ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಜಿಲ್ಲೆಯ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏಪ್ರಿಲ್ 11ರಿಂದ 14ರ ವರೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ‘ಅಂಬೇಡ್ಕರ್ ಹಬ್ಬ - 2026’ ಎರಡನೇ ಆವೃತ್ತಿ ನಡೆಯಲಿದೆ ಎಂದು ಅಂಬೇಡ್ಕರ್ ಹಬ್ಬದ ಸಂಚಾಲನ ಸಮಿತಿ ಸದಸ್ಯ ಡಾ. ಬಾಬುರಾಜೆಂದ್ರ ನಾಯಿಕ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಅಂಬೇಡ್ಕರ್ ಹಬ್ಬದಲ್ಲಿ ಬಸವಣ್ಣ, ಜ್ಯೋತಿಬಾಫುಲೆ, ಫಾತಿಮಾ ಶೇಖ್, ಬಾಬಾ ಸಾಹೇಬ ಅಂಬೇಡ್ಕರ್ ಚಿಂತನೆಗಳ ಸಮಾಗಮಾವಾಗಲಿದೆ ಎಂದರು.

ಅಂಬೇಡ್ಕರ್ ಹಬ್ಬದ ಸಂಚಾಲನ ಸಮಿತಿ ಸದಸ್ಯರಾದ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ಅಂಬೇಡ್ಕರ್ ಅವರ 135 ನೇ ಜಯಂತ್ಯೋತ್ಸವ ಅಂಗವಾಗಿ ಸಮಾನತೆಯ ಅರಿವಿನ ಹಬ್ಬ ‘ಅಂಬೇಡ್ಕರ್ ಹಬ್ಬ’ ಆಚರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಂವಿಧಾನ ಆಶಯಗಳು ಎಲ್ಲ ವರ್ಗಗಳ ಜೊತೆಗೆ ವಿದ್ಯಾರ್ಥಿ, ಯುವಜನರಿಗೆ ಮುಖ್ಯವಾಗಿ ತಲುಪಿಸಬೇಕಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಸಮಾನತೆಗಾಗಿ ಹೋರಾಡಿದ ಮಹಾಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಈ ಕಾಲಘಟ್ಟದಲ್ಲಿ ಅಂಬೇಡ್ಕರ್ ಹಬ್ಬದ ಮೂಲಕ ನಮ್ಮ ಮೂಲ ಮಹಾಪುರುಷರ ಜಯಂತಿಯನ್ನು ಎಲ್ಲ ಜನಾಂಗದವರು ಸೇರಿ ಒಟ್ಟಾಗಿ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗುತ್ತಿದೆ ಎಂದರು.

ಸಂಚಾಲನ ಸಮಿತಿ ಸದಸ್ಯ ಡಾ. ಬಿ.ಎಂ.ಬಿರಾದಾರ ಮಾತನಾಡಿ, ಅಂಬೇಡ್ಕರ್ ಹಬ್ಬವು ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜನ್ಮದಿನಾಚರಣೆ ಆಗಿರುವ ಏಪ್ರಿಲ್ 11 ರಂದು ಆರಂಭವಾಗಿ, ಏಪ್ರಿಲ್ 14 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಭವ್ಯವಾಗಿ ಆಚರಣೆ ಮಾಡುವ ಮೂಲಕ ಎರಡನೇ ಆವೃತ್ತಿಯ ಅಂಬೇಡ್ಕರ್ ಹಬ್ಬ ಅರ್ಥಪೂರ್ಣವಾಗಿ ಮುಗಿಯಲಿದೆ ಎಂದರು.

ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಶ್ರೀನಾಥ ಪೂಜಾರಿ, ಸಂಚಾಲನ ಸಮಿತಿ ಸದಸ್ಯರಾದ ಎಚ್. ಎಂ. ಬಾಗಬಾನ್, ಪ್ರಭು ಮಲ್ಲಿಕಾರ್ಜುನ ಮಠ, ಫಯಾಜ್ ಕಲಾದಗಿ, ದೀಪಾ ತಟ್ಟಿಮನಿ, ಮೋಹನ್ ಕಟ್ಟಿಮನಿ, ಬಾಲಾಜಿ ಕಾಂಬಳೆ, ಮಹಾದೇವ ಚಲವಾದಿ, ಹುಚ್ಚಪ್ಪ ಬಾವಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-26-164061896

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.