ಅಲಮೇಲ: ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಅಧ್ಯಾತ್ಮದ ಹಸಿವು ಬೇಕು. ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ. ಆತ್ಮ ಸಂಯಮ ಅಧ್ಯಾತ್ಮದ ಅಡಿಪಾಯ. ಅಧ್ಯಾತ್ಮ ಜ್ಞಾನದಿಂದ ಸೌಜನ್ಯ, ಸಂಸ್ಕೃತಿ, ಸಂವರ್ಧನೆಗೊಳ್ಳುವುದು ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮೋರಟಗಿಯಲ್ಲಿ ಸಿದ್ಧರಾಮೇಶ್ವರ ಮತ್ತು ಕಲ್ಪವೃಕ್ಷ ವಿದ್ಯಾಸಂಸ್ಥೆಯಿಂದ ನಿರ್ಮಿಸಿದ ಶಿವಯೋಗಿ ಸಿದ್ಧರಾಮೇಶ್ವರರ ನೂತನ ದೇವಾಲಯದ ಕಳಸಾರೋಹಣ ಅಂಗವಾಗಿ ಶನಿವಾರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾನವ ಜೀವನ ಉನ್ನತಿಗೆ ಮತ್ತು ಗೆಲುವಿಗೆ ಸಂಸ್ಕೃತಿ ಸದ್ಗುಣಗಳ ಅವಶ್ಯಕತೆಯಿದೆ. ಮಾನವತೆಯಿಂದ ದೈವತ್ವದ ಕಡೆಗೆ ಒಯ್ಯುವ ಮಾರ್ಗವೇ ಸಂಸ್ಕೃತಿ ಎಂದರು.

ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿ, ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದುದು ಬಹಳಷ್ಟಿದೆ. ಮಾನವನ ಮನಸ್ಸು ಬುದ್ಧಿ ಮತ್ತು ಸದ್ವಿಚಾರಗಳು ಸಮೃದ್ಧವಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಮೌಲ್ಯಾಧಾರಿತ ಜೀವನಕ್ಕೆ ಹೆಸರಾದ ಸೊಲ್ಲಾಪುರ ಶಿವಯೋಗಿ ಸಿದ್ಧರಾಮೇಶ್ವರರ ಶ್ರಮ ಶಕ್ತಿಗೆ ಸರಿಸಾಟಿಯಾದುದು ಇನ್ನೊಂದಿಲ್ಲ ಎಂದು ತಿಳಿಸಿದರು.

ನೇತೃತ್ವ ವಹಿಸಿದ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನಲ್ಲಿ ಆತ್ಮ ವಿಶ್ವಾಸ ನಿಶ್ಚಿತ ಗುರಿ ಮತ್ತು ಸಂಯಮ ಇವು ಮೂರು ಯಶಸ್ಸಿನ ಹಾದಿಗೆ ಒಯ್ಯುವ ಪ್ರಮುಖ ಅಂಶಗಳಾಗಿವೆ. ಹೊಸತನದ ಜೊತೆಗೆ ಹಿರಿತನದ ಕಳೆ ಮೇಳೈಸಿದಾಗ ಬದುಕಿಗೆ ಬೆಲೆ, ಬಲ ಬರುತ್ತವೆ. ಪ್ರಗತಿಪರವಾದ ಧೈಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ದಾರಿದೀಪ ಎಂದರು.

ಯಂಕಂಚಿ, ಅಫಜಲಪುರ, ಬಡದಾಳ, ಆಲಮೇಲ ಅರ್ಜುಣಗಿ ಹಿರೇಮಠ, ಕುಮಸಗಿ, ಮಾಗಣಗೇರಿ, ಕಡಕೋಳ, ಗುಂಡಕನಾಳ, ಕನ್ನೊಳ್ಳಿ, ಆತನೂರು ಚಿಣಮಗೇರಿ, ಕುಕನೂರು ಶ್ರೀ ಪಾಲ್ಗೊಂಡಿದ್ದರು. ಸುಂಗಠಾಣಾದ ಸಿದ್ರಾಮಪ್ಪ ಬಿರಾದಾರ ಮತ್ತು ಕಲ್ಪವೃಕ್ಷ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಶರಣಪ್ಪಗೌಡ ವಿ. ಬಿರಾದಾರ. ಸುಮಿತ್ರಾ ಬಿರಾದಾರ ಮತ್ತು ಸಂಗಮ್ಮ ಬಿರಾದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-26-1357170934

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.