ಸೋಮವಾರ, ಜನವರಿ 18, 2021
20 °C

ವಾರ ಭವಿಷ್ಯ: 29–11–2020ರಿಂದ 5–12–2020ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಕೆಲಸಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದರೂ ಬರಬೇಕಾದ ಹಣ ಬರುವುದು ಸ್ವಲ್ಪ ನಿಧಾನವಾಗಬಹುದು. ಗುಪ್ತ ಶತ್ರುಗಳಿಂದ ಆರ್ಥಿಕ ಸ್ಥಿತಿಯ ಮೇಲೆ ವಿರುದ್ಧ ಪರಿಣಾಮ ಆಗಬಹುದು ಸ್ವಲ್ಪ ಎಚ್ಚರ ವಹಿಸಿರಿ. ಶೇರು ವ್ಯವಹಾರಕ್ಕಾಗಿ ಅತಿಯಾಗಿ ಹಣಹೂಡುವುದು ಬೇಡ.ಸಂಗಾತಿಯ ಆದಾಯದಲ್ಲಿ ಏರಿಕೆ ಆಗುತ್ತದೆ. ವಿದೇಶದಲ್ಲಿ ಹಣದ ವ್ಯವಹಾರ ವನ್ನು ಮಾಡುತ್ತಿರುವವರಿಗೆ ವ್ಯವಹಾರ ವೃದ್ಧಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಮಾರ್ಗದರ್ಶನ ಸಿಗುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮಂದಗತಿ ಇರುತ್ತದೆ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗುತ್ತವೆ.

**
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ರಾಜಕೀಯ ವ್ಯಕ್ತಿಗಳಿಗೆ ಯಶಸ್ಸಿನ ಹಾದಿಯು ತೆರೆಯುತ್ತದೆ.ಸದ್ಯದಲ್ಲಿ ಲೇವಾದೇವಿ ವ್ಯವಹಾರವನ್ನು ಮಾಡುವುದು ಬೇಡ. ಸಹೋದರಿಯರೊಡನೆ ಬಾಂಧವ್ಯ ವೃದ್ಧಿಸುತ್ತದೆ. ಸರ್ಕಾರಿ ಕಚೇರಿಯ ಕೆಲಸ ಸರಾಗವಾಗಿ ಆಗುತ್ತದೆ. ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತವೆ. ಮೂತ್ರ ಸಂಬಂಧಿ ಸೋಂಕುಗಳ ಬಗ್ಗೆ ಎಚ್ಚರ ವಹಿಸಿರಿ. ನಿಮ್ಮ ವಿರುದ್ಧ ಮುನಿಸಿಕೊಂಡಿದ್ದ ಹಿರಿಯರು ಈಗ ಶಾಂತರಾಗುವರು. ಕೃಷಿಕರು ತಮ್ಮ ಬೆಳಗ್ಗೆ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ವೃತ್ತಿಯಲ್ಲಿ ನಿಮ್ಮ ಸ್ಥಾನವು ಏರಿಕೆಯಾಗುತ್ತದೆ. ತಾಯಿಯ ಮಾರ್ಗದರ್ಶನ ಅನುಕೂಲವನ್ನು ತರುತ್ತದೆ.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮುನ್ನುಗ್ಗುವ ಶಕ್ತಿಯು ಕಡಿಮೆಯಾದಂತೆ ಅನ್ನಿಸುತ್ತದೆ. ಹಣದ ಒಳಹರಿವು ಉತ್ತಮವಾಗುತ್ತದೆ. ಒಡಹುಟ್ಟಿದವರು ನಿಮ್ಮಬಗ್ಗೆ ಮುನಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಯಶಸ್ಸು ಇರುತ್ತದೆ. ಹೆಣ್ಣುಮಕ್ಕಳ ಅಭಿವೃದ್ಧಿ ನಿರೀಕ್ಷೆಗಿಂತ ಹೆಚ್ಚಿರುತ್ತದೆ. ಸಂಗಾತಿಯು ಸಲ್ಲದ ವ್ಯವಹಾರದಲ್ಲಿ ಹಣ ತೊಡಗಿಸಿ ಕಳೆದುಕೊಳ್ಳಬಹುದು.ವಿದ್ಯುತ್ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಿರುವವರಿಗೆ ಹೆಚ್ಚಿನ ಲಾಭವಿದೆ. ಹೈನುಗಾರಿಕೆಯನ್ನು ನಡೆಸುತ್ತಿರುವವರಿಗೆ ವ್ಯವಹಾರ ಹೆಚ್ಚುತ್ತದೆ, ಹೆಚ್ಚಿನ ಬೇಡಿಕೆಯ ಜೊತೆಗೆ ಆದಾಯವು ಹೆಚ್ಚುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಚಾಲನೆ ದೊರೆಯುತ್ತದೆ.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಪ್ರತಿದಿನ ದುಡಿಯುವ ಕಾರ್ಮಿಕರ ಆದಾಯವು ಹೆಚ್ಚುವ ಲಕ್ಷಣಗಳಿವೆ.ಸಂಗೀತ ಕಲಾವಿದರಿಗೆ ಬೇಡಿಕೆ ಬರಲಾರಂಭಿಸುತ್ತದೆ. ಹಣದ ಸ್ಥಿತಿಯು ಉತ್ತಮಗೊಳ್ಳುತ್ತಾ ಹೋಗುತ್ತದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಬಂದುಗಳಲ್ಲಿ ಹೇಳಿಕೊಳ್ಳುವುದು ಬೇಡ. ಮಕ್ಕಳಿಂದ ನಿಮಗೆ ಹೆಚ್ಚಿನ ಗೌರವ ಇರುತ್ತದೆ. ಆಹಾರದಿಂದ ಆರೋಗ್ಯ ವ್ಯತ್ಯಾಸ ಆಗಬಹುದು. ಸಂಗಾತಿಯ ಸಂತೋಷಕ್ಕಾಗಿ ಸ್ವಲ್ಪ ಕಾಲವನ್ನು ಮೀಸಲಿಡಿರಿ. ಸಂಗಾತಿಯ ಸಲಹೆಗಳು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ನಿಮ್ಮ ವ್ಯವಹಾರಗಳಲ್ಲಿ ನಿಧಾನಗತಿಯ ಅಭಿವೃದ್ಧಿಯನ್ನು ಕಾಣಬಹುದು. ವಿವಾಹ ಯೋಗಗಳು ಕೂಡಿ ಬರುವ ಸಾಧ್ಯತೆಗಳಿವೆ.

**
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ವ್ಯವಹಾರದಲ್ಲಿ ಸ್ವಲ್ಪ ಏರುಪೇರಾದರೂ ನಷ್ಟ ಆಗುವುದಿಲ್ಲ. ಗೃಹ ನಿರ್ಮಾಣಕಾರ್ಯ ಜಾರಿ ಯಾಗುವ ಸಾಧ್ಯತೆಯಿದೆ. ಭೂಮಿಯ ವ್ಯಾಪಾರ ಮಾಡುವ ಮಧ್ಯವರ್ತಿಗಳಿಗೆ ಆದಾಯ ಹೆಚ್ಚುತ್ತದೆ. ಮಕ್ಕಳ ಸಂತೋಷಕ್ಕಾಗಿ ಹಣವನ್ನು ಖರ್ಚು ಮಾಡುವಿರಿ. ಅತಿಯಾದ ಅಲೆದಾಟದಿಂದ ದೇಹಕ್ಕೆ ಸುಸ್ತಾಗಬಹುದು,ವಿಶ್ರಾಂತಿಯನ್ನು ಕೊಡುವುದು ಅಗತ್ಯ. ಹಣ್ಣಿನ ಸಗಟುವ್ಯಾಪಾರಿಗಳಿಗೆ ಆದಾಯದಲ್ಲಿ ಕಡಿಮೆಯಾಗಬಹುದು. ದಿನಸಿ ವ್ಯಾಪಾರಿಗಳ ದಿನದ ಆದಾಯವು ವೃದ್ಧಿಸುತ್ತದೆ. ಉದ್ಯೋಗವನ್ನು ಅರಸುತ್ತಿರುವವರಿಗೆ ವಿದೇಶಿ ಕಂಪನಿಗಳಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ. ಕಬ್ಬಿಣದ ವ್ಯಾಪಾರಿಗಳ ವ್ಯವಹಾರ ಹೆಚ್ಚುವುದು.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಸ್ತ್ರೀ ಶಕ್ತಿ ಗಳು ನಡೆಸುವ ಹಣಕಾಸಿನ ಸಂಸ್ಥೆಗಳಿಗೆ ಆದಾಯ ಹೆಚ್ಚುವುದು. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಮೌಲ್ಯವರ್ಧನೆ ಆಗುತ್ತದೆ. ನಿಮ್ಮ ಹಿರಿಯರೊಡನೆ ಇದ್ದ ಮುನಿಸು ನಿವಾರಣೆ ಆಗುತ್ತದೆ. ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸುವ ಆಸೆಯು ಈಡೇರುತ್ತದೆ. ತರಕಾರಿ ವ್ಯಾಪಾರಗಾರರಿಗೆ ವ್ಯಾಪಾರ ಹೆಚ್ಚಾಗುವುದು. ವಿದೇಶದಲ್ಲಿರುವವರು ತಮ್ಮ ಹಿರಿಯರ ಸ್ವತ್ತುಗಳನ್ನು ಪಡೆಯುವ ಯೋಗವಿದೆ. ಪರಿಚಿತರ ಮೂಲಕ ವಶೀಲಿ ಮಾಡಿಸಿ ವೃತ್ತಿಯಲ್ಲಿ ಪ್ರಮುಖಸ್ಥಾನವನ್ನು ಪಡೆಯಬಹುದು. ಹಿರಿಯರಿಂದ ಧನಸಹಾಯವೂ ಹರಿದುಬರುತ್ತದೆ. ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗುವುದು.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕೆಲವು ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೆ ಒತ್ತಡವನ್ನು ಅನುಭವಿಸುವಿರಿ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಮಾತಿನಿಂದ ಎಲ್ಲರನ್ನೂ ನಂಬಿಸಿ ನಿಮ್ಮ ಅಗತ್ಯದ ಕೆಲಸ ಮಾಡಿಕೊಳ್ಳುವಿರಿ. ತೈಲ ಮಾರಾಟಗಾರರಿಗೆ ವ್ಯವಹಾರ ಹೆಚ್ಚಾಗಿ ಆದಾಯ ಸಹ ಹೆಚ್ಚಾಗುವುದು. ನೌಕರರು ಮತ್ತು ಸಹೋದ್ಯೋಗಿಗಳ ನಡುವೆ ನೀವು ಹೊಂದಾಣಿಕೆ ಮಾಡಿಕೊಳ್ಳುವುದು ಅತಿ ಅಗತ್ಯ. ಕೋರ್ಟು ಕಚೇರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣುವಿರಿ. ತಾಂತ್ರಿಕ ಪರಿಣಿತರಿಗೆ ಹೆಚ್ಚಿನ ಮಾನ್ಯತೆ ದೊರೆತು ಹೆಚ್ಚು ಅವಕಾಶಗಳು ಒದಗಿಬರುತ್ತವೆ. ಕೆಲವು ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆಯಿದೆ.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ನಿಮ್ಮ ವ್ಯವಹಾರಗಳಲ್ಲಿ ಸ್ಥಿರತೆಯನ್ನು ಮಾಡಬಹುದು. ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡಲುಬೇಕಾದ ಮಾರ್ಗದರ್ಶನ ದೊರೆಯುತ್ತದೆ. ಶೃಂಗಾರ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಏರುಮುಖವಿರುತ್ತದೆ. ಅಧಿಕ ವರಮಾನ ಇಲ್ಲದಿದ್ದರೂ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸರಕು ಸಾಗಾಣಿಕೆಯನ್ನು ಮಾಡುವವರು ತಮ್ಮ ಸರಕನ್ನು ಸರಿಯಾಗಿ ರಕ್ಷಿಸಿ ಕೊಂಡೊಯ್ಯಲುಬೇಕಾದ ಏರ್ಪಾಟುಗಳನ್ನು ಮಾಡಿಕೊಳ್ಳುವುದು ಉತ್ತಮ. ಭೂಮಿಯ ವ್ಯವಹಾರಗಳಲ್ಲಿ ಹೆಚ್ಚಿನ ಲಾಭಾಂಶ ಇರುತ್ತದೆ . ಒಡವೆ ವಸ್ತುಗಳಿಗಾಗಿ ಧನವ್ಯಯ ಆಗುವುದು. ವಿಶೇಷ ಭೋಜನದ ಯೋಗವಿದೆ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ನಿಂತಿದ್ದ ಆದಾಯಗಳು ಬರಲು ಆರಂಭವಾಗುತ್ತದೆ. ಆದರೂ ಖರ್ಚಿಗೆ ಕಡಿವಾಣ ಹಾಕುವುದು ಅತಿ ಅಗತ್ಯ.ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವರಿಗೆ ಸೂಕ್ತ ಪ್ರಾಮುಖ್ಯತೆ ದೊರೆಯುತ್ತದೆ. ಉನ್ನತ ಅಧ್ಯಯನವನ್ನು ಮಾಡುತ್ತಿರುವವರಿಗೆ ಸೂಕ್ತ ಸೌಲಭ್ಯ ದೊರೆಯುತ್ತದೆ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸಗಳಲ್ಲಿ ಪ್ರಗತಿಯನ್ನುಕಾಣುವಿರಿ. ವಿದ್ಯಾರ್ಥಿಗಳಿಗೆ ಕ್ಲಿಷ್ಟಕರ ವಿಷಯಗಳು ಅರ್ಥವಾಗುವ ಸಮಯ. ಆಭರಣ ತಯಾರಕರಿಗೆ ಬೇಡಿಕೆ ಹೆಚ್ಚಾಗುವುದು. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಲಾಭ ಹೆಚ್ಚಾಗಿರುತ್ತದೆ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ.ಕುಶಲಕರ್ಮಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಆರ್ಥಿಕ ಸ್ಥಿತಿಯು ತೃಪ್ತಿಕರವಾಗಿರುತ್ತದೆ. ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು. ಸ್ವಂತ ಉದ್ಯಮಗಳಿಗೆ ಇದ್ದ ಕಾನೂನಿನ ತಕರಾರು ಈಗ ಬಗೆಹರಿಯುತ್ತದೆ. ಲೇವಾದೇವಿಯನ್ನು ಮಾಡುತ್ತಿದ್ದವರಿಗೆ ನಿಂತಿದ್ದ ಹಣಗಳು ಈಗ ಬರಲು ಆರಂಭಿಸುತ್ತವೆ. ವೃತ್ತಿಯಲ್ಲಿ ಬುದ್ದಿವಂತಿಕೆಯಿಂದ ಕಾರ್ಯಕುಶಲತೆಯನ್ನು ಪ್ರದರ್ಶಿಸುವಿರಿ. ಆಸ್ತಿಯನ್ನು ಕೊಳ್ಳುವ ಬಗ್ಗೆ ಸರಿಯಾಗಿ ನಿರ್ಧಾರ ಮಾಡಿದಲ್ಲಿ ಕೆಲಸ ಆಗುತ್ತದೆ.ವಿದ್ಯಾರ್ಥಿಗಳು ಸರಿಯಾದ ಯಶಸ್ಸನ್ನು ಪಡೆಯಲು ಅನುಕೂಲಕರ ಕಾಲ. ವಾರಾಂತ್ಯಕ್ಕೆ ಶುಭವಾರ್ತೆಯನ್ನು ಕೇಳುವಿರಿ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸರ್ಕಾರಿ ಅಧಿಕಾರಿಗಳಿಂದ ಸೂಕ್ತ ನೆರವು ದೊರೆತು ವ್ಯವಹಾರಗಳು ಸುಗಮವಾಗುತ್ತದೆ. ಉದ್ಯಮದ ಪಾಲುದಾರರ ನಡುವೆಯಿಂದ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಮರೆಯಾಗಿ ಸಂತೋಷವಾದ ವಾತಾವರಣ ನಿರ್ಮಾಣವಾಗುತ್ತದೆ. ತಂದೆಯ ಮೇಲೆ ವಿನಾಕಾರಣ ಕಾರಣ ಮುನಿಸು ಮೂಡಬಹುದು. ಆರ್ಥಿಕಸ್ಥಿತಿಯಲ್ಲಿ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲ. ಯುವಕರು ವೃತ್ತಿಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೆ ಮೇಲಧಿಕಾರಿಯ ಮಾತನ್ನು ಕೇಳುವುದು ಉತ್ತಮ. ಸಂಗಾತಿಯ ಆದಾಯದಲ್ಲಿ ತುಸು ಏರಿಕೆಯನ್ನು ಕಾಣಬಹುದು. ನವೀನ ಕೃಷಿಯನ್ನು ಮಾಡಲು ಉತ್ಸುಕತೆಯನ್ನು ತೋರುವಿರಿ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಷೇರು ವ್ಯವಹಾರ ಮಾಡುವವರು ತಮ್ಮ ರಕ್ತ ಸಂಬಂಧಿಗಳಿಂದ ಪ್ರತಿರೋಧವನ್ನು ಎದುರಿಸುವ ಸಂದರ್ಭಬರಬಹುದು.ಹಿರಿಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗುವುದು. ತಾಯಿಯಿಂದ ಸೂಕ್ತ ಹಣದ ನೆರವು ದೊರೆಯುತ್ತದೆ.ಚಿನ್ನಬೆಳ್ಳಿಯ ಒಡವೆ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸುತ್ತದೆ. ಆರೋಗ್ಯದ ಬಗ್ಗೆ ಸರಿಯಾದ ಕಾಳಜಿಯನ್ನು ವಹಿಸಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಕೂಡಿ ಬರುವ ಸಾಧ್ಯತೆ ಇದೆ. ಸಂಗೀತಗಾರರಿಗೆ ಬದಲಿ ರೂಪದಲ್ಲಿ ಶಿಷ್ಯರುಗಳು ದೊರೆಯುವರು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗುವುದು. ಸರ್ಕಾರಿ ಕಚೇರಿಗಳ ಕೆಲಸಗಳು ಸರಾಗವಾಗಿ ಆಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.