ಗುರುವಾರ , ಆಗಸ್ಟ್ 11, 2022
21 °C

ವಾರ ಭವಿಷ್ಯ: 20-12-2020 ರಿಂದ 26-12-2020 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ

ಜ್ಯೋತಿಷ್ಯ ಪದ್ಮಭೂಷಣ

ಸಂಪರ್ಕಕ್ಕೆ 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಗುತ್ತಿಗೆ ವ್ಯವಹಾರ ಮಾಡುತ್ತಿರುವವರಿಗೆ ಹೊಸ ಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ಶುಭ ಕಾರ್ಯಗಳ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುವ ಲಕ್ಷಣಗಳಿವೆ. ಗುತ್ತಿಗೆ ಕಾರ್ಮಿಕರ ಸಮಸ್ಯೆ ಪರಿಹರಿಸಲು ಹೊಸ ಉಪಾಯ ಕಂಡುಕೊಂಡು ಅದರಂತೆ ಪರಿಹರಿಸಿಕೊಳ್ಳುವಿರಿ. ನಿಮ್ಮ ನೇರ ಮಾತಿನಿಂದ ಹೊಸ ವೈರಿಗಳು ಹುಟ್ಟಿಕೊಳ್ಳಬಹುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮತ್ತು ಸಹಕಾರ ದೊರೆತು ಸಂತಸವಾಗುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಹಲ್ಲಿನ ತೊಂದರೆ ಅಥವಾ ಬಾಯಿಯ ಹುಣ್ಣು ಕಾಡಬಹುದು.

***

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವ್ಯಾಪಾರಸ್ಥರಿಗೆ ವ್ಯವಹಾರಗಳಲ್ಲಿ ಚೇತರಿಕೆ. ಕೆಲಸಗಳು ನಿಧಾನವಾದರೂ ಪ್ರಗತಿ ನಿಶ್ಚಿತ. ಬಾಕಿ ಹಣ ಈಗ ಬರುವ ಸಾಧ್ಯತೆ ಇದೆ. ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ವಾಹನ ಮಾರಾಟಗಾರರಿಗೆ ಮಾರಾಟದಲ್ಲಿ ಚೇತರಿಕೆ. ದಲ್ಲಾಳಿ ವ್ಯವಹಾರಸ್ಥರಿಗೆ ನಷ್ಟವಿರುವುದಿಲ್ಲ. ಕೃಷಿ ವಿಜ್ಞಾನ ಓದುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಸಾಹಸ ಕಲಾವಿದರಿಗೆ ನಿಂತಿದ್ದ ಮಾರುಕಟ್ಟೆ ಈಗ ಆರಂಭವಾಗುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ.

***

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಚೇತರಿಕೆ ಕಾಣಬಹುದು. ಇದ್ದ ಕೃಷಿ ಉತ್ಪನ್ನಕ್ಕೆ ಹೆಚ್ಚಿನ ಹಣ ದೊರೆಯುವ ಸಾಧ್ಯತೆ ಕೃಷಿಕರಿಗೆ ಇದೆ. ಪಾರಂಪರಿಕ ಔಷಧಿ ತಯಾರಿಕರಿಗೆ ಬೇಡಿಕೆ ಬಂದು ಪ್ರಸಿದ್ಧಿಯಾಗುವರು. ರೇಷ್ಮೆ ಸೀರೆಗೆ ಕುಚ್ಚು ಮತ್ತು ಇತರೆ ಅಲಂಕಾರ ಮಾಡುವವರಿಗೆ ಬೇಡಿಕೆ ಬರುತ್ತದೆ. ಬೇರೆಯವರ ಮಾತು ಕೇಳಿ ದೊಡ್ಡಮಟ್ಟದಲ್ಲಿ ಹಣವನ್ನು ಯಾವುದೇ ಕಂಪನಿಯ ಮೇಲೆ ಹೂಡಬೇಡಿ. ಅಲ್ಲಿ ಮೋಸಹೋಗುವ ಸಾಧ್ಯತೆಗಳಿರುತ್ತವೆ ಎಚ್ಚರ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಸರ್ಕಾರದ ಕೆಲವು ಉನ್ನತಾಧಿಕಾರಿಗಳ ಸಹಾಯದಿಂದ ಉಪಯುಕ್ತ ಯೋಜನೆಯನ್ನು ಅನುಷ್ಠಾನಗೊಳಿಸಿ ಎಲ್ಲರಿಂದ ಪ್ರಶಂಸೆ ಪಡೆಯುವರು.

***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ದಿನಸಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಆದಾಯ ಬರುತ್ತದೆ. ಕೆಲವೊಂದು ದಿನಸಿ ಸಗಟು ವ್ಯಾಪಾರಿಗಳಿಗೆ ಕೂಡಿಟ್ಟ ಧಾನ್ಯಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ. ಧನ ಸಂಗ್ರಹ ಉತ್ತಮವಾಗಿರುತ್ತದೆ. ಔಷಧಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಲಾಭವೂ ಹೆಚ್ಚುವುದು. ರಾಸಾಯನಿಕ ವಸ್ತುಗಳ ತಯಾರಕರಿಗೆ ಹೆಚ್ಚಿನ ತಯಾರಿಕೆಗೆ ಆದೇಶ ಬರುವುದು. ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಅವರ ಗುರಿ ಮುಟ್ಟಲು ಬೇಕಾದ ಅನುಕೂಲತೆಗಳು ಸಮಯಕ್ಕೆ ತಕ್ಕಂತೆ ದೊರೆಯುತ್ತವೆ. ನಿಮ್ಮ ಎಲ್ಲ ವ್ಯವಹಾರಗಳಿಗೆ ಸಂಗಾತಿಯ ಬೆಂಬಲ ಇರುತ್ತದೆ. ತಂದೆಯಿಂದ ನಿಮಗೆ ವ್ಯವಹಾರದ ವರ್ಗಾವಣೆ ಆಗಬಹುದು.

***

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ತೈಲೋತ್ಪನ್ನಗಳ ಮಾರಾಟಗಾರರಿಗೆ ಹೆಚ್ಚಿನ ಕಮಿಷನ್ ದೊರೆಯುವ ಸಾಧ್ಯತೆ ಇದೆ. ಯಂತ್ರಗಳನ್ನು ಮಾರುವ ಮಧ್ಯವರ್ತಿಗಳಿಗೆ ಈಗ ವ್ಯವಹಾರ ಚೇತರಿಕೆಯ ಕಾಲ. ವ್ಯವಹಾರದಲ್ಲಿನ ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ನಿಮ್ಮ ಮಾತಿಗೆ ಬಹಳ ಮಹತ್ವ ಬರುತ್ತದೆ ಮತ್ತು ಮುಂದಿನ ವ್ಯವಹಾರದಲ್ಲಿನ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಮಕ್ಕಳಿಂದ ನಿಮಗೆ ಗೌರವ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಯನ್ನು ಮಾಡುವ ಅವಕಾಶವಿದೆ. ಭೂಮಿಯ ಅಭಿವೃದ್ಧಿಯನ್ನು ಮಾಡುವವರಿಗೆ ಹೊಸ ಯೋಜನೆಗಳು ಕೈಗೂಡುವ ಯೋಗವಿದೆ.

***

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಬಂಧುಗಳೊಡನೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ನೌಕರರಿಗೆ ನಿಂತಿದ್ದ ಬಾಕಿ ಹಣಗಳು ಈಗ ಬರುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಒದಗಿದ್ದ ತೊಂದರೆಗಳು ನಿವಾರಣೆಯಾಗಿ ವಿದ್ಯೆ ಮುಂದುವರೆಯುವುದು. ಶೀತ ಪ್ರವೃತ್ತಿ ಇರುವವರು ಕಡೆ ಎಚ್ಚರ ವಹಿಸಿ. ಸಂಗಾತಿಯು ನಿಮ್ಮ ಕೆಲವು ಮಾತುಗಳಿಗೆ ಸಿಟ್ಟಾಗಬಹುದು ಹಾಗೂ ಅನಿರೀಕ್ಷಿತ ಖರ್ಚುಗಳಿಗೆ ದಾರಿ ಮಾಡಿಕೊಳ್ಳಬಹುದು. ಹಿರಿಯರಿಂದ ಹಣದ ಸಹಾಯ ನಿರೀಕ್ಷಿಸಬಹುದು. ಉದ್ಯೋಗದಲ್ಲಿ ನಿಮ್ಮ ಮೇಲಿನವರನ್ನು ಎದುರುಹಾಕಿಕೊಳ್ಳುವುದು ಬೇಡ, ಇದು ಶಿಸ್ತಿನ ಕ್ರಮಕ್ಕೆ ಕಾರಣ ಆಗಬಹುದು. ಸ್ವಂತ ಆರೋಗ್ಯದ ಕಡೆ ಗಮನ ಹರಿಸಿ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಜಾಹೀರಾತುಗಳ ಕಂಪನಿಗಳಿಗೆ ವಹಿವಾಟು ಹೆಚ್ಚಾಗುವುದು. ವಿದೇಶಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಉದ್ಯೋಗ ಅರಸುತ್ತಿರುವವರಿಗೆ ಅಭಿರುಚಿ ತಕ್ಕಂತೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಸಾಮಾಜಿಕ ಕಾರ್ಯಗಳನ್ನು ಮಾಡುವಾಗ ಸುಳ್ಳು ಆಶ್ವಾಸನೆ ಕೊಡದಿರುವುದು ಉತ್ತಮ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ವಹಿಸುವುದು ಉತ್ತಮ. ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಸರ್ಕಾರದಿಂದ ಬೇಕಾದ ದಾಖಲಾತಿಗಳು ಒದಗುತ್ತವೆ.

***

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ರಾಜಕೀಯದಲ್ಲಿರುವವರು ಪ್ರಭಾವಿ ವ್ಯಕ್ತಿಗಳ ಸಹವಾಸದಿಂದಾಗಿ ಸ್ಥಾನಮಾನ ಪಡೆಯುವರು. ಮಿಲಿಟರಿ ಹುದ್ದೆಗಳಲ್ಲಿರುವ ಕೆಲವರಿಗೆ ಮುಂಚೂಣಿ ಸೂಕ್ಷ್ಮ ಕೇಂದ್ರಗಳಲ್ಲಿ ಮಾಡುವ ಅವಕಾಶ ಸಿಗುತ್ತದೆ. ಮಿತ್ರರ ಮಧ್ಯಸ್ಥಿಕೆಯಿಂದ ನಡೆಯುವ ಗಂಭೀರ ಚರ್ಚೆಗಳಿಂದ ವ್ಯವಹಾರದಲ್ಲಿನ ಸಿಕ್ಕುಗಳು ಸರಿ ಆಗುತ್ತವೆ. ಆಸ್ತಿಯ ವಿವಾದಗಳು ಪರಿಹಾರವಾಗುತ್ತದೆ. ಸಂಗಾತಿಯು ಕೆಲವೊಂದು ವಿಷಯಗಳಿಗೆ ನಿಮ್ಮ ಮೇಲೆ ಕೋಪಗೊಳ್ಳಬಹುದು. ಧನಾದಾಯವು ಸಾಮಾನ್ಯ. ಕೆಲವೊಂದು ಉತ್ತಮ ಪಾಲುದಾರಿಕೆಯ ವ್ಯವಹಾರದಲ್ಲಿ ನಿಮಗೆ ಅವಕಾಶ ದೊರೆತು ನಿಮ್ಮ ವರ್ಚಸ್ಸು ಬೆಳೆಯುತ್ತದೆ.

***

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಜೇಷ್ಠತೆಯ ಆಧಾರದ ಮೇಲೆ ಉನ್ನತಸ್ಥಾನ ಸಿಗಬಹುದು. ಸರ್ಕಾರಿ ಸಾಲಗಳು ಸುಲಭವಾಗಿ ಸಿಗುತ್ತವೆ. ಕೃಷಿಕರಿಗೆ ಉತ್ತಮ ಸಾಲ ಸೌಲಭ್ಯಗಳು ದೊರೆಯುತ್ತವೆ. ಹಣದ ಒಳ ಹರಿವು ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ. ನೂತನ ಉದ್ಯೋಗಕ್ಕಾಗಿ ಪ್ರಯತ್ನಪಡುತ್ತಿರುವವರಿಗೆ ಸೂಕ್ತ ಉದ್ಯೋಗದ ಸಾಧ್ಯತೆ ಇದೆ. ಗೃಹನಿರ್ಮಾಣ ಕಾರ್ಯ ಆರಂಭಿಸುವವರಿಗೆ ಉತ್ತಮ ಕಾಲ. ನಿಮ್ಮ ವಿರುದ್ಧ ಸಲ್ಲದ ಪಿತೂರಿ ಮಾಡುವವರ ಬಣ್ಣ ಬಯಲಾಗಲಿದೆ. ಹಣಕಾಸು ಸಂಸ್ಥೆ ನಡೆಸುತ್ತಿರುವವರಿಗೆ ಬಾಕಿ ಹಣ ಈಗ ವಸೂಲಿ ಆಗುತ್ತವೆ. ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿ.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಭರವಸೆಗಳ ಮಹಾಪೌರ ಹರಿದುಬಂದು ಮನಸ್ಸಿಗೆ ಸಂತೋಷವೆನಿಸುತ್ತದೆ. ಚಿನ್ನಾಭರಣ ಖರೀದಿಸುವ ಎಲ್ಲಾ ರೀತಿಯ ಅವಕಾಶಗಳಿವೆ. ತಾಂತ್ರಿಕ ಪರಿಣತರಿಗೆ ಉತ್ತಮ ಅವಕಾಶಗಳು ದೊರೆತು ಆದಾಯ ಹೆಚ್ಚಲಿದೆ. ಪ್ರಚಾರ ಸಾಮಗ್ರಿಗಳ ತಯಾರಕರಿಗೆ ವ್ಯವಹಾರ ಹೆಚ್ಚುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಕಾರ್ಯಸಾಧನೆಯ ತೃಪ್ತಿ ಬರುತ್ತದೆ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಪ್ರಗತಿ ನೋಡಿ ಸಂತಸವಾಗುತ್ತದೆ. ಸಂತಾನ ಆಸಕ್ತರಿಗೆ ಶುಭ ಸಮಾಚಾರ ಒದಗುತ್ತದೆ. ನಿವೇಶನ ಅಥವಾ ಇತರೆ ಸ್ಥಿರಾಸ್ತಿ ಕೊಳ್ಳಲು ಉತ್ತಮ ಅವಕಾಶವಿದೆ. ವಿದೇಶದಲ್ಲಿರುವ ಮಕ್ಕಳಿಂದ ಸಹಾಯ ದೊರೆಯುತ್ತದೆ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಉದ್ಯೋಗಸ್ಥರಿಗೆ ಸ್ಥಾನ ಬದಲಾವಣೆಯ ಸಾಧ್ಯತೆಯ ಲಕ್ಷಣ ನಿಚ್ಚಳವಾಗಿವೆ. ನಿಮ್ಮ ಹೊಂದಿಕೆಯ ಮನೋಭಾವ ನೋಡಿ ಹೊಸ ಪಾಲುದಾರರು ನಿಮ್ಮ ಜೊತೆಗೂಡಿ ವ್ಯವಹಾರ ಮಾಡಲು ಉತ್ಸುಕರಾಗುವರು ಹಾಗೂ ಕೆಲವೊಂದು ಮಹತ್ವದ ವಿಷಯಗಳಲ್ಲಿ ಪ್ರಮುಖ ಒಪ್ಪಂದಗಳು ಏರ್ಪಡುತ್ತವೆ. ಮಕ್ಕಳ ಹಳಿತಪ್ಪಿದ ವ್ಯವಹಾರಗಳನ್ನು ಸಾಕಷ್ಟು ಶ್ರಮವಹಿಸಿ ಸರಿದಾರಿಗೆ ತರುವಿರಿ. ನಿವೇಶನದ ದಾಖಲೆಗಳಲ್ಲಿ ಇದ್ದ ವ್ಯತ್ಯಾಸಗಳು ಈಗ ಸರಿಯಾಗುತ್ತವೆ. ತಾಯಿಯ ಜೊತೆ ಸಂಬಂಧ ಸಾಕಷ್ಟು ಸುಧಾರಿಸುತ್ತದೆ. ಆದರೆ ತಂದೆಯೊಡನೆ ಸಂಬಂಧ ಹಳಸುವ ಸಾಧ್ಯತೆಯಿದೆ.

***

ಮೀನ ರಾಶಿ(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಸಹೋದ್ಯೋಗಿಗಳು ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡುವರು. ಸರ್ಕಾರದಿಂದ ನಿಮಗೆ ಬರಬೇಕಾಗಿದ್ದ ಬಾಕಿ ಹಣಗಳು ಈಗ ಬರುತ್ತವೆ. ಆರೋಗ್ಯದಲ್ಲಿ ಸುಧಾರಣೆಯಾಗಿ ಮನಸ್ಸಿನಲ್ಲಿದ್ದ ಆತಂಕಗಳು ನಿವಾರಣೆಯಾಗುತ್ತವೆ. ದೂರದೂರಿಗೆ ಹೋಗುವ ಚಿಂತನೆ ಮಾಡುವಿರಿ. ಕೈಗೊಂಡ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಚೇರಿಯಲ್ಲಿ ಮೇಲಧಿಕಾರಿಗಳ ಗಮನ ಸೆಳೆಯುವಿರಿ. ಕೆಲವು ಮಹಿಳೆಯರ ಬಹುದಿನಗಳ ಒಡವೆ ಕೊಳ್ಳುವ ಆಸೆ ಈಡೇರುತ್ತದೆ. ತಾಯಿಯೊಂದಿಗೆ ಸಂಬಂಧ ಸ್ವಲ್ಪ ಕಡಿಮೆಯಾಗುತ್ತದೆ. ಕೃಷಿಕರ ಆದಾಯ ನಿಧಾನವಾಗಿ ಏರತೊಡಗುತ್ತದೆ ಮತ್ತು ಸಾಲ ಸೌಲಭ್ಯಗಳು ದೊರೆಯುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.