ಡಿಪಡಿಸುತ್ತದೆ. ಇಲ್ಲಿ ಬಸವಣ್ಣನವರು ಸ್ತ್ರೀಯು ಯಾವ ರೀತಿಯಾಗಿ ಮನುಷ್ಯನಿಗೆ ಮಾಯೆಯಾಗಿದ್ದಾಳೆ ಎನ್ನುವುದರ ಕುರಿತು ವಿವರಿಸಿದ್ದಾರೆ. ಮಾನವನ ಜನನಕ್ಕೆ ತಾಯಿಯಾಗಿ ಮಾಯೆಯಾದರೆ, ಮಗಳಾಗಿ ಹುಟ್ಟುವ ಮುಖಾಂತರ ಮೋಹವಾಗಿ ಮಾಯೆಯಾಗುತ್ತಾಳೆ. ಪುರುಷನ ಜೊತೆ ಕೂಡುವುದರ ಮುಖಾಂತರ ಮಾಯೆಯಾಗಿ ಕಾಡುತ್ತಾಳೆ. ಮನುಷ್ಯನ ಜೀವನದ ಪ್ರತಿಯೊಂದು ಸಂದರ್ಭದಲ್ಲಿ ಸ್ತ್ರೀಯು ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ, ಪತ್ನಿಯಾಗಿ ಇರುತ್ತಾಳೆ. ಅವಳನ್ನು ಮಾಯೆಯ ರೂಪದಲ್ಲಿ ನೋಡದೆ ಸಾಕ್ಷಾತ್ ದೇವತೆಯ ರೂಪದಲ್ಲಿ ನೋಡಿದಾಗ ಆತನ ಜೀವನ ಸಾರ್ಥಕವಾಗುತ್ತದೆ. ಮಹಾತ್ಮರಿಗೆ ಮಾತ್ರ ಸ್ತ್ರೀಯನ್ನು ಸದಾಕಾಲ ದೇವತೆಯ ಸ್ವರೂಪದಲ್ಲಿ ಕಾಣುವ ಗುಣ ಇರುತ್ತದೆ. ಹುಲುಮಾನವರಿಗೆ ಅದು ಅಸಾಧ್ಯದ ಮಾತು ಎನ್ನುವುದು ಈ ಮೇಲಿನ ವಚನದ ತಾತ್ಪರ್ಯವಾಗಿದೆ. ಹೀಗಾಗಿ, ಹೆಣ್ಣನ್ನು ಗೌರವದಿಂದ ಕಂಡು ಮಹಾತ್ಮರಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು