ವಿಜಯಪುರ: ನಗರದ ಕಂದಗಲ್ಹನುಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19 ಹಾಗೂ 20ರಂದು ಜಿಲ್ಲಾಡಳಿತ ಮತ್ತು ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಉತ್ಸವ–2026 ಅರ್ಥಪೂರ್ಣ ಆಚರಣೆಗೆ ನಿರ್ಧರಿಸಲಾಗಿದೆ’ ಎಂದು ಸಮಾಜ ಸೇವಕ ವಿ.ಸಿ. ನಾಗಠಾಣ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ‘19ರಂದು ಬೆಳಿಗ್ಗೆ ಮಕ್ಕಳಿಂದ ವಚನ ಕಂಠಪಾಠ, ಬಸವಾದಿ ಶರಣರ ಕುರಿತಾದ ಮಕ್ಕಳ ಕವನಗೋಷ್ಠಿ ನಡೆಯಲಿದೆ. ನಂತರ ಯುವ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6ರಿಂದ 9.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ‘ಭಗವಂತನ ಮರಣ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ’ ಎಂದರು.

‘20ರಂದು ಬಸವನ ಬಾಗೇವಾಡಿಯಿಂದ ಓಟದ ಮೂಲಕ ಬಸವ ಜ್ಯೋತಿಯನ್ನು ವಿಜಯಪುರಕ್ಕೆ ತರಲಾಗುವುದು. ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಯೋಗ ಹಾಗೂ ಮಲ್ಲಗಂಬ ಪ್ರದರ್ಶನ ನಡೆಯಲಿದೆ. ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ದಕ್ಷಿಣ ಭಾರತದ ವಿವಿಧ ಕವಿಗಳು ಕವನ ವಾಚನ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಮಧ್ಯಾಹ್ನ 3 ಗಂಟೆಗೆ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಸಿದ್ದೇಶ್ವರ ದೇವಾಲಯದಿಂದ ಮೆರವಣಿಗೆ ನಡೆಯಲಿದ್ದು, ರಂಗಮಂದಿರದಕ್ಕೆ ತಲುಪಲಿದೆ. ಸಂಜೆ ಜಿಲ್ಲಾಡಳಿತ ಹಾಗೂ ಉತ್ಸವ ಸಮಿತಿ ಸಹಯೋಗದಲ್ಲಿ ಬಸವ ಜಯಂತಿ ಆಚರಣೆ ನಡೆಯಲಿದೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದರು.

ಸಂ.ಗು. ಸಜ್ಜನ, ಘನಶ್ಯಾಂ ತೋಸ್ನಿವಾಲ್, ಪ್ರಭುಗೌಡ ಪಾಟೀಲ, ಜೆ.ಎಸ್. ಪಾಟೀಲ, ಬಸನಗೌಡ ಹರನಾಳ, ಎಸ್.ಎಚ್. ನಾಡಗೌಡ, ಡಾ.ರವಿಕುಮಾರ ಬಿರಾದಾರ, ಜಂಬುನಾಥ ಕಂಚ್ಯಾಣಿ, ವಿದ್ಯಾರಾಣಿ ತುಂಗಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-26-531000955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.