ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಭಗವಂತನ ಕರುಣೆಯೆಂದೇ ಭಾವಿಸಿ

Last Updated 17 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕೆಸರಲ್ಲಿ ಬಿದ್ದ ಬಡಪಶುವಿನಂತೆ

ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೆನಯ್ಯಾ!

ಆರಯ್ವರಿಲ್ಲ-ಅಕಟಕಟ! ಪಶುವೆಂದೆನ್ನ

ಕೂಡಲಸಂಗಮದೇವ ಕೊಂಬ ಹಿಡಿದೆತ್ತವನ್ನಕ್ಕ

ಮನುಷ್ಯನ ಜೀವನದ ಉದ್ದೇಶವು ಭಗವಂತನ ಕೃಪೆಯ ಕುರಿತಾಗಿಯೆ ಇರಬೇಕು. ತನ್ನ ಸಂಸಾರದ ಸುಖ–ದುಃಖಗಳಲ್ಲಿ ತಲ್ಲೀನನಾದ ಮಾನವನು ಜೀವನದ ಉದ್ದೇಶವನ್ನೇ ಮರೆತಿದ್ದಾನೆ. ಇದಕ್ಕಾಗಿ ಬಸವಣ್ಣನವರು ಕೆಸರಿನಲ್ಲಿ ಬಿದ್ದ ಪಶುವಿಗೆ ಹೋಲಿಸಿದ್ದಾರೆ. ಸಂಸಾರವೆಂಬ ಕೆಸರಿನಲ್ಲಿ ಬಿದ್ದಿರುವ ನಾನು ಪ್ರತಿ ಹಂತದಲ್ಲಿಯೂ ಮುಳುಗುತ್ತಿದ್ದೇನೆ. ಮೇಲುತ್ತುವವರಿಲ್ಲದೆ ಮತ್ತೆ ಮತ್ತೆ ಆಳಕ್ಕೆ ಇಳಿಯುತ್ತಿದ್ದೇನೆ. ಮುಳುಗಿ ಹೋಗುತ್ತಿರುವ ನನ್ನನ್ನು, ನಿನ್ನ ಕೃಪಾಕಟಾಕ್ಷದಿಂದ ಬದುಕಿಸು ಎಂದು ಭಗವಂತನಲ್ಲಿ ತಮ್ಮ ಭಕ್ತಿಯನ್ನು ತೋರಿಸಿಕೊಳ್ಳುತ್ತಿದ್ದಾರೆ. ಸಂಸಾರ ಸಾಗರದಲ್ಲಿರುವ ನಮಗೆ ಸುಖ, ದುಃಖಗಳು ಬಂದಾಗ, ನಾವು ಹಿಗ್ಗದೆ, ಕುಗ್ಗದೆ ಎಲ್ಲವೂ ಭಗವಂತನ ಕರುಣೆಯಿಂದಲೆ ಪ್ರಾಪ್ತವಾದಂಥವು ಎಂಬ ಮನಸ್ಥಿತಿ ಉಳ್ಳವರಾದರೆ ಸದಾ ಕಾಲ ಸಂತೋಷದಿಂದ ಇರಬಹುದು ಎನ್ನುವುದನ್ನು ವಚನದ ಮೂಲಕ ತಿಳಿಸಿದ್ದಾರೆ. ಅದನ್ನೂ ನಾವೂ ಪಾಲಿಸೋಣ.

- ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT