ಹೊರ್ತಿ: ‘ಮಾನವನ ಜೀವನದಲ್ಲಿ ಗುರಿ ತಲುಪಲು ಶ್ರದ್ಧೆ ಅತ್ಯಗತ್ಯ. ಯಾರಲ್ಲಿ ಶ್ರದ್ಧೆ ಇರುತ್ತದೆಯೋ ಅವರು ಜೀವನದ ಪ್ರತಿ ಹಂತದಲ್ಲೂ ವಿಜಯಶಾಲಿಗಳಾಗುತ್ತಾರೆ’ ಎಂದು ವಿಜಯಪುರದ ಕೃಪಾಮಯಿ ಶಾರದಾಶ್ರಮದ ಕೈವಲ್ಯಮಯಿ ಮಾತಾಜಿ ಅಭಿಮತ ವ್ಯಕ್ತಪಡಿಸಿದರು.

ಸಮೀಪದ ವಿಜಯಪುರ ತಾಲ್ಲೂಕಿನ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟೀರ ಟ್ರಸ್ಟ್ ಹಾಗೂ ಭಾರತೀಯ ಸ್ವರಾಜ್ಯ ಸಂಸ್ಥೆ ಮತ್ತು ಸಂಡೂರಿನ ಶ್ರೀ ಶೈಲೇಶ್ವರ ವಿದ್ಯಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಒಂದು ತಿಂಗಳ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಮನವಳ್ಳಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ರಾಮರಾಜ್ಯ ಕಲಾ ಮೇಳದ ಅಧ್ಯಕ್ಷ ಶ್ರೀಕೃಷ್ಣ ಸಂಪಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರವನ್ನು 25 ವರ್ಷಗಳಿಂದಲೂ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುರು ಮನೆತನದ ಹಿರಿಯ ರಮೇಶ ಕನ್ನೂರ ಮತ್ತು ಭಾರತೀಯ ಸುರಾಜ್ಯ ಸಂಸ್ಥೆಯ ಗೌರವಾಧ್ಯಕ್ಷ ಬಿ.ಬಿ.ಪೂಜಾರ ಮಾತನಾಡಿದರು. ಈ ವೇಳೆ, ಅಜಿತ ಕನ್ನೂರ, ಶ್ರೀನಿವಾಸ ಕುಲಕರ್ಣಿ, ಸತೀಶ ತಿಕೋಟಿ, ವಿ. ಡಿ.ಪಾಟೀಲ, ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-26-564961778

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.