ವಿಜಯಪುರ (ದೇವನಹಳ್ಳಿ): ಪ್ರಸ್ತುತ ಬದುಕಿನಲ್ಲಿ ಮನುಷ್ಯನನ್ನು ಕಾಡುತ್ತಿರುವ ಒತ್ತಡ, ಉದ್ವೇಗ ಮತ್ತು ಆತಂಕ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸ ಅತ್ಯಂತ ಸಹಕಾರಿ ಎಂದು ಸದ್ಗುರು ಯೋಗಿ ನಾರೇಯಣ ಮಠದ ಪ್ರವಚನಕಾರ ಆನಂದಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಕೃಷ್ಣ ಸತ್ಸಂಗ ಯತೀಂದ್ರ ಸೇವಾ ಟ್ರಸ್ಟ್, ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗದಿಂದ ನಡೆದ ಕೈವಾರ ತಾತಯ್ಯ ಅವರ 28ನೇ ಗುರು ಪಾದುಕಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿಯಮಿತವಾಗಿ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದರಿಂದ ದೇಹದ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬಹುದು. ಮನಸ್ಸಿನಲ್ಲಿಯೇ ದೇವರು ಅಥವಾ ಗುರು ರೂಪ ಕಲ್ಪಿಸಿಕೊಂಡು ಎಲ್ಲ ಉಪಚಾರ ಅರ್ಪಿಸುವುದೇ ಮಾನಸ ಪೂಜೆ ಎಂದರು.

ಮಾನಸ ಪೂಜೆಯಿಂದ ಮನಸ್ಸು ಸ್ಥಿರವಾಗಿ, ಏಕಾಗ್ರತೆ ಸಿದ್ಧಿಸುತ್ತದೆ. ಇದಕ್ಕೆ ಸ್ಥಳ, ಕಾಲದ ಬಂಧನವಿಲ್ಲ. ಉದ್ಯೋಗ, ವ್ಯವಸಾಯ ಅಥವಾ ಪ್ರವಾಸದ ಕಾರಣದಿಂದ ಪೂಜೆ ಮಾಡಲು ಸಮಯ ಸಿಗದವರು ಎಲ್ಲಿದ್ದಲ್ಲೇ ಮಾನಸ ಪೂಜೆ ಮಾಡಬಹುದು ಎಂದು ಹೇಳಿದರು . ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ತಂಡದಿಂದ ಹರಿನಾಮ ಸಂಕೀರ್ತನೆ ಹಾಗೂ ಸಾಮೂಹಿಕವಾಗಿ ಶ್ರೀರಾಮ ಭವ ತಾರಕ ಮಂತ್ರ ಪಠಣ ನಡೆಯಿತು. ಪುರಸಭೆ ಸದಸ್ಯೆ ರಾಧಮ್ಮ ಪ್ರಕಾಶ್, ಧಾರ್ಮಿಕ ಚಿಂತಕ ಎಂ.ಕೇಶವಪ್ಪ, ಸಮಾಜ ಸೇವಕ ಪಿ.ಪ್ರಕಾಶ್, ದೇವಾಲಯದ ಪ್ರಧಾನ ಅರ್ಚಕ ರಘು, ರಮೇಶ್ ಸ್ವಾಮಿ, ಎನ್.ನಾರಾಯಣಸ್ವಾಮಿ, ರಾಮದಾಸ್, ಅನಿತಾ, ರತ್ನಮ್ಮ ವೆಂಕಟೇಶಪ್ಪ, ವಿ.ಎನ್.ವೆಂಕಟೇಶ್ ಇದ್ದರು. ವಿಜಯಪುರ ಪಟ್ಟಣದ ರಂಗನಾಥಸ್ವಾಮಿ ದೇವಾಲಯದಲ್ಲಿ ಕೈವಾರ ತಾತಯ್ಯ ಅವರ ಗುರು ಪಾದುಕಾ ಪೂಜೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-15-2109359717

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.