ದೇವರಹಿಪ್ಪರಗಿ: ಪಂಚಪೀಠಗಳ ಪರಂಪರೆ ದೇಶದುದ್ದಕ್ಕೂ ಆಧ್ಯಾತ್ಮಿಕ ಅನುಭಾವವನ್ನು ಹಂಚುವ ಮೂಲಕ ಭಕ್ತರ ಧಾರ್ಮಿಕ ಹಸಿವನ್ನು ನೀಗಿಸಿವೆ ಎಂದು ಉಜ್ಜಯನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲ್ಲೂಕಿನ ದೇವೂರ ಗ್ರಾಮದ ಉಜ್ಜಯಿನಿ ಶಾಖಾಮಠದ ನೂತನ ಕಟ್ಟಡ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ, ಮರುಳಾರಾಧ್ಯ ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಗುಡ್ಡಾಪೂರ ದಾನಮ್ಮದೇವಿ ಪುರಾಣ ಸಂಪನ್ನ ಅಂಗವಾಗಿ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಗವಂತನ ಆಶೀರ್ವಾದಕ್ಕಿಂತ ಮೊದಲು ಗುರುವಿನ ಆಶೀರ್ವಾದ ಮುಖ್ಯ. ಇಂದು ಗುರು ಹಾಗೂ ಭಗವಂತನ ಕೃಪೆಯಿಂದ ನಾಡು ಸಮೃದ್ಧವಾಗಲಿ, ಸುಭೀಕ್ಷವಾಗಲಿ, ಅನ್ನದಾತನ ಬದುಕು ಉತ್ತಮಗೊಳ್ಳಲಿ. ದೇಶದ ಜನರು ಸತ್ಪ್ರಜೆಗಳಾಗಲಿ, ವಧುವರರ ಕಲ್ಯಾಣವಾಗಲಿ ಎಂದು ಶುಭಹಾರೈಸಿದರು.

ಅಖಿಲ ಭಾರತ ಶಿವಾಚಾರ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶ್ರೀ ಹಾಗೂ ಎಮ್ಮಿಗನೂರು ಹಂಪಿ ಸಾವಿರ ದೇವರಮಠದ ವಾಮದೇವ ಶ್ರೀ ಆಶೀರ್ವಚನ ನೀಡಿದರು.

ಪಟ್ಟಾಧಿಕಾರ ರಜತ ಮಹೋತ್ಸವ ಆಚರಿಸಿಕೊಂಡ ಸ್ಥಳೀಯ ಮಠದ ಮರುಳಾರಾಧ್ಯಶ್ರೀ ಅಭಿನಂದನಾ ನುಡಿಗಳನ್ನು ಹೇಳುವುದರ ಮೂಲಕ ಪಟ್ಟಾಧಿಕಾರವನ್ನು ಸ್ಮರಿಸಿದರು.

ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ (ಚಬನೂರ) ದೀಪ ಬೆಳಗಿಸಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಉಜ್ಜಯನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.

ಆಲಮೇಲ ಸಂಸ್ಥಾನ ಹಿರೇಮಠದ ಚಂದ್ರಶೇಖರಶ್ರೀ, ದೇವರಹಿಪ್ಪರಗಿ ಸದಯ್ಯನಮಠದ ವೀರಗಂಗಾಧರಶ್ರೀ, ಅವೋಗೇಶ್ವರ ಧಾಮದಶ್ರೀ, ರಾಮನಗೌಡ ಪಾಟೀಲ, ಮೋಹನ ಸಜ್ಜನ, ಸಿದ್ದು ಆನಂದಿ, ಬಸವರಾಜ ಬಸವರೆಡ್ಡಿ, ವಿಲಾಸ ಕುಮಟಗಿ, ಶಂಕರಗೌಡ ಬಿರಾದಾರ, ಸುಬ್ಬಣ್ಣ ಜೋಗೂರ, ದೇವಿಂದ್ರ ಬಡಿಗೇರ, ಸಿದ್ಧಲಿಂಗಯ್ಯ ಹಿರೇಮಠ, ಈರಣ್ಣ ಗಂಗಶೆಟ್ಟಿ, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-26-144552241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.