ಜೀವನಕ್ಕೆ ಅನೇಕರು ವ್ಯಾಖ್ಯಾನ ಮಾಡಿದರು. ಆದರೆ, ಅಕ್ಕಮಹಾದೇವಿ ಜೀವನ ಅಂದ್ರೆ, ಭಾವನೆಯೇ ನನಗೆ ಜೀವನ ಎಂದಳು. ಭಾವನೆ ಜೀವನದ ಮೌಲ್ಯ. ಭಾವನೆ ಕಳೆದುಕೊಂಡರೆ ಮನುಷ್ಯ ಬದುಕಲು ಆಗಲ್ಲ. ಭಾವನೆಗೆ ಬೆಲೆ ಕಟ್ಟಲಾಗದು. ಮನುಷ್ಯ ಜೀವನದೊಳಗೆ ಭಾವನೆಗಳಿಗೆ ಬೆಲೆ ಕೊಡಬೇಕು. ಮಹಾದೇವಿ ಭಾವನೆ ಬಹಳ ದೊಡ್ಡದು. ಭಾವನೆ ಮೇಲೆ ಜೀವನ ಕಟ್ಟಿಕೊಂಡಳು. ಬದುಕಿನ ಭಾವನೆಗೆ ಎಂದೂ ಪ್ರಶ್ನೆ ಹಾಕಿಕೊಳ್ಳಲಿಲ್ಲ. ಭಾವನಾತ್ಮಕವಾಗಿ ಬದುಕು ಕಟ್ಟಿದಳು.

ಬಸವಣ್ಣ ಕೂಡ ಹಾಗೆ. ಎಲ್ಲರ ಭಾವನೆಗಳಿಗೆ ಸ್ಪಂದಿಸಿ ಗೌರವಿಸಿದರು. ಜನರ ದುಃಖ ಕೇಳುವುದಕ್ಕಾಗಿಯೇ ಬಸವಣ್ಣ ಪರುಷ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಅನುಭವ ಮಂಟಪದಲ್ಲಿ ಎಲ್ಲ ಶರಣರೊಂದಿಗೆ ಮಾತನಾಡುತ, ಅವರ ಕಾಯಕದ ಕುರಿತು ವಿಚಾರಿಸುತ್ತಿದ್ದರು. ಬಸವಣ್ಣ 12 ಸಾವಿರ ವೇಶ್ಯೆಯರ ಭಾವನೆಗಳನ್ನು ಗೌರವಿಸಿ, ಮನಃಪರಿವರ್ತಿಸಿ ಅವರನ್ನು ಶರಣೆಯರಾಗಿ ಮಾಡಿದರು. ಭಾವನೆಗಳಿಗೆ ಬೆಲೆ ಕೊಟ್ಟು, ಅವರನ್ನು ಗಟ್ಟಿಗೊಳಿಸಿದರು. ಎಲ್ಲರಿಗೂ ಬದುಕಲು ಅವಕಾಶ ಕೊಟ್ಟಿರುವುದು ಶರಣ ಧರ್ಮ. ಗುಡಿ– ಗುಂಡಾರ, ತೀರ್ಥ ಕ್ಷೇತ್ರಗಳಿಗೆ ಹೋಗುವುದಲ್ಲ. ಬಸವಣ್ಣನವರ ನಡೆ ನುಡಿ, ಸಮಾನತೆ ತತ್ವನಿಷ್ಠೆ, ಕಾಯಕಪ್ರಜ್ಞೆ, ರಾಷ್ಟ್ರಪ್ರಜ್ಞೆ, ನೆಲ–ಜಲ ಸಂರಕ್ಷಣೆ, ಅನ್ನ ಅರಿವೇ ವಿಚಾರಗಳು ಬಹಳ ಶ್ರೇಷ್ಠವಾದುದು. ವಚನ, ರಗಳೆ, ಕಾವ್ಯ, ಜನಪದರಲ್ಲಿ ಬಸವಣ್ಣನ ಕುರಿತು ಬಂದಷ್ಟು ಗ್ರಂಥಗಳು ಯಾವ ಮಹಾತ್ಮರ ಕುರಿತು ಬಂದಿಲ್ಲ. ನೊಂದವರಿಗೆ, ದುಖಿತರಿಗೆ, ದಮನಿತರಿಗೆ, ಸಮಾಜದ ಕಟ್ಟಕಡೆಯವರಿಗೆ ಜ್ಯೋತಿಯಾಗಿ ಬೆಳಕಾದವರು ಬಸವಣ್ಣ.

ವಚನಗಳು ನಮಗೆ ದಾರಿದೀಪ. ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಧರ್ಮ ಉಳಿಯಬೇಕು. ಅದರ ತತ್ವ ಬೆಳೆಸಬೇಕು. ಪ್ರಭು ಪರಂಪರೆಯಲ್ಲಿ ಪ್ರಜಾಪ್ರಭುತ್ವ ಕಟ್ಟಿದ ಬಸವಣ್ಣ ಹಾಗೂ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಇರುತ್ತವೆ. ಮಾನವ ಹಕ್ಕುಗಳ ಪ್ರತಿಪಾದಕರು ಲಿಂಗಾಯತರು. ಅಂಥ ಇತಿಹಾಸ ಈ ಧರ್ಮಕ್ಕಿದೆ.–ನಿಜಗುಣಪ್ರಭು ಸ್ವಾಮೀಜಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-33-303418691

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.