ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಪರೀಕ್ಷೆಯಲ್ಲಿ ನಾವು ಗೆಲ್ಲಬೇಕು: ಡಾ.ಅಲ್ಲಮಪ್ರಭು ಸ್ವಾಮೀಜಿ

Last Updated 2 ಜೂನ್ 2021, 7:39 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––

ನಚ್ಚಿದನೆಂದಡೆ ಮಚ್ಚಿದನೆಂದಡೆ ಸಲೆ

ಮಾರುವೋದೆನೆಂದಡೆ

ತನುವನಲ್ಲಾಡಿಸಿ ನೋಡುವೆ ನೀನು

ಮನವನಲ್ಲಾಡಿಸಿ ನೋಡುವೆ ನೀನು

ಧನವನಲ್ಲಾಡಿಸಿ ನೋಡುವೆ ನೀನು

ಇವೆಲ್ಲಕ್ಕಂಜದಿದ್ದಡೆ ಭಕ್ತಿ ಕಂಪಿತ ನಮ್ಮ

ಕೂಡಲಸಂಗಮದೇವ

ನಮ್ಮ ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ನಾವು ಕಷ್ಟಗಳಿಗೆ ಒಳಗಾಗುತ್ತೇವೆ. ಅಂತಹ ಸಂದರ್ಭದಲ್ಲಿ ಮಾತ್ರ ನಮಗೆ ಭಗವಂತನ ನೆನಪಾಗುತ್ತದೆ. ಸದಾಕಾಲ ಭಗವಂತನ ಆರಾಧನೆ ಮಾಡಬೇಕು. ಕಷ್ಟ–ಸುಖ ಎನ್ನುವುದು ನೆಪ ಮಾತ್ರ. ಈ ಭವಬಂಧನದಿಂದ ಅಂತಿಮ ಹಂತದ ಗುರಿ(ಮೋಕ್ಷ)ಯನ್ನು ಭಗವಂತನ ಆರಾಧನೆಯಿಂದ ಮಾತ್ರ ಸಾಧಿಸಬಹುದು. ಭಕ್ತನಾದವನು ಭಗವಂತನನ್ನು ನಂಬಿ ಆರಾಧಿಸಲು ಪ್ರಾರಂಭಿಸಿದ ಮೇಲೆ ಎಂತಹ ಕಷ್ಟ ಕಾರ್ಪಣ್ಯಗಳೆ ಬರಲಿ ದೇವರ ಮೇಲಿನ ನಂಬುಗೆಯನ್ನು ಬಿಡಬಾರದು. ಭಗವಂತನು ಭಕ್ತನನ್ನು ಹಲವು ರೀತಿಯಲ್ಲಿ ಪರೀಕ್ಷಿಸುತ್ತಾನೆ. ದೈಹಿಕ ರೋಗ ಬಾಧೆಗಳನ್ನು ಕೊಟ್ಟು ನೋಡುತ್ತಾನೆ. ಮಾನಸಿಕವಾಗಿ ಅಧೀರನನ್ನಾಗಿಸಲು ಪ್ರಯತ್ನಿಸುತ್ತಾನೆ. ನಮ್ಮಲ್ಲಿರುವ ಆಸ್ತಿ, ಅಂತಸ್ತು, ಐಶ್ವರ್ಯವನ್ನು ಇಲ್ಲವಾಗಿಸುತ್ತಾನೆ. ಆಗಲೂ ನಾವು ಅವನ ಆರಾಧನೆ ಬಿಡದಿದ್ದರೆ, ಭಗವಂತನೆ ನಮಗೆ ಶರಣಾಗುತ್ತಾನೆ ಎನ್ನುವುದು ಇಲ್ಲಿನ ವಚನದ ಸಾರವಾಗಿದೆ. ಇದನ್ನು ನಾವು ಪಾಲಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT