ಸೋಮವಾರ, ಡಿಸೆಂಬರ್ 6, 2021
27 °C
ವಚನಾಮೃತ

ಭಕ್ತಿ ಪಂಜರದಲ್ಲಿದ್ದರೆ ಕಾಯುವ ಭಗವಂತ

ಡಾ.ಅಲ್ಲಮಪ್ರಭು ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ//ಸಲಹುತ್ತ ಶಿವಶಿವ ಎಂದೋದಿಸಯ್ಯ//ಭಕ್ತಿ ಎಂಬ ಪಂಜರದೊಳಗಿಕ್ಕಿ//ಸಲಹು ಕೂಡಲ ಸಂಗಮದೇವಾ...

ಮಾನವರು ವಾಸಿಸುವ ಈ ಜಗತ್ತನ್ನು ಬಸವಣ್ಣನವರು ಅರಣ್ಯಕ್ಕೆ ಹೋಲಿಸಿದ್ದಾರೆ. ತಮ್ಮನ್ನು ತಾವು ಗಿಳಿಗೆ ಹೋಲಿಸಿಕೊಂಡಿದ್ದಾರೆ. ತಾನು ಸದಾಕಾಲ ಶಿವನ ನಾಮಸ್ಮರಣೆ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಭಕ್ತಿ ಎಂಬ ಪಂಜರದೊಳಗೆ ಇರಿಸಿ ತನ್ನನ್ನು ಕಾಯುವಂತೆ ಹಂಬಲಿಸಿದ್ದಾರೆ. ಭಗವಂತನನ್ನು ಸದಾಕಾಲ ನಾವು ಸ್ಮರಿಸಬೇಕಾದರೆ ನಮ್ಮಲ್ಲಿ ಭಕ್ತಿಯು ಅತ್ಯವಶ್ಯವಾಗಿ ಬೇಕಾಗುತ್ತದೆ.

ಹೀಗೆ ಭಕ್ತಿ ಎಂಬ ಪಂಜರದೊಳಗೆ ಇದ್ದರೆ ದೇವರು ನಮ್ಮನ್ನು ಎಲ್ಲ ಕಾಲದಲ್ಲೂ ರಕ್ಷಿಸುತ್ತಾನೆ ಎನ್ನುವುದು ಅವರ ವಚನದ ಸಾರ. ಇದನ್ನು ನಾವೆಲ್ಲರೂ  ಪಾಲಿಸೋಣ. ಆ ಭಗವಂತ ನೀಡುವ ಸುರಕ್ಷೆಯ ನೆರಳಲ್ಲಿರೋಣ. ಅದಕ್ಕಾಗಿ ಭಗವಂತನ ನಾಮಸ್ಮರಣೆ ಮಾಡೋಣ. ಇದರಿಂದ ಒಳಿತಲ್ಲದೆ ಮತ್ತೇನೂ ಆಗುವುದಿಲ್ಲ. ಭಕ್ತಿಯಿಂದ ಕಷ್ಟಗಳು ದೂರಾಗುತ್ತವೆ.

(ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.