ವಿಜಯಪುರ: ‘ಚಲವಾದಿ ಮೊದಲಾದ ಸಮುದಾಯಗಳನ್ನು ಬಲಗೈ ಎಂದು, ಮಾದಿಗ ಸಮುದಾಯವನ್ನು ಎಡಗೈ ಎಂಬುದಾಗಿ ವಿಭಾಗಿಸಿರುವುದು ಸರಿಯಲ್ಲ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಜಿ.ಬಿ. ಪಾಟೀಲ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಅಂಬೇಡ್ಕರ್ ಹಬ್ಬದ ಅಂಗವಾಗಿ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಪ್ರಗತಿಪರ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ನಡೆದ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತ ವೈಚಾರಿಕ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.

‘ಒಂದರ್ಥದಲ್ಲಿ ಲಿಂಗಾಯತ ಸಮುದಾಯಗಳೆಲ್ಲವೂ ಲಿಂಗಾಯತರಾಗುವ ಮುನ್ನ ದಲಿತರೇ ಆಗಿದ್ದರು. ಹೀಗಾಗಿ, ನಮ್ಮಲ್ಲಿಯೇ ಎಡಗೈ–ಬಲಗೈ ಎಂದು ವಿಭಾಗಿಸಿದರೆ ಯಾವ ಅರ್ಥವೂ ಇಲ್ಲ’ ಎಂದರು.

‘ದಲಿತ ಸಮುದಾಯದ ಜಿಲ್ಲಾಧಿಕಾರಿ ಅಥವಾ ರಾಜಕಾರಣಿಯ ಜೊತೆ ಕುಳಿತು ಸಹಭೋಜನ ಮಾಡಿದರೆ ಅದು, ಸಮಾನತೆ ಎನಿಸಿಕೊಳ್ಳುವುದಿಲ್ಲ. ಸಾಮಾನ್ಯ ದಲಿತ ವ್ಯಕ್ತಿ ಜತೆಗೆ ಸಹಭೋಜನ ಮಾಡಿದಾಗ ಮಾತ್ರ ಜಾತೀಯತೆಯ ಭೂತ ತೊಲಗುತ್ತದೆ’ ಎಂದು ತಿಳಿಸಿದರು.

‘ಎಷ್ಟೋ ವರ್ಷಗಳ ನಂತರ ಅಂಬೇಡ್ಕರ್ ಅವರ ಸಮಗ್ರ ಸಾಹಿತ್ಯ, ವಿಚಾರ ಮಂಥನಗಳನ್ನು ಅಧ್ಯಯನ ಮಾಡುವ ಅವಕಾಶ ದೊರಕಿತು. ಜಗತ್ತಿನಲ್ಲಿಯೇ ಅವರು ಶ್ರೇಷ್ಠ ಸಂಶೋಧಕ, ಚಿಂತಕರಾಗಿದ್ದಾರೆ’ ಎಂದರು.

ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ವೈದ್ಯ ಬಾಬು ರಾಜೇಂದ್ರ ನಾಯಕ, ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ, ಬಾಲಾಜಿ ಕಾಂಬಳೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜೆ. ಇಂಡಿ, ಅಬ್ದುಲ್ ರಜಾಕ್ ಹೊರ್ತಿ, ಮೋಹನ್ ಕಟ್ಟಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-26-89825479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.