ಹೊರ್ತಿ: ‘ವಿಶ್ವಕ್ಕೆ ಬುದ್ಧರ ಅಹಿಂಶಾ ತತ್ವ, ಬೋಧನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ’ ಎಂದು ಚಿತ್ರದುರ್ಗದ ಸೌಹಾರ್ದ ಪೀಠದ ವಿಜಯಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಲೋಣಿ ಬಿ.ಕೆ ಗ್ರಾಮದಲ್ಲಿರುವ ಮಾಹೇರ್ ಅನಾಥ ಆಶ್ರಮದಲ್ಲಿ ಶುಕ್ರವಾರ ಆಯೋಜಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುದ್ಧರ ಜೀವನ ಹಾಗೂ ಅವರ ಉಪದೇಶ ಮತ್ತು ಶಾಂತಿ ಸಂದೇಶಗಳು ಈ ಜಗದ ಬೆಳಕು. ನಾವೆಲ್ಲರೂ ಶಾಂತಿ ಸೌಹಾರ್ದದಿಂದ ಬಾಳಬೇಕಾದರೆ ನಮ್ಮಲಿರುವ ಸ್ವಾರ್ಥ ಜೀವನದ ಆಸೆಗಳನ್ನು ಸುಟ್ಟು ಹಾಕಿ ನಿಸ್ವಾರ್ಥರಾಗಿ ಬಾಳಬೇಕು’ ಎಂದು ಹೇಳಿದರು.

ಈ ಮಾಹೇರ್ ಸಂಸ್ಥೆಯ ಸಂಸ್ಥಾಪಕಿಯವರಾದ ಸಿಸ್ಟರ್ ಲೂಸಿ ಅವರು ಇಡೀ ದೇಶದಾದ್ಯಂತ 73 ಆಶ್ರಮಗಳನ್ನು ಸ್ಥಾಪಿಸಿ ಬೀದಿಯಲ್ಲಿ ಅನಾಥರಾಗಿ ಅಲೆದಾಡುವ ಸಾವಿರಾರು ಅನಾಥರಿಗೆ ಆಶ್ರಯ ನೀಡಿ, ಅವರ ಬಾಳಿಗೆ ಬುದ್ಧರಂತೆ ಬೆಳಕಾಗಿದ್ದಾರೆ. ಇಂತಹ ಸಿಸ್ಟರ್ ಲೂಸಿ ಅವರ ಸೇವಾ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ’ ಎಂದು ಈ ಮಾಹೇರ್ ಸಂಸ್ಥೆಗೆ ಭೂದಾನ ಮಾಡಿದ ಗುರುಲಿಂಗಪ್ಪ ಚನ್ನವೀರಪ್ಪ ಮಸಳಿ ಹೇಳಿದರು.

ಆನಂದ ಮುಳಸಾವಳಗಿ ಮಾತನಾಡಿರು. ಭೂದಾನಿ ಗುರುಲಿಂಗಪ್ಪ ಚನ್ನವೀರಪ್ಪ ಮಸಳಿ ಹಾಗೂ ಕರ್ನಾಟಕದ ಮಾಹೇರ್ ಸಂಸ್ಥೆಯ ಮೇಲ್ವಿಚಾರಕಿ ಸಹೋದರಿ ಜಯಶ್ರೀ, ಆನಂದ ಮುಳಸಾವಳಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-26-1618660278

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.