ಬುಧವಾರ, ಡಿಸೆಂಬರ್ 8, 2021
19 °C

ವಚನಾಮೃತ: ಜ್ಞಾನ ಜ್ಯೋತಿಯಿಂದ ಅಜ್ಞಾನ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮನುಷ್ಯ ತನ್ನ ಪರಿಸರದ ಸುತ್ತಲೂ ಸಂವೇದನಾಶೀಲ ಬದುಕನ್ನು ಕಟ್ಟಿಕೊಳ್ಳುವುದು ಅವಶ್ಯ. ಆದರೆ, ಆತನ ಗ್ರಹಿಕೆ ಉತ್ತಮ ನಡೆ, ಆಲೋಚನೆಗಳನ್ನು ಹೊಂದಿದಾಗ ಅದು ಸಾಧ್ಯವಾಗುತ್ತದೆ. ಮನುಷ್ಯನಲ್ಲಿ ಆಧ್ಯಾತ್ಮ ಚಿಂತನೆ ಮೂಡಿದಾಗ ಕೆಟ್ಟ ಆಲೋಚನೆಗಳು ದೂರವಾಗುತ್ತವೆ. ಅದಕ್ಕೆ ಸಿದ್ಧಲಿಂಗೇಶ್ವರರು ತಮ್ಮ ಜ್ಞಾನ ಜ್ಯೋತಿಯ ಮೂಲಕ ಎಲ್ಲವನ್ನು ಪಡೆಯಬಹುದು ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ‘ಸುಧೆಯೊಳಗೆ ವಿಷವುಂಟೆ ? ಮಧುರದೊಳಗೆ ಕಹಿಯುಂಟೆ? ದಿನಮಣಿಯೊಳಗೆ ಕಪ್ಪುಂಟೆ? ಬೆಳದಿಂಗಳೊಳಗೆ ಕಿಚ್ಚುಂಟೆ? ಅಮೃತ ಸಾಗರದೊಳಗೆ ಬೇವಿನ ಬಿಂದು ವುಂಟೆ? ಮಹಾಜ್ಞಾನ ಸ್ವರೂಪರಪ್ಪ ಶರಣರೇ ಲಿಂಗವೆಂದರಿದ ಮಹಾತ್ಮಂಗೆ ಸಂಕಲ್ಪ ಭ್ರಮೆಯುಂಟೆ? ಅದೇತರ ವಿಶ್ವಾಸ? ಸುಡುಸುಡು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’ ಈ ವಚನವು ಸತ್ಯ ದೊಳಗಿನ ಪ್ರಸನ್ನತೆಯನ್ನು ಅನಾವರಣಗೊಳಿಸುತ್ತದೆ. ಭೇದಭಾವ ಮರೆತರೆ ಎಲ್ಲವೂ ಹೊಸಚಿಗುರು. ಅಲ್ಲದೆ ಸುಧೆ, ಜೇನು, ದೀಪ, ಅಮೃತ, ಸಮಾನ ಜ್ಞಾನ, ಇದರಲ್ಲಿ ಹರಳು ಹುಡುಕುವುದು ಸಲ್ಲ. ಮುಖ್ಯವಾಗಿ ವಿಶ್ವಾಸ ಅನ್ನುವಂಥದ್ದು ಬಹಳ ಮುಖ್ಯ. ‘ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ?’ ಹೂಗಳ ಗುಚ್ಚು ಸುವಾಸನೆ ಕೊಡಬೇಕಾದರೆ, ಚುಂಬನ ವಾಗಬೇಕಾದರೆ, ಪ್ರೇಮ ಸಾಗರದಲ್ಲಿ ತೇಲಬೇಕು. ದಿಗ್ಬಂಧನದ ಮನಸ್ಸು ಇಲ್ಲವಾಗಿ ಹಿಮಾಲಯ ಪರ್ವತ ವಾಗಿ ಗೋಚರಿಸಬೇಕು. ಅಂದ ಗುಣ, ಲಿಂಗ ಗುಣ ತಾಳಬೇಕು. ಆಗ ಅನುಪಮ ಸ್ನೇಹ ನಿರ್ಮಾಣವಾಗಿ ಲೋಕ ಭ್ರಾಂತಿ ಮರೆಯಾಗುತ್ತದೆ.
– ಹಿರಿಶಾಂತವೀರ ಸ್ವಾಮೀಜಿ, ಶಾಖಾ ಗವಿಮಠ, ಹೂವಿನಹಡಗಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.