ಭಾನುವಾರ, ಏಪ್ರಿಲ್ 11, 2021
27 °C

ವಾರ ಭವಿಷ್ಯ: 7-03-2021 ರಿಂದ 13-03-2021ರ ವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ:
8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಂಡು ಸಂತೋಷದಿಂದ ಕಾಲ ಕಳೆಯುವಿರಿ. ಮನೆಯನ್ನು ಕಟ್ಟುತ್ತಿರುವವರು ಕೆಲಸ ಪೂರ್ಣಗೊಂಡು ನೆಮ್ಮದಿ ಕಾಣುವರು. ಅಪರಿಚಿತ ವ್ಯಕ್ತಿಗಳಿಂದ ನಿಮಗೆ ಸಹಾಯ ದೊರೆಯುತ್ತದೆ. ಆಸ್ತಿ ಖರೀದಿಮಾಡುವ ಸಾಧ್ಯತೆ ಇದೆ. ಮಕ್ಕಳ ವಿವಾಹದ ವಿಷಯದಲ್ಲಿ ಪ್ರಗತಿಯನ್ನು ಕಾಣಬಹುದು. ಸಾಲದಿಂದ ಮುಕ್ತಿ ಹೊಂದಬಹುದು.

***

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಹೊಸದಾಗಿ ಆರಂಭಿಸಬೇಕೆಂದು ಇರುವ ಯೋಜನೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ ಹಾಗೂ ಅದರಲ್ಲಿನ ಆಗು ಹೋಗುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಿರಿ. ಆರ್ಥಿಕ ಸ್ಥಿತಿಯು ನಿಧಾನವಾಗಿ ಸುಧಾರಿಸುತ್ತದೆ. ವಿದೇಶಾಂಗ ಇಲಾಖೆಗಳಲ್ಲಿ ಕೆಲಸಮಾಡುವವರ ಭತ್ಯೆಗಳು ಹೆಚ್ಚಾಗಬಹುದು. ಪ್ರವಾಸಿ ಸಂಸ್ಥೆಗಳನ್ನು ನಡೆಸುತ್ತಿರುವವರ ಆದಾಯ ನಿಧಾನವಾಗಿ ಏರುತ್ತದೆ. ಉದ್ದಿಮೆ ನಡೆಸುತ್ತಿರುವವರು ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ತುರ್ತು ಕೆಲಸಗಳು ಎದುರಾಗುವ ಸಾಧ್ಯತೆ ಇದೆ ಹಾಗೂ ಅನಿವಾರ್ಯ ಪ್ರಯಾಣಗಳು ಒದಗಿ ಬರಬಹುದು. ಕೆಲವು ರಾಜಕೀಯ ವ್ಯಕ್ತಿಗಳಿಗೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಅವಕಾಶವಿರುತ್ತದೆ. ಅನಿರೀಕ್ಷಿತ ಆದಾಯ ಮತ್ತು ಖರ್ಚುಗಳು ಆಗಬಹುದು. ತಂದೆಯಿಂದ ಸಾಕಷ್ಟು ಧನಸಹಾಯ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ.

***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಹೊಸ ಉದ್ಯಮ ಪ್ರಾರಂಭಕ್ಕೆ ಇದು ಉತ್ತಮ ಕಾಲ. ಮಹಿಳೆಯರು ತಮ್ಮ ವ್ಯವಹಾರಗಳನ್ನು ಅನ್ಯರಿಗೆ ವಹಿಸುವುದು ಬೇಡ,  ಹೀಗೆ ಮಾಡಿದಲ್ಲಿ ವ್ಯವಹಾರದ ಮೇಲಿನ ಹಿಡಿತವನ್ನು ಕಳೆದುಕೊಳ್ಳುವಿರಿ. ವಕೀಲಿ ವೃತ್ತಿಯನ್ನು ಮಾಡುತ್ತಿರುವವರಿಗೆ ವೃತ್ತಿಯಲ್ಲಿನ ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳಲು ವಿಶ್ರಾಂತಿ ಅಗತ್ಯ. ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂತೋಷವನ್ನು ಕಾಣುವಿರಿ.

***

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಆಭರಣ ತಯಾರಕರಿಗೆ ಹೆಚ್ಚಿನ ತಯಾರಿಕೆಗಾಗಿ ಹೊಸ ಖರೀದಿ ಆದೇಶಗಳು ದೊರೆಯಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಾಕಷ್ಟು ನಿಗಾವಹಿಸುವುದು ಬಹಳ ಉತ್ತಮ. ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಜಿಜ್ಞಾಸೆಗಳು ಮೂಡಿ ಹಿಂಜರಿಕೆಯನ್ನು ಕಾಣಬಹುದು. ವಿದ್ಯಾರ್ಥಿಗಳ ಶ್ರಮ ಸಫಲವಾಗಿ ಉತ್ತಮ ಫಲಿತಾಂಶವನ್ನು ಕಾಣಬಹುದು.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಜಮೀನಿನಲ್ಲಿ ಕೃಷಿ ಕಾರ್ಯಗಳನ್ನು ಭರದಿಂದ ಮಾಡುವಿರಿ. ಹಣಕಾಸು ಸಂಸ್ಥೆಗಳ ಸಾಲಗಳನ್ನು ತೀರಿಸಬಹುದು. ಹಿರಿಯರ ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಶಿಕ್ಷಣ ಕ್ಷೇತ್ರದಲ್ಲಿರುವವರು ತಮ್ಮ ಸೇವೆಗಾಗಿ ಗುರುತಿಸಲ್ಪಡುವರು. ಅವರಿವರ ಏಳಿಗೆಯ ಬಗ್ಗೆ ಅಸಹನೆ ಪಡುವುದನ್ನು ಬಿಟ್ಟು ನಿಮ್ಮ ಏಳಿಗೆಯ ಬಗ್ಗೆ ಚಿಂತಿಸಿರಿ. ನಿಮ್ಮ ಮಕ್ಕಳಿಂದ ನೀವು ಧನಸಹಾಯ ನಿರೀಕ್ಷಿಸಬಹುದು. ಕಣ್ಣಿನ ತೊಂದರೆಗಳು ಕಂಡುಬಂದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಹೊಸ ಆಸ್ತಿಯನ್ನು ಖರೀದಿ ಮಾಡುವಾಗ ದಾಖಲಾತಿಗಳ ಬಗ್ಗೆ ಸಾಕಷ್ಟು ಗಮನವಹಿಸಿರಿ, ಮೋಸ ಹೋಗುವ ಸಾಧ್ಯತೆಯಿದೆ. ವೈಯಕ್ತಿಕ ವಿಚಾರಗಳಿಗೆ ಸಾಕಷ್ಟು ಗಮನಹರಿಸಬೇಕಾದ ಅನಿವಾರ್ಯತೆ ಇದೆ. ಆರ್ಥಿಕ ಸ್ಥಿತಿಯು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಕೈಕೆಳಗಿನ ಕೆಲಸಗಾರರ ಜೊತೆ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಕಾಲ. ರಾತ್ರಿ ವೇಳೆಯಲ್ಲಿ ಒಬ್ಬರೇ ದೂರ ಪ್ರಯಾಣವನ್ನು ಮಾಡುವುದು ಬೇಡ.

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವಿರಿ. ತಾಯಿಯ ಇಚ್ಛೆಯನ್ನು ಪೂರೈಸಲು ಅವರು ಆಸೆಪಟ್ಟ ವಸ್ತುಗಳನ್ನು ಕೊಡಿಸುವಿರಿ. ವೃತ್ತಿ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಆಲೋಚಿಸಿ ಪರಿಹಾರವನ್ನು ಕಂಡುಕೊಳ್ಳುವಿರಿ. ವ್ಯವಹಾರಗಳಲ್ಲಿ ಹೊಸತನವನ್ನು ತರಲು ಸಾಕಷ್ಟು ಪ್ರಯತ್ನ ಮಾಡುವಿರಿ. ಕೋರ್ಟ್‌ ಕಚೇರಿ ಕೆಲಸಗಳಲ್ಲಿ ಯಶಸ್ಸನ್ನು ಕಾಣಬಹುದು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸ್ವಯಂ ಉದ್ಯೋಗಿಗಳ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.

***
ಧನಸ್ಸು ರಾಶಿ( ಮೂಲ ಪರ‍್ವಾಷಾಢ ಉತ್ತರಾಷಾಢ 1 )
ತುರ್ತು ವಿಷಯಗಳಿಗಾಗಿ ಸಂಬಂಧಿಕರ ನೆರವನ್ನು ಪಡೆಯುವಿರಿ. ಗಣಕಯಂತ್ರಗಳು ಮತ್ತು ಅದರ ಬಿಡಿಭಾಗಗಳನ್ನು ಮಾರುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇದೆ. ನಿಂತಿದ್ದ ಹಣ ಈಗ ಬರಲು ಆರಂಭಿಸುತ್ತದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆತು ಈಗ ಸುಭದ್ರತೆಯತ್ತ ಸಾಗುತ್ತದೆ. ನಿಮ್ಮ ಪರಿಶ್ರಮದಿಂದ ಉದ್ಯೋಗದಲ್ಲಿ ಸಾಕಷ್ಟು ಯಶಸ್ಸನ್ನು ಕಾಣಬಹುದು. ಬಂಧುಗಳ ಜೊತೆ ಸೇರಿ ಹೊಸ ಆಸ್ತಿ ಖರೀದಿ ಮಾಡುವತ್ತ ಗಮನ ಹರಿಸುವಿರಿ.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಸ್ತ್ರೀಯರಿಗೆ ಉನ್ನತ ಸ್ಥಾನಮಾನಗಳು ಪ್ರಾಪ್ತವಾಗುವುದರ ಜೊತೆಗೆ ಗೌರವಾದರಗಳು ದೊರೆಯುತ್ತವೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸೂಕ್ತ ಸ್ಥಾನ ಸಹ ದೊರೆಯುತ್ತದೆ. ಹೊಸ ವ್ಯಾಪಾರಗಳತ್ತ ಗಮನಹರಿಸಿ ಅದರ ಆಗುಹೋಗುಗಳನ್ನು ತಿಳಿಯಲು ಯತ್ನಿಸುವಿರಿ. ವಿದ್ವಾಂಸರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಉದ್ಯಮವೊಂದರ ಮಂಜೂರಾತಿ ಸರ್ಕಾರದಿಂದ ದೊರೆಯುತ್ತದೆ. ದಕ್ಷತೆಯನ್ನು ಅಳವಡಿಸಿಕೊಂಡು ಉದ್ಯಮದಲ್ಲಿ ಆರ್ಥಿಕ ಶಿಸ್ತನ್ನು ತರುವಿರಿ. ಆಭರಣ ತಯಾರಿಕೆಯನ್ನು ಮಾಡುವವರಿಗೆ ಕೈತುಂಬಾ ಕೆಲಸವಿರುತ್ತದೆ. ಭೂಮಿ ಅಥವಾ ನಿವೇಶನ ಖರೀದಿ ಮಾಡುವ ಸಾಧ್ಯತೆಯಿದೆ. ವಯಸ್ಕರು ಉದ್ಯೋಗದಲ್ಲಿ ಮೇಲಧಿಕಾರಿಗಳ ವಿರುದ್ಧ ಮಾತನಾಡದಿರುವುದು ಬಹಳ ಉತ್ತಮ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹೊಸ ವ್ಯಕ್ತಿಯ ಪರಿಚಯವಾಗಿ ಅವರೊಡನೆ ಹೊಸ ವ್ಯಾಪಾರಕ್ಕೆ ಕೈಹಾಕುವ ಸಾಧ್ಯತೆಗಳಿವೆ. ಹಣ್ಣು-ತರಕಾರಿಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸಿ ಆದಾಯ ಹೆಚ್ಚುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯಬಹುದು. ಬಂಧುಗಳ ಸಂತೋಷ ಕಾರ್ಯಗಳಲ್ಲಿ ಭಾಗವಹಿಸುವ ಲಕ್ಷಣಗಳಿವೆ. ಹೈನುಗಾರಿಕೆ ಮಾಡುವವರ ಆದಾಯ ವೃದ್ಧಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.