ವಿಜಯಪುರ: ಸದ್ಗುರು ಸಮರ್ಥ ರಂಗರಾವ್ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ, ಧ್ಯಾನ ಮಂದಿರ, ವಾಸ್ತುಶಾಂತಿ ಕಳಸಾರೋಹಣದ ಅಂಗವಾಗಿ ಶನಿವಾರ ಹೋಮ, ಹವನ, ಕಳಸ ಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು.

ಉಡುಪಿ ಜಿಲ್ಲೆ ಕಟಪಾಡಿಯ ಕಾಳಹಸ್ತೇಂದ್ರ ಸ್ವಾಮೀಜಿ, ಭಕ್ತನಾದವನು ಗುರುವಿನ ಸೇವೆಯಲ್ಲಿದ್ದರೆ ಅವನಿಗೆ ಎಂದು ಕಷ್ಟಗಳು ಬರಲಾರವು. ಸಿರಿಸಂಪತ್ತಿಗೆ ಎಂದೂ ಕೊರತೆಯಾಗದು ಎಂದರು.

ಹಾಸನ ಜಿಲ್ಲೆಯ ಅರೇಮಾದನಹಳ್ಳಿಯ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ಗುರು–ಶಿಷ್ಯರ ಸಂಬಂಧ ಆಯಸ್ಕಾಂತದಂತಿರಬೇಕು. ಮನುಷ್ಯ ಜನ್ಮ ದುರ್ಲಭವಾದುದು, ಅದು ನಮಗೆ ಲಭಿಸಿದೆ ಎಂದರೆ ಅದು ನಮ್ಮ ಪೂರ್ವಪುಣ್ಯಗಳ ಸುಕೃತ ಫಲ. ಈ ಅಮೂಲ್ಯವಾದ ಮನುಷ್ಯ ಜನ್ಮವನ್ನು ಗುರುವಿನ ಕೃಪೆಯಿಂದ ಇಹಬಂಧನ ಕಳಚಿಕೊಂಡು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದರು.

ಜೀವಾತ್ಮ-ಪರಮಾತ್ಮರ ಸಂಬಂಧಗಳು ಎರಡು ದೀಪಗಳ ಸಂಬಂಧದಂತೆ. ಅವು ಎರಡೂ ಬೇರೆ ಬೇರೆ ಅಲ್ಲ. ಅವು ಎರಡೂ ಒಂದೇ ಎಂದರು.

ಮುಚಳಾಂಬ ಪ್ರಣವಾನಂದ ಸ್ವಾಮೀಜಿ, ದೇವನಲ್ಲಿ ಭಕ್ತನಿಗೆ ಶ್ರದ್ಧೆ ಬಲು ಮುಖ್ಯವಾದುದು, ಅದಿಲ್ಲದೆ ಭಕ್ತಿಮಾರ್ಗ ಪಯಣದಲ್ಲಿ ಕಿಂಚಿತ್ತೂ ಮುಂದೆ ಸಾಗಲಾರದು ಎಂದರು.

ಮೌನೇಶ್ವರ ಶರ್ಮಾ, ವೀರರಾಘವ ಶರ್ಮಾ ಸ್ವಾಮಿ, ಪ್ರಣವ ಪ್ರಕಾಶ ಮಹಾರಾಜರು, ಜಗನ್ನಾಥ ಸ್ವಾಮೀಜಿ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಮಹೇಶ ಮನ್ವಾಚಾರಿ, ಪ್ರಮೋದ ಬಡಿಗೇರ, ಕೆ. ಸುನಂದಾ, ಗೀತಾ ಶಿರವಾಳ , ಸುರೇಶ ಸಾತಲಗಾಂವ, ಭೀಮರಾವ ಅಟಪಟಕರ, ಲಕ್ಷ್ಮಣ ಪತ್ತಾರ, ಸಿದ್ದು ಬಡಿಗೇರ, ಅಮರ ಪೊದ್ದಾರ, ಸಂದೀಪ ಪತ್ತಾರ, ರೋಹಿತ ಮನ್ವಾಚಾರಿ, ಮೋಹನ ಸೋನಾರ, ಕಲ್ಲಪ್ಪ ಕೊಕಟನೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-26-2000256109

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.