ಇಂಡಿ: ಮಠಗಳು ಈ ನಾಡಿನ ಧಾರ್ಮಿಕ, ಸಾಂಸ್ಕೃತಿಕ, ಪರಂಪರೆಯ ಕೇಂದ್ರಗಳು. ಸಮಾಜವು ಸನ್ಮಾರ್ಗದಲ್ಲಿ ಸಾಗಲು ಮಠಗಳು ದಾರಿದೀಪವಾಗಿ ಕೆಲಸ ಮಾಡುತ್ತವೆ ಎಂದು ಅಗರಖೇಡ ವಿರಕ್ತಮಠದ ಪ್ರಭುಲಿಂಗ ಶ್ರೀಗಳು ಹೇಳಿದರು.

ಅವರು ಗುರುವಾರ ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ನಡೆದ ಶ್ರೀ ಶಂಕರಲಿಂಗ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಳಕಾಪುರ ಮತ್ತು ಆಳೂರದ ಸಿದ್ದಾರೂಢ ಮಠದ ಶಂಕರಾನಂದ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಆ ದೇವರನ್ನು ಕಾಣಲು ನಮ್ಮಲ್ಲಿ ಅರಿವು ಮೂಡಿಸುವ ಮಠಗಳ ಗುರುಗಳು ಅಗತ್ಯ. ಗುರುವೆಂದರೆ ಕೇವಲ ಶಿಕ್ಷಣ, ಜ್ಞಾನ ನೀಡುವವರಲ್ಲ. ಬದುಕಿಗೆ ಮಾರ್ಗ ತೋರುವವರು. ಅವರು ತೋರುವ ಮಾರ್ಗದಲ್ಲಿ ಸಮಾಜ ಶಾಂತಿ, ನೆಮ್ಮದಿಯಿಂದ ಬಾಳಬೇಕು ಎಂದು ಹೇಳಿದರು.

ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಭೀಮಣ್ಣ ಕವಲಗಿ, ಮದನಕುಮಾರ ಶಿಂದೆ, ಡಾ. ಸಂಗನಬಸು ಬಿರಾದಾರ, ಸಂಗನಗೌಡ ಬಿರಾದಾರ ವೇದಿಕೆ ಮೇಲಿದ್ದರು.

ಇದೇ ವೇಳೆ ಜಾತ್ರಾ ಮಹೋತ್ಸವ ನಿಮಿತ್ಯ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-26-909108900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.