ಸೋಮವಾರ, ಮಾರ್ಚ್ 20, 2023
24 °C

ಪ್ರಜಾವಾಣಿ ವಾರ ಭವಿಷ್ಯ| 11-12-2022ರಿಂದ 17-12-2022 ರವರೆಗೆ

ಎಂ. ಎನ್. ಲಕ್ಷ್ಮೀನರಸಿಂಹಸ್ವಾಮಿ    Updated:

ಅಕ್ಷರ ಗಾತ್ರ : | |

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ನಿಮ್ಮ ನಡವಳಿಕೆಯಿಂದ ನೀವು ಮಾಡುವ ಕೆಲಸಗಳಲ್ಲಿ ಹೆಜ್ಜೆಹೆಜ್ಜೆಗೂ ಸಮಸ್ಯೆಗಳು ಬರಬಹುದು. ಅನವಶ್ಯಕ ಚಿಂತೆಗಳಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ನಿಮ್ಮ ಕೆಲವು ಯೋಜನೆಗಳು ಖರ್ಚಿಗೆ ದಾರಿಯಾದರೂ ಮುಂದೆ ಫಲವಿರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ಉತ್ಸಾಹ ಇರುತ್ತದೆ. ಮಕ್ಕಳಿಂದ ಹಣದ ಸಮಸ್ಯೆ ಬರಬಹುದು. ವ್ಯಾಪಾರ ವ್ಯವಹಾರ ಮಾಡುವವರಿಗೆ ಸಾಕಷ್ಟು ಪೈಪೋಟಿ ಇರುತ್ತದೆ. ಸ್ನೇಹಿತರ ನಡುವಿನ ಸಂಬಂಧ ಉತ್ತಮವಾಗುತ್ತವೆ. ಕೊಟ್ಟಿದ್ದ ಸಾಲ ಈಗ ವಸೂಲಿ ಆಗುವುದರಿಂದ ವೆಚ್ಚವನ್ನು ಸರಿದೂಗಿಸಲು ಸಹಾಯವಾಗುತ್ತದೆ. ಆಭರಣಗಳ ವ್ಯಾಪಾರ ಮಾಡುವವರಿಗೆ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ.

***

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಒಡಹುಟ್ಟಿದವರಿಂದ ನಿಮಗೆ ಸಹಕಾರ ದೊರೆಯುತ್ತದೆ. ಎಲ್ಲರೆದುರಿಗೆ ಮನೋಭಿಲಾಷೆಯನ್ನು ವ್ಯಕ್ತಪಡಿಸುವುದು ಒಳ್ಳೆಯದು. ಅವಿವಾಹಿತರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆ ಮಾಡುವವರು ಸಾಕಷ್ಟು ಆಲೋಚನೆ ಮಾಡುವುದು ಒಳಿತು. ನಿಮ್ಮ ಮಹತ್ವದ ಯೋಜನೆಗಳ ಜಾರಿಗೆ ಕಾದುನೋಡುವ ತಂತ್ರ ಬಳಸಿರಿ. ಟ್ರಾವೆಲ್ಸ್ ಉದ್ಯಮದವರು ಲಾಭದಾಯಕವಾದ ಬೆಳವಣಿಗೆ ನಿರೀಕ್ಷೆ ಮಾಡಬಹುದು. ಕಚೇರಿಯಲ್ಲಿ ಬೇಸರದ ಸಂಗತಿ ಆದರೂ ಧೃತಿಗೆಡಬೇಡಿರಿ. ಖಾದ್ಯ ತೈಲವನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸಿ ಲಾಭ ಬರುತ್ತದೆ. ಧನದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅಭಿವೃದ್ಧಿಯಲ್ಲಿ ಕೆಲವು ಎಡರುತೊಡರುಗಳು ಬಂದರೂ ಅಭಿವೃದ್ಧಿ ಸಾಗುತ್ತದೆ. ಸದಾಕಾಲ ನಿಮ್ಮ ಪಕ್ಕದಲ್ಲಿ ಇರುವವರು ನಿಮ್ಮನ್ನು ವಂಚಿಸಬಹುದು ಎಚ್ಚರ. ಗೃಹ ನಿರ್ಮಾಣದ ಯೋಜನೆಗೆ ಆಲೋಚನೆ ಮಾಡುವಿರಿ. ಹಿತಶತ್ರುಗಳ ಕಾಟ ಕಡಿಮೆಯಾಗುವ ಸಂದರ್ಭವಿದೆ. ಬಟ್ಟೆ ವ್ಯಾಪಾರ ಮಾಡುವವರಿಗೆ ಸ್ವಲ್ಪ ಆದಾಯ ಹೆಚ್ಚುತ್ತದೆ. ಮಕ್ಕಳಿಗಾಗಿ ಧಾರ್ಮಿಕ ಆಚರಣೆಯನ್ನು ಕೈಗೊಳ್ಳುವಿರಿ. ಹೊಸ ಉದ್ಯೋಗದ ಕರಾರಿನ ಬಗ್ಗೆ ಸರಿಯಾಗಿ ತಿಳಿದು ಮುನ್ನಡೆಯಿರಿ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸಂಗೀತಗಾರರಿಗೆ ಉತ್ತಮ ಗೌರವ ಮತ್ತು ಸಂಭಾವನೆಯು ದೊರೆಯುತ್ತದೆ. ಹಾಲು ಉತ್ಪಾದಕರಿಗೆ ಹೆಚ್ಚು ಲಾಭವಿರುತ್ತದೆ. ಪಶುಸಂಗೋಪನೆ ಮಾಡುವವರಿಗೆ ಹೆಚ್ಚಿನ ಏಳಿಗೆ ಇರುತ್ತದೆ. ವೃತ್ತಿಯಲ್ಲಿ ಏರಿಳಿತವಿರುವುದಿಲ್ಲ.

***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಅಪರಿಚಿತರೊಡನೆ ನಿಮ್ಮ ಯಾವುದೇ ವಿಷಯಗಳನ್ನು ಹಂಚಿಕೊಳ್ಳಬೇಡಿರಿ, ಇದು ನಷ್ಟಕ್ಕೆ ಕಾರಣವಾಗಬಹುದು. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು. ಸ್ಥಿರಾಸ್ತಿ ವಿಷಯದಲ್ಲಿ ಮುಂದುವರಿಯುವುದು ಬೇಡ. ಕೆಲವು ರಾಜಕೀಯ ನಾಯಕರಿಗೆ ವರಿಷ್ಠರ ಸಂಪರ್ಕ ದೊರೆಯಬಹುದು. ನಿಮ್ಮ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಧನಾದಾಯವೂ ನಿಮ್ಮ ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಲೇವಾದೇವಿ ಮಾಡುವವರಿಗೆ ಅಲ್ಪ ಪ್ರಮಾಣದ ಹಿನ್ನಡೆಯಾಗಬಹುದು. ವೈದ್ಯರು ತಮ್ಮ ವೃತ್ತಿಯಲ್ಲಿ ಹೆಚ್ಚಿನ ಜಾಗೃತೆ ವಹಿಸಬೇಕು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಆಮದು ಮತ್ತು ರಫ್ತು ಮಾಡುವವರಿಗೆ ಹೆಚ್ಚಿನ ಅವಕಾಶಗಳು ತೆರೆಯುತ್ತವೆ.

***

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಕೆಲಸಗಳಲ್ಲಿ ತಾಂತ್ರಿಕವಾಗಿ ತಪ್ಪಾಗದಂತೆ ಎಚ್ಚರವಹಿಸಿರಿ. ಸ್ವಲ್ಪ ತಿರುಗಾಟ ಹೆಚ್ಚಾಗಬಹುದು. ಸರ್ಕಾರಿ ಸವಲತ್ತುಗಳು ಈಗ ಸಿಗಲಾರಂಭಿಸುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ಮೂಳೆ ತೊಂದರೆ ಅಥವಾ ಅಜೀರ್ಣ ಪ್ರಕ್ರಿಯೆ ಸಾಕಷ್ಟು ಬಾಧಿಸಬಹುದು. ಷೇರುಪೇಟೆ ವ್ಯವಹಾರಗಳು ಅಷ್ಟು ಒಳಿತಲ್ಲ. ನಿವೇಶನ ಖರೀದಿ ಮಾಡಬಹುದು. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಸಾಹಸ ಕಲಾವಿದರುಗಳಿಗೆ ಕೆಲಸ ಹೆಚ್ಚು ದೊರೆತು ಹೆಚ್ಚು ಆದಾಯವಿರುತ್ತದೆ. ಸಾಲ ಸೌಲಭ್ಯಗಳು ಸಿಗುವುದು ನಿಧಾನವಾಗಬಹುದು. ಅಪರಿಚಿತ ವ್ಯಕ್ತಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಧನಾದಾಯವು ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಹೊರಗುತ್ತಿಗೆ ಕೆಲಸ ಮಾಡುವವರಿಗೆ ಹೆಚ್ಚು ಕೆಲಸದ ಒತ್ತಡವಿರುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಅತ್ಯಧಿಕ ಆತ್ಮವಿಶ್ವಾಸದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೋಗುವುದು ಸರಿಯಲ್ಲ. ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಮುನ್ನಡೆ ಸಾಧಿಸುವಿರಿ. ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ಉನ್ನತ ಹುದ್ದೆಗೆ ಏರುವ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಆದ್ಯತೆಯ ಮೇಲೆ ಯೋಜನೆಗಳನ್ನು ಜಾರಿಗೊಳಿಸಿರಿ. ಚಾಡಿ ಹೇಳುವುದು ಮತ್ತು ಚಾಡಿ ಕೇಳುವುದು ನಿಮಗೆ ದುಷ್ಪರಿಣಾಮವನ್ನು ತರಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ಇರಲಿ. ಸಂಗಾತಿಯಿಂದ ನಿಮ್ಮ ಕೆಲಸಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಬಂಧು ಮಿತ್ರರ ಸಲಹೆಗೆ ಗಮನ ಕೊಡುವುದು ಒಳಿತು. ಕೃಷಿಕರಿಗೆ ಅವರ ಬೆಳೆಯ ಮೂಲಕ ಹೆಚ್ಚಿನ ಲಾಭ ಬರುತ್ತದೆ. ಕಾರ್ಮಿಕರಿಗೆ ಹೆಚ್ಚು ಕೆಲಸ ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ನಿರಾಳತೆಯನ್ನು ಕಾಣಬಹುದು. ಧನಾದಾಯವು ಸಾಮಾನ್ಯವಾಗಿರುತ್ತದೆ. ನಿಮ್ಮ ಒಣ ಪ್ರತಿಷ್ಠೆ ಮತ್ತು ದಡ್ಡತನದ ತೀರ್ಮಾನಗಳಿಂದ ನಷ್ಟ ಅನುಭವಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಅವಕಾಶ ಒದಗಿ ಬರುತ್ತದೆ. ತಾಯಿಯಿಂದ ನಿಮ್ಮ ಕೆಲಸಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿದೆ. ವೃತ್ತಿಯಲ್ಲಿ ಯಾವುದೇ ಏರಿಳಿತ ಇರುವುದಿಲ್ಲ.

***

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ ಜೇಷ್ಠ)  

ಭ್ರಾತೃವರ್ಗದವರೂ ನಿಮ್ಮೊಡನೆ ಹೊಂದಾಣಿಕೆಗೆ ಬರುವರು. ಮಕ್ಕಳಿಗೆ ವಿದ್ಯಾಭ್ಯಾಸ ಅಥವಾ ಉದ್ಯೋಗದಲ್ಲಿ ಅನುಕೂಲವಿರಲಿದೆ. ಧನದಾಯವು ಉತ್ತಮವಾಗಿರುತ್ತದೆ. ಹಳೆಯ ಸಾಲ ಈಗ ವಾಪಸ್ ಬರುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಿಮ್ಮ ಪಾಲಿನ ಬಂಡವಾಳವನ್ನು ಸಾಕಷ್ಟು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಬಟ್ಟೆ ನೇಯುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸನ್ನು ಪಡೆಯುವರು. ನಿಮ್ಮ ಆರೋಗ್ಯದ ವಿಷಯದಲ್ಲಿ ಉದಾಸೀನ ಸಲ್ಲದು. ಪ್ರಭಾವಿ ವ್ಯಕ್ತಿಗಳ ಸಹವಾಸ ದೊರೆತು ನಿಮ್ಮ ಸ್ಥಾನಮಾನ ಹೆಚ್ಚುವುದು. ವಾತ ಪ್ರವೃತ್ತಿ ಇರುವವರಿಗೆ ಅದರ ಬಾಧೆ ಹೆಚ್ಚಾಗುವುದು. ತಾಯಿಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು.

***

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ಹೆಚ್ಚು ತಿರುಗಾಟದಿಂದ ಆಯಾಸವಾಗಬಹುದು. ನಿಮ್ಮ ಕೆಲವು ಸಮಸ್ಯೆಗಳು ನಿಧಾನವಾಗಿ ಕರಗುತ್ತವೆ. ಬೇಕರಿ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ಬಗ್ಗೆ ಮಾತನಾಡುವವರನ್ನು ಉಪೇಕ್ಷಿಸಿ ಮುನ್ನಡೆಯುವುದು ಉತ್ತಮ. ಆಪ್ತರ ಕಷ್ಟಕ್ಕೆ ಸಹಾಯ ಮಾಡುವಿರಿ. ಕೃಷಿ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಸಣ್ಣ ಕೈಗಾರಿಕೆಗಳಿಗೆ ಸರ್ಕಾರದಿಂದ ಸಿಗಬೇಕಾಗಿದ್ದ ಸಹಾಯಧನ ದೊರೆಯುತ್ತದೆ. ವಿದೇಶದಲ್ಲಿ ಓದುತ್ತಿರುವವರಿಗೆ ಸೂಕ್ತ ಸೌಲಭ್ಯಗಳು ದೊರೆಯುತ್ತವೆ. ಕೆಲವು ವಯಸ್ಕರು ಪ್ರೇಮಪಾಶಕ್ಕೆ ಸಿಲುಕುವರು. ಸಂಗಾತಿಯ ಆದಾಯದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವನ್ನು ಕಾಣಬಹುದು.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ಸಾಮಾಜಿಕವಾಗಿ ಬದುಕಿನಲ್ಲಿ ಹೊಸ ಉತ್ಸಾಹ, ಹುರುಪು ಮೂಡುತ್ತದೆ. ಕಾನೂನಿನ ಸಮಸ್ಯೆಗಳು ಸರಾಗವಾಗಿ ಬಗೆಹರಿದು ಮನಸ್ಸಿಗೆ ನಿರಾಳವೆನಿಸುತ್ತದೆ. ಗುತ್ತಿಗೆದಾರರು ಕೈಗೆತ್ತಿಕೊಂಡ ಕೆಲಸಗಳನ್ನು ಮಾಡಿ ಮುಗಿಸುವುದರಿಂದ ಹೊಸ ಗುತ್ತಿಗೆಗಳು ದೊರೆಯುವ ಸಾಧ್ಯತೆ ಇದೆ. ಇಂಧನ ಮಾರಾಟಗಾರರಿಗೆ ಸಾಕಷ್ಟು ಲಾಭ ದೊರೆಯುತ್ತದೆ.  ಒಡಹುಟ್ಟಿದವರ ಸಹಕಾರ ನಿರೀಕ್ಷಿತ ಸಮಯದಲ್ಲಿ ದೊರೆಯುತ್ತದೆ. ಹೆಣ್ಣುಮಕ್ಕಳ ಅಭಿವೃದ್ಧಿಯು ಅವರ ನಿರೀಕ್ಷೆಯಂತೆ ಇರುತ್ತದೆ. ತಾಯಿಯ ಹತ್ತಿರ ಧನಸಹಾಯ ಪಡೆಯುವಿರಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಇರುತ್ತದೆ. ಲೆವಾದೇವಿ ಮಾಡುವವರಿಗೆ ಆತಂಕ ಎದುರಾದರೂ ನಷ್ಟವಿಲ್ಲ. ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಹೆಚ್ಚಿನ ಲಾಭ ಬರುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಸಮಾಜದ ಸಹಕಾರ ದೊರೆಯುತ್ತದೆ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರಿಂದ ಅರ್ಧ ಆರ್ಥಿಕ ಸಂಕಷ್ಟ ನೀಗುತ್ತದೆ. ಕುಟುಂಬದವರಲ್ಲಿ ಭಿನ್ನಾಭಿಪ್ರಾಯಗಳಂತಹ ಸನ್ನಿವೇಶ ಕಂಡುಬಂದು ಮನಸ್ಸಿಗೆ ನೋವಾಗುತ್ತದೆ. ಬಹುದಿನಗಳಿಂದ ಮುಂದೂಡಲ್ಪಟ್ಟಿದ್ದ ದೂರ ಪ್ರಯಾಣ ಈಗ ಸಾಕಾರವಾಗುತ್ತದೆ. ಭಾಷೆಗಳನ್ನು ಅಧ್ಯಯನ ಮಾಡುವವರಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತದೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಕೈತುಂಬಾ ಕೆಲಸ ದೊರೆಯುತ್ತದೆ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಮಹಿಳೆಯರು ನಡೆಸುವ ವ್ಯವಹಾರಗಳಲ್ಲಿ ಅಭಿವೃದ್ಧಿ ಮತ್ತು ಲಾಭ ಇರುತ್ತದೆ. ಉದ್ದಿಮೆದಾರರಿಗೆ ಬೇಕಾದ ಸಾಲ ಸೌಲಭ್ಯ ದೊರೆಯುತ್ತದೆ. ಚಿನ್ನ ಮತ್ತು ಬೆಳ್ಳಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಪೂರ್ವನಿಯೋಜಿತ ಕೆಲಸಗಳು ಕೆಲವರ ಸಹಕಾರದಿಂದ ಮಂದಗತಿಯಲ್ಲಿ ಆಗುತ್ತದೆ. ನಿಮ್ಮ ನಕಾರಾತ್ಮಕ  ನಡವಳಿಕೆಯಿಂದ ಜನರೆದುರು ಮುಜುಗರಕ್ಕೆ ಒಳಗಾಗುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮ್ಮ ಪಾಲು ಕಡಿಮೆಯಾಗಬಹುದು. ಐಶಾರಾಮಿ ಖರ್ಚುಗಳ ಬಗ್ಗೆ ಜಾಗೃತೆ ವಹಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. ರಾಸಾಯನಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭ ಇರುತ್ತದೆ. ನೋಂದಾಯಿತ ದಾಖಲೆಗಳ ಕಚೇರಿಗಳಲ್ಲಿ ಕೆಲಸ ಮಾಡುವವರು ಬಾಕಿ ಕೆಲಸಗಳನ್ನು ಬೇಗನೇ ಮಾಡಿ ಮುಗಿಸುವುದು ಸೂಕ್ತ. ಬಟ್ಟೆಯ ಮೇಲೆ ಅಲಂಕಾರಿಕ ಚಿತ್ತಾರಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.