ವಾಡಿ: ‘ನಿರಂತರ ಧ್ಯಾನದಿಂದ ಒಳಿತು ಕೆಡಕುಗಳ ಬಗೆಗಿನ ಆಳವಾದ ಅರಿವು ಉಂಟಾಗಿ ಅದು ಆತ್ಮಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಭಿಕ್ಕುಣಿ ಅರ್ಚಸ್ಮತಿ ಮಾತಾಜಿ ಹೇಳಿದರು.

ಪಟ್ಟಣದ ಧಮ್ಮ ದೀಕ್ಷಾ ಭೂಮಿಯಲ್ಲಿ ಬೌದ್ಧ ಸಮಾಜದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶ್ರದ್ಧೆಯಿಂದ ಮಾಡಿದ ಪ್ರತಿ ಕಾರ್ಯವು ಯಶಸ್ಸಿನಲ್ಲಿ ಸಂಪನ್ನಗೊಳ್ಳಲಿದೆ’ ಎಂದರು.

‘ಸ್ವರ್ಗ-ನರಕಗಳು ಎಲ್ಲೂ ಇಲ್ಲ. ಉತ್ತಮ ಕಾರ್ಯಗಳನ್ನು ಮಾಡಿ ಸಂತೋಷ ಪಡುವುದೇ ಸ್ವರ್ಗ. ಕೆಟ್ಟ ಕಾರ್ಯಗಳನ್ನು ಮಾಡಿ ನೋವು ಅನುಭವಿಸುವುದೇ ನರಕ. ಬುದ್ಧರ ಧಮ್ಮ ತತ್ವದಲ್ಲಿ ನಂಬಿಕೆ ಇಟ್ಟು ಜೀವನ ನಡೆಸಿದರೆ ಅತೃಪ್ತಿ ದೂರವಾಗುತ್ತದೆ’ ಎಂದರು.

ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಮುಖಂಡರಾದ ಭೀಮಾ ನಾಟೇಕರ, ಖೇಮಲಿಂಗ ಬೆಳಮಗಿ, ಸೂರ್ಯಕಾಂತ ರದ್ದೇವಾಡಿ, ರವಿ ಸಿಂಗೆ, ಮಲ್ಲಿಕಾರ್ಜುನ ಕಟ್ಟಿ, ಶರಣು ನಾಟೇಕರ, ಭೀಮಶಾ ಮೈನಾಳ, ವಿಜಯ ಅನ್ವರ, ಸಂತೋಷ ಜೋಗುರ, ಬಸವರಾಜ ಜೋಗುರು, ಸಂಜಯ ಗೋಪಾಳೆ, ದಿಲೀಪ ಮೈನಾಳಕರ, ವಿಶಾಲ ಬಡಿಗೇರ, ಶಿವಕುಮಾರ ಬೆಳಮಗಿ, ಸಂದೀಪ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-31-208130262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.