ಸೋಮವಾರ, ಮೇ 16, 2022
24 °C

ವಾರ ಭವಿಷ್ಯ: 07-02-2021ರಿಂದ 13-02-2021ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ:
8197304680

**
ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಉನ್ನತ ಹುದ್ದೆಯಲ್ಲಿರುವವರಿಂದ ನಿಮ್ಮ ಬಗ್ಗೆ ಅಭಿಮಾನದ ಮಾತುಗಳನ್ನು ಕೇಳಲಿದ್ದೀರಿ. ಧನದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಹಿಳೆಯರ ಕೆಲವು ಇಷ್ಟಾರ್ಥಗಳು ಪೂರ್ಣಗೊಂಡು ಮನೋಲ್ಲಾಸ ಇರುತ್ತದೆ. ನ್ಯಾಯಾಲಯದಲ್ಲಿನ ಕಟ್ಟಳೆಗಳು ವಿಳಂಬವಾಗುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ತುರ್ತು ಕೆಲಸಗಳಲ್ಲಿ ಸಂಬಂಧಿಕರ ನೆರವನ್ನು ಪಡೆದು ಕಾರ್ಯ ಮುಗಿಸುವಿರಿ. ಸಾರ್ವಜನಿಕ ಸಮೂಹದಲ್ಲಿ ಮಾತನಾಡುವಾಗ ಎಚ್ಚರ ಇರಲಿ, ಇಲ್ಲವಾದಲ್ಲಿ ಅದು ನಿಮಗೆ ತಿರುಗುಬಾಣವಾದೀತು. ವೃತ್ತಿಯಲ್ಲಿ ಧನದ ಏಳಿಗೆ ಇರುತ್ತದೆ ಹಾಗೂ ಪದೋನ್ನತಿಯನ್ನು ನಿರೀಕ್ಷಿಸಬಹುದು.

**
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಹೊಸಮನೆ ಕಟ್ಟುವ ಕೆಲಸಗಳು ಕೊಂಚ ನಿಧಾನವಾಗಬಹುದು. ಮಹಿಳೆಯರಿಗೆ ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡುವ ಕೆಲಸ ಮಾಡುವ ಅವಕಾಶ ಒದಗಿ ಬರುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು.ಬಂಧುಗಳಿಂದ ಒತ್ತಾಯ ಪೂರ್ವಕವಾಗಿ ವಿವಾಹ ಪ್ರಸ್ತಾಪಗಳು ಬರಬಹುದು. ನಿಮ್ಮ ಚಟುವಟಿಕೆಗಳನ್ನು ವ್ಯವಹಾರದತ್ತ ಹೆಚ್ಚು ಕೇಂದ್ರೀಕರಿಸುವಿರಿ. ಒಂದೆಡೆ ಸಾಲ ಪಡೆದು ಉಳಿದ ಸಾಲುಗಳನ್ನು ತೀರಿಸಬಹುದು. ಸರ್ಕಾರಿ ಗುತ್ತಿಗೆಗಳನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚಾಗುವುದು.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕೃಷಿಕರಿಗೆ ಅವರ ಜಾಗದಲ್ಲಿ ಉತ್ತಮ ಹಣಕೊಟ್ಟು ಬೆಳೆಯನ್ನು ಖರೀದಿ ಮಾಡುವವರು. ಆರ್ಥಿಕ ಪರಿಸ್ಥಿತಿಯು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಕಚೇರಿ ಕೆಲಸದ ಮೇಲೆ ದೂರ ಪ್ರಯಾಣ ಎದುರಾಗಬಹುದು. ದೊಡ್ಡಮಟ್ಟದ ಬಂಡವಾಳವನ್ನು ಈಗ ಹೂಡಿಕೆ ಮಾಡುವುದು ಬೇಡ. ಕಣ್ಣಿನ ಸೋಂಕಿನ ಬಗ್ಗೆ ಎಚ್ಚರ ವಹಿಸಿರಿ. ಸಾವಯವ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತದೆ. ತಾಯಿಯ ಆರೋಗ್ಯಕ್ಕಾಗಿ ಹಣ ಮೀಸಲಿಡ ಬೇಕಾಬಹುದು. ಮಾಡಬೇಕಾಗಿರುವ ಕೆಲಸಗಳನ್ನು ಆದ್ಯತೆಯ ಮೇಲೆ ಪಟ್ಟಿಮಾಡಿ ಆರಂಭಿಸುವುದು ಒಳ್ಳೆಯದು. ಮಕ್ಕಳು ಹಣಕ್ಕಾಗಿ ಬೇಡಿಕೆ ಇಡಬಹುದು.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ದೃಢವಾದ ಸಂಕಲ್ಪದಿಂದ ಕೆಲಸ ಕಾರ್ಯಗಳನ್ನು ತೆಗೆದುಕೊಂಡು ಕೆಲಸಗಳನ್ನು ಮಾಡಿ ಮುಗಿಸುವಿರಿ. ವ್ಯವಹಾರಗಳಲ್ಲಿನ ಸಮಸ್ಯೆಗಳಿಗೆ ಹಂತಹಂತವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ. ವಿದ್ಯಾಭ್ಯಾಸದ ಬಗ್ಗೆ ಮಕ್ಕಳಿಗೆ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಹಣದ ಒಳಹರಿವಿನಲ್ಲಿ ಏರಿಕೆಯನ್ನು ಕಾಣಬಹುದು. ಸಮಾಜದ ಏಳಿಗೆಗಾಗಿ ಸಲಹೆಯನ್ನು ನೀಡಿ ಗೌರವ ಪಡೆಯುವಿರಿ. ಮಿಲಿಟರಿ ವಿಭಾಗದಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಒದಗಿಬರುತ್ತವೆ. ಸಂಗಾತಿಯ ಆದಾಯದಲ್ಲಿ ಉಂಟಾದ ಏರಿಕೆಯನ್ನು ಕಂಡು ಸಂತೋಷಿಸುವಿರಿ. ಸಂಬಂಧಿಕರೊಡನೆ ಸುದೀರ್ಘವಾಗಿ ಸಮಾಲೋಚನೆ ಮಾಡಿ ಸಂಬಂಧವನ್ನು ವೃದ್ಧಿಸಿಕೊಳ್ಳುವಿರಿ.

**
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಬದುಕಿಗೊಂದು ನಿಶ್ಚಿತವಾದ ವರಮಾನವನ್ನು ಕಂಡುಕೊಳ್ಳುವಿರಿ. ಆಸ್ತಿಯ ವಿಷಯದಲ್ಲಿ ಹೊಸ ತಗಾದೆಗಳು ಬರಬಹುದು.ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸಗಳು ಒದಗಿ ಆದಾಯ ಹೆಚ್ಚುತ್ತದೆ. ಕುಟುಂಬದಲ್ಲಿನ ಕಿರಿಕಿರಿಗಳಿಂದ ಹೊರಬಂದು ನೆಮ್ಮದಿ ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸು ಸಂಸ್ಥೆಗಳಿಂದ ಸಹಾಯ ಧನ ಒದಗಿಬರುತ್ತದೆ. ಸಾಕಷ್ಟು ಒತ್ತಡಗಳನ್ನು ಹೇರಿ ನಿಮ್ಮ ಶತ್ರುಗಳನ್ನು ಬಾಯಿ ಮುಚ್ಚಿಸುವುವಿರಿ. ಬೇರೆಯವರ ಹಣಕಾಸಿನ ಸಮಸ್ಯೆಗಳಿಗೆ ಮಧ್ಯಸ್ಥಿಕೆ ಮಾಡುವುದು ನಿಮಗೆ ದುಬಾರಿಯಾಗಬಹುದು. ಬಾಕಿ ಬರಬೇಕಾಗಿದ್ದ ಹಣಗಳು ಈಗ ಬರುತ್ತವೆ.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ವಿಷಯವೊಂದನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಿರಿ. ಧೈರ್ಯದ ನಡೆ-ನುಡಿಯಿಂದ ಹಿತಶತ್ರು ಗಳನ್ನು ಬಗ್ಗುಬಡಿಯುವಿರಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುತ್ತದೆ. ಪ್ರಾಪ್ತ ವಯಸ್ಕರಿಗೆ ವಿವಾಹ ಸಂಬಂಧಗಳು ಒದಗಿಬರುವ ಸಾಧ್ಯತೆಗಳಿವೆ. ವೃತ್ತಿಜೀವನದಲ್ಲಿ ನಿಮ್ಮನಡವಳಿಕೆಯಿಂದ ವಿರೋಧಿಗಳು ಹುಟ್ಟುವರು.ಗಣ್ಯರೊಂದಿಗೆ ಇದ್ದ ಸಂಬಂಧವನ್ನು ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹಾರಕ್ಕಾಗಿ ಬಳಸಿಕೊಳ್ಳುವಿರಿ. ರಾಜಕೀಯ ಪ್ರವೇಶವನ್ನು ಮಾಡಬೇಕೆಂದು ಇಚ್ಚಿಸುವವರಿಗೆ ಕೆಲವು ಉತ್ತಮ ಅವಕಾಶಗಳು ಒದಗಿ ಬರುತ್ತದೆ.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಅಧ್ಯಯನ ನಿರತರಿಗೆ ಸೂಕ್ತ ವಿಷಯಗಳಲ್ಲಿ ಮೇಲುಗೈ ಸಾಧಿಸುವ ಅವಕಾಶವಿದೆ. ಸಂಸಾರದಲ್ಲಿನ ಸಮಸ್ಯೆಗಳನ್ನು ಒಟ್ಟಿಗೆ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ. ಕೃಷಿ ಕಾರ್ಮಿಕರಿಗೆ ಆರ್ಥಿಕ ಅಭಿವೃದ್ಧಿ ಇರುತ್ತದೆ. ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗ ನಿಮಿತ್ತ ದೂರ ದೂರಿಗೆ ಪ್ರಯಾಣ ಮಾಡಬೇಕಾಗಬಹುದು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಲಕರಣೆಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ, ಹಣಕಾಸಿನ ಸಮತೋಲನವನ್ನು ಕಾಯ್ದುಕೊಳ್ಳುವುದು ಉತ್ತಮ.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ವ್ಯಾಪಾರ ವ್ಯವಹಾರಗಳ ಲಾಭಗಳು ವೃದ್ಧಿಯಾಗುವುದು.ಹೊಸ ವ್ಯಾಪಾರವನ್ನು ಆರಂಭ ಮಾಡುವ ಬಗ್ಗೆ ಸಾಕಷ್ಟು ಚಿಂತನೆಯನ್ನು ನಡೆಸುವಿರಿ. ಜಾಣ್ಮೆಯಿಂದ ಕೆಲಸಗಾರರನ್ನು ಹುರಿದುಂಬಿಸಿ ನಿಮ್ಮ ಕೆಲಸವನ್ನು ಸಾಧಿಸುವಿರಿ. ನಿಮ್ಮ ವ್ಯವಹಾರದ ಲೆಕ್ಕ ಪತ್ರಗಳನ್ನು ಸರಿಯಾಗಿ ಕಾಪಾಡಿರಿ. ಹಣಕಾಸಿನ ಸ್ಥಿತಿ ಇದ್ದಂತೆ ಇರುತ್ತದೆ. ಆಸ್ತಿಯ ದಾಖಲೆಗಳಲ್ಲಿ ಇದ್ದ ವ್ಯತ್ಯಾಸಗಳನ್ನು ಈಗ ಸರಿಪಡಿಸಿ ಕೊಳ್ಳಬಹುದು. ಹರಿತವಾದ ಆಯುಧಗಳನ್ನು ಬಳಸುವಾಗ ಬಹಳ ಎಚ್ಚರವಾಗಿರಿ.ಸಂಸಾರದಲ್ಲಿನ ಕಾವೇರಿದ ಮಾತುಗಳಿಗೆ ಮೌನವಾಗಿರುವುದು ಉತ್ತಮ ಪರಿಹಾರ. ಪಿತ್ರಾರ್ಜಿತ ಆಸ್ತಿಗಳು ಒದಗಿ ಬರುವ ಕಾಲ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ನಿಮ್ಮ ಬಗೆಗಿನ ಅನುಮಾನಗಳು ಪರಿಹಾರ ಆಗುವುದರೊಂದಿಗೆ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಭೂಮಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಅನುಭವಸ್ಥರ ಸಲಹೆಯಂತೆ ಮುಂದುವರೆಯುವುದು ಒಳ್ಳೆಯದು. ಹಿರಿಯರಿಗೆ ವಿನಾಕಾರಣ ನೆರೆಹೊರೆಯವರೊಂದಿಗೆ ವೈಮನಸ್ಸು ಉಂಟಾಗುವ ಸಂದರ್ಭವಿದೆ ಎಚ್ಚರ ವಹಿಸಿರಿ. ತಂದೆತಾಯಿಗಳಿಗೆ ಮಕ್ಕಳ ಸಲುವಾಗಿ ದೂರ ಪ್ರಯಾಣ ಮಾಡುವ ಯೋಗವಿದೆ. ಧರ್ಮಗುರುಗಳ ಅಥವಾ ಸತ್ಪುರುಷರ ದರ್ಶನ ಮಾಡುವಯೋಗವಿದೆ. ನಿಂತಿದ್ದ ವಿದ್ಯೆಗಳನ್ನು ಈಗ ಮುಂದುವರಿಸಬಹುದು. ಹಣಕಾಸಿನ ಸ್ಥಿತಿಯು ಉತ್ತಮ ಮಟ್ಟಕ್ಕೆ ಬರಲಾರಂಭಿಸುತ್ತದೆ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಹಿರಿಯ ಅಧಿಕಾರಿಗಳು ಮೇಲಿನವರ ಸೂಚನೆಯ ಮೇರೆಗೆ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಹುದು. ನೆರೆಹೊರೆಯವರ ಸಂಬಂಧದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ. ತಟಸ್ಥ ರೀತಿಯಲ್ಲಿದ್ದ ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುತ್ತದೆ. ತಾಂತ್ರಿಕ ಇಲಾಖೆ ಮತ್ತು ಕಂಪ್ಯೂಟರ್ ಇಲಾಖೆ ಇವುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೊಸ ರೀತಿಯ ಉಪಕರಣಗಳು ದೊರೆಯುತ್ತವೆ. ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಮಕ್ಕಳಿಂದ ಉತ್ತಮ ಸಹಕಾರ ದೊರೆಯುತ್ತದೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಬಿಡುವಿಲ್ಲದ ಕೆಲಸಗಳಿಂದ ಬಳಲಿಕೆ ಉಂಟಾಗಬಹುದು.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂದರ್ಭ ಒದಗಿ ಧನ್ಯತೆಯನ್ನು ಪಡೆಯುವಿರಿ. ವೈಯಕ್ತಿಕ ಸಮಸ್ಯೆಗಳು ಪರಿಹಾರವಾಗಿ ಮನಸ್ಸಿಗೆ ನೆಮ್ಮದಿ ಮೂಡುತ್ತದೆ. ನೆರೆಹೊರೆಯವರೊಂದಿಗೆ ಸಂಬಂಧಗಳು ಸುಧಾರಣೆ ಆಗುತ್ತದೆ. ವಾಸಸ್ಥಳದ ಬದಲಾವಣೆಯ ಚರ್ಚೆಯು ಮುನ್ನೆಲೆಗೆ ಬರುತ್ತದೆ. ಕೆಲಸಗಾರರ ಕೊರತೆಯಿಂದ ಉದ್ಯಮಿಗಳಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ. ನವೀನ ರೀತಿಯ ಕೃಷಿಯನ್ನು ಮಾಡುವ ನಿಮ್ಮ ಆಸೆ ಈಡೇರುತ್ತದೆ. ಅನವಶ್ಯಕ ಓಡಾಟಗಳು ದೇಹಾಲಸ್ಯ ತರಬಹುದು. ಹೈನುಗಾರಿಕೆ ಮಾಡುವವರಿಗೆ ಹಣದ ಅಭಿವೃದ್ಧಿಯಾಗುತ್ತದೆ. ಸಂಗಾತಿಯಿಂದ ಸಕಾಲಕ್ಕೆ ಸಹಕಾರ ಒದಗುತ್ತದೆ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಉದ್ಯೋಗ ಕ್ಷೇತ್ರಗಳು ಉತ್ತಮಗೊಂಡು ಆರ್ಥಿಕ ಬಲವರ್ಧನೆಯನ್ನು ಕಾಣುವಿರಿ. ಉದ್ಯಮಿಗಳು ಹೊಸ ಯಂತ್ರಗಳನ್ನು ಖರೀದಿಸುವ ಸಾಧ್ಯತೆ ಇದೆ. ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆಯುವ ಅವಶ್ಯಕತೆ ನೀಗಲಿದೆ. ಕೃಷಿ ಜಮೀನಿನಲ್ಲಿ ಹೊಸ ಕೆಲಸಗಳು ಭರದಿಂದ ಸಾಗಲಿವೆ. ಮಧ್ಯಸ್ಥರ ಸಹಾಯದಿಂದ ನ್ಯಾಯಾಲಯದಲ್ಲಿನ ದಾವೆಗಳು ಕೊನೆಗೊಳ್ಳುತ್ತವೆ. ಕೃಷಿಕರಿಗೆ ಉತ್ತಮ ಲಾಭ ಒದಗುವ ಸಂದರ್ಭ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಆದಾಯ ಹೆಚ್ಚುತ್ತದೆ. ಸಂಗಾತಿಯ ಸಹಕಾರ ಎಲ್ಲಾ ಕೆಲಸಗಳಿಗೆ ಒದಗುತ್ತದೆ. ಹೊಸ ಆಸ್ತಿಯ ಖರೀದಿಯ ಬಗ್ಗೆ ಆಲೋಚಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.