ಸೋಮವಾರ, ಮಾರ್ಚ್ 20, 2023
30 °C

ವಾರ ಭವಿಷ್ಯ | 2023ರ ಜನವರಿ 15 ರಿಂದ ಜನವರಿ 21 ರವರೆಗೆ

ಎಂ. ಎನ್. ಲಕ್ಷ್ಮೀನರಸಿಂಹಸ್ವಾಮಿ                    Updated:

ಅಕ್ಷರ ಗಾತ್ರ : | |

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಮಾತುಗಳಲ್ಲಿ ಕಾಠಿಣ್ಯತೆ ಇರುತ್ತದೆ. ನಿಮ್ಮ ನಡವಳಿಕೆ ತೀರಾ ವೈಯಕ್ತಿಕವಾಗಿರುತ್ತದೆ. ಸಂಸಾರದಲ್ಲಿ ಸ್ವಲ್ಪ ಕಾವೇರಿದ ವಾತಾವರಣ ಮೂಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ವೃತ್ತಿಯಲ್ಲಿ ಇದ್ದ ಗೋಜಲುಗಳು ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ. ಸ್ವಂತ ಆರೋಗ್ಯ ಅಥವಾ ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚು ಮಾಡುವಿರಿ. ಸಂಗಾತಿಯ ಬೇಡಿಕೆಯನ್ನು ಈಡೇರಿಸಲು ಒಡವೆ ಕೊಳ್ಳಬೇಕಾಗಬಹುದು. ಕಬ್ಬಿಣದಲ್ಲಿ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿದೆ. ನವೀನ ರೀತಿ ಕೃಷಿ ಮಾಡುವವರಿಗೆ ಪ್ರೋತ್ಸಾಹಧನ ದೊರೆಯಬಹುದು. ಮಿಶ್ರಲೋಹಗಳನ್ನು ತಯಾರು ಮಾಡುವವರಿಗೆ ವ್ಯಾಪಾರ ಹೆಚ್ಚಾಗಿ ಲಾಭ ಹೆಚ್ಚುತ್ತದೆ. ಹಳೆಯ ಕಬ್ಬಿಣ ಮಾರಾಟ ಮಾಡುವವರಿಗೆ ವ್ಯಾಪಾರ ವಿಸ್ತರಿಸುತ್ತದೆ. ದೈವ ಕಾರ್ಯಗಳಿಗಾಗಿ ಹಣ ಖರ್ಚಾಗುವುದು.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಸಾಹಸ ಪ್ರವೃತ್ತಿ ಹೆಚ್ಚಾಗುತ್ತದೆ. ಅನಿರೀಕ್ಷಿತ ಧನಾಗಮನ ಆಗಬಹುದು. ಸೋದರಿಯರೊಡನೆ ಕಾವೇರಿದ ಮಾತುಗಳಾಗಬಹುದು. ತಂದೆಯಿಂದ ಪಿತ್ರಾರ್ಜಿತ ಆಸ್ತಿ ಬರುವ ಸೂಚನೆ ಇದೆ. ವಿದ್ಯಾರ್ಥಿಗಳಿಗೆ ಇದ್ದ ಸವಲತ್ತು  ಕಡಿಮೆಯಾಗಬಹುದು. ಕಣ್ಣಿನ ಬಗ್ಗೆ ಎಚ್ಚರವಹಿಸಿರಿ. ಪಶುಸಂಗೋಪನೆ ಮಾಡುವವರು ಪಶುಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಸಂಗಾತಿಯೊಡನೆ ಉತ್ತಮ ಹೊಂದಾಣಿಕೆ ಮೂಡುತ್ತದೆ. ಹೊಸ ರೀತಿಯ ವ್ಯವಹಾರಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಅದರ ಪೂರ್ವಾಪರ ತಿಳಿದು ಮುಂದುವರಿಯಿರಿ. ಸರ್ಕಾರಿ ಕಚೇರಿಗಳಲ್ಲಿ ಪರಿಚಯದವರ ಮೂಲಕ ಕೆಲಸಗಳು ಸರಾಗವಾಗಿ ಆಗುತ್ತವೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ವ್ಯಾಪಾರ ವ್ಯವಹಾರಗಳ ಬಗ್ಗೆ ಹೆಚ್ಚು ಚಿಂತನೆ ಮಾಡುವಿರಿ. ಆದಾಯವು ನಿಮ್ಮ ಖರ್ಚನ್ನು ತುಂಬಿಸುವಷ್ಟು ಇರುತ್ತದೆ. ಬಂಧುಗಳ ನಡುವೆ ನಿಮ್ಮ ಗೌರವದ ಮಟ್ಟ ಹೆಚ್ಚಿರುತ್ತದೆ. ವಿದ್ಯಾರ್ಥಿಗಳು ಈಗ ಮಧ್ಯಮ ಫಲಿತಾಂಶದ ನಿರೀಕ್ಷೆಯನ್ನು ಮಾಡಬಹುದು. ಹರಿತವಾದ ವಸ್ತುಗಳಿಂದ ಗಾಯವಾಗಬಹುದು, ಸ್ವಲ್ಪ ಎಚ್ಚರವಹಿಸಿರಿ. ಸಂಗಾತಿ ಜೊತೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆ ಮಾಡುವ ವ್ಯವಹಾರಗಳಲ್ಲಿ ತೊಡಕುಗಳು ಕಾಣಬಹುದು. ತಂದೆಯು ಆಸ್ತಿ ಕೊಡುವ ವಿಚಾರದಲ್ಲಿ ಷರತ್ತುಗಳನ್ನು ವಿಧಿಸಬಹುದು. ವೃತ್ತಿಯಲ್ಲಿ ನಿಮ್ಮ ಹಿರಿಯ ಅಧಿಕಾರಿಗಳ ಸಹಕಾರ ನಿಮಗಿರುತ್ತದೆ. ವಿದೇಶಿ ಆಮದು ಮತ್ತು ರಫ್ತು ಮಾಡುವವರಿಗೆ ಹೆಚ್ಚಿನ ವ್ಯವಹಾರವಿರುತ್ತದೆ. ಕೃಷಿಯಲ್ಲಿ ಹೆಚ್ಚಿನ ಆದಾಯ ಇರುವುದಿಲ್ಲ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಯಾವುದೇ ಕೆಲಸದಲ್ಲೂ ಸ್ವಲ್ಪ ದ್ವಂದ್ವ ನಿರ್ಧಾರಗಳಿರುತ್ತವೆ. ಸಂಗಾತಿ ಆದಾಯದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವನ್ನು ಕಾಣಬಹುದು. ಸಮೀಪದ ಬಂಧುಗಳಲ್ಲಿ ಯಾರಿಗಾದರೂ ಅನಾರೋಗ್ಯ ಸಂಭವಿಸುವ ಸಂದರ್ಭವಿದೆ. ಆಸ್ತಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರಗಳಿರುವುದಿಲ್ಲ. ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಉತ್ತಮ ಸೌಲಭ್ಯಗಳು ದೊರೆಯುತ್ತವೆ ಹಾಗೂ ಪ್ರೋತ್ಸಾಹ ಧನ ದೊರೆಯುತ್ತದೆ. ಚರ್ಮ ಕಾಯಿಲೆ ಕೆಲವರನ್ನು ಕಾಡಬಹುದು. ಸಂಗಾತಿಯ ಆದಾಯ ಹೆಚ್ಚಾಗಿದ್ದರೂ ಅವರ ಜಿಪುಣತನ ನಿಮಗೆ ಬೇಸರ ತರಿಸಬಹುದು. ಮನೆ ಪಾಠ ಮಾಡುವವರಿಗೆ ಹೆಚ್ಚು ವಿದ್ಯಾರ್ಥಿಗಳು ದೊರೆತು ಆದಾಯ ವೃದ್ಧಿಸುತ್ತದೆ. ಒಟ್ಟು ಕುಟುಂಬದ ವ್ಯವಹಾರಗಳಲ್ಲಿ ನಿಮಗೆ ಹೆಚ್ಚಿನ ಲಾಭವಿರುತ್ತದೆ. ವಾಹನ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಆದಾಯ ವೃದ್ಧಿಸುತ್ತದೆ.

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ನಿಮ್ಮ ನಡವಳಿಕೆ ಎಲ್ಲರ ಗಮನ ಸೆಳೆಯುತ್ತದೆ. ವೃತ್ತಿಯಲ್ಲಿ ನಿಮ್ಮ ಕೆಲಸಗಳಿಗೆ ಹೆಚ್ಚಿನ ಬೆಲೆ ದೊರೆತು ನಾಯಕತ್ವ ಬೆಳೆಯತೊಡಗುತ್ತದೆ. ಗಣಿತವನ್ನು ಅಭ್ಯಾಸ ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸರ್ಕಾರಿ ಸಾಲಗಳನ್ನು ಪಡೆದು ಉಳಿದ ಕೈ ಸಾಲಗಳನ್ನು ತೀರಿಸಬಹುದು. ಸಂಗಾತಿಯ ಬುದ್ಧಿವಂತಿಕೆಯಿಂದ ಹೆಚ್ಚು ಸಾಲದ ಹಣ ತೀರಿಸಬಹುದು. ಕೆಲವು ಹಿರಿಯ ಅಧಿಕಾರಿಗಳಿಗೆ ಅಪವಾದಗಳು ಬರುವ ಸಾಧ್ಯತೆ ಇದೆ. ವಿದೇಶದಲ್ಲಿರುವ ಮಕ್ಕಳನ್ನು ನೋಡಲು ಹಿರಿಯರಿಗೆ ಅವಕಾಶ ದೊರೆಯುತ್ತದೆ. ಸಾಂಪ್ರದಾಯಿಕ ಯೋಗವನ್ನು ಹೇಳಿಕೊಡುವವರಿಗೆ ಪ್ರಾಮುಖ್ಯತೆ ದೊರೆಯುತ್ತದೆ. 

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಹಣಕಾಸಿನ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಆದರೂ ಖರ್ಚಿಗೆ ಮಿತಿಹೇರುವುದು ಅತಿ ಅಗತ್ಯ. ಸಮಯಕ್ಕೆ ತಕ್ಕಂತೆ ಬದಲಾಗುವ ಸ್ವಭಾವದವರೂ ಸಿಕ್ಕಿಬೀಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಾಮಾನ್ಯ ಯಶಸ್ಸು ಇರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ತಲೆದೋರಬಹುದು. ಶಾಲಾ ಶಿಕ್ಷಕರಿಗೆ ಬಯಸುತ್ತಿದ್ದ ಜಾಗಕ್ಕೆ ವರ್ಗಾವಣೆ ಸಿಗುವ ಸಾಧ್ಯತೆಗಳಿವೆ. ವಿದೇಶಿ ಭಾಷಾ ಬೋಧಕರಿಗೆ ಹೆಚ್ಚಿನ ಬೇಡಿಕೆ ಬರಬಹುದು. ಕೃಷಿ ವಿಸ್ತರಣೆ ಮಾಡುವ ಆಲೋಚನೆ ನಿಮಗೆ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ಇದ್ದ ತಿಕ್ಕಾಟಗಳು ದೂರವಾಗುತ್ತವೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಆದಾಯ ಬರದಿದ್ದರೂ ನಷ್ಟ ಇರುವುದಿಲ್ಲ. ಕಬ್ಬಿಣದ ಸರಳುಗಳನ್ನು  ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚು ವ್ಯವಹಾರವಿರುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಬಹಳ ಪ್ರಶಾಂತವಾಗಿರಲು ಸಾಕಷ್ಟು ಪ್ರಯತ್ನಪಡುವಿರಿ. ಸಂಗೀತಗಾರರು ಅಭ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವರು. ನಿರೀಕ್ಷಿತ ಧನಾದಾಯ ಇಲ್ಲದಿದ್ದರೂ ತೊಂದರೆ ಇಲ್ಲ. ವ್ಯವಹಾರಿಕ ನಡವಳಿಕೆಯಿಂದ ಪಾಲುದಾರರನ್ನು ಸೆಳೆಯುವಿರಿ. ಭೂ ವ್ಯವಹಾರ ಮಾಡುವವರಿಗೆ ಸ್ವಲ್ಪಮಟ್ಟಿನ ಪ್ರಗತಿ ಇರುತ್ತದೆ. ಆಡಳಿತಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವವರು ಹೆಚ್ಚಿನ ಶ್ರದ್ಧೆವಹಿಸಬೇಕಾದ ಅಗತ್ಯವಿದೆ. ಪಿತ್ತ ವಿಕಾರಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ಕೊಟ್ಟ ಸಾಲ ವಾಪಸ್ಸು ಬರುವುದಿಲ್ಲ. ಆದ್ದರಿಂದ ಲೇವಾದೇವಿ ವ್ಯವಹಾರಗಳು ಸದ್ಯಕ್ಕೆ ಬೇಡ. ವಿದೇಶಿ ಕಂಪನಿಯ ಸಹಯೋಗದೊಂದಿಗೆ ಇಲ್ಲಿ ಉತ್ಪಾದನೆಯನ್ನು ಉದ್ದಿಮೆದಾರರು ಪ್ರಾರಂಭಿಸಬಹುದು. ಕಾರ್ಖಾನೆಗಳಲ್ಲಿ ವಿದ್ಯುತ್ ಅವಘಡಗಳು ಆಗುವ ಲಕ್ಷಣಗಳಿವೆ, ಎಚ್ಚರವಹಿಸಿರಿ.

ವೃಶ್ಚಿಕ ರಾಶಿ (ವಿಶಾಖಾ 4  ಅನುರಾಧ ಜೇಷ್ಠ)
ನಿಮ್ಮ ಪ್ರಯತ್ನದಲ್ಲಿ ಹೆಚ್ಚಿನ ನಂಬಿಕೆ ಇಡಿರಿ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಶತ್ರುಗಳನ್ನು ಅವರದೇ ತಂತ್ರಗಳಿಂದ ಮಣಿಸುವಿರಿ. ಕುಲುಮೆ ಕೆಲಸ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ವಿದ್ಯಾರ್ಥಿಗಳು ಅಪೇಕ್ಷಿತ ವಿಷಯಗಳ ಬಗ್ಗೆ ಅಭ್ಯಾಸ ಮುಂದುವರಿಸಬಹುದು. ವಿದೇಶದಲ್ಲಿ ವೈದ್ಯರಾಗಿರುವವರಿಗೆ ಬೇಡಿಕೆ ಬರುತ್ತದೆ. ಬಂಧುಗಳಲ್ಲಿ ವಿವಾಹ ಸಂಬಂಧ ಬೆಳೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಪಡೆದು ಹೆಚ್ಚು ಸಂಪಾದನೆ ಮಾಡುವ ಯೋಗವಿದೆ. ಮನೆಯ ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ವೃತ್ತಿಯಲ್ಲಿ ಹಿತಶತ್ರುಗಳು ಬೆಳೆಯುವ ಸಾಧ್ಯತೆಗಳಿವೆ. ಬೇಕರಿ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಚತುರತೆಯನ್ನು ಪ್ರದರ್ಶಿಸಿ ಸೂಕ್ತವಾಗಿ ಮುನ್ನಡೆಯುವಿರಿ. ನಿಮ್ಮ ಚತುರತೆಯನ್ನು ಮೆಚ್ಚಿ ನಿಮ್ಮ ಪಾಲುದಾರರು ನಿಮಗೆ ಮುಖ್ಯ ಸ್ಥಾನವನ್ನು ಕೊಡುವರು. ವೆಚ್ಚದಲ್ಲಿ ಸಾಕಷ್ಟು ಕಡಿಮೆ ಮಾಡಿ ವ್ಯವಹಾರವನ್ನು ಲಾಭದತ್ತ ಹೊರಳುವಂತೆ ಮಾಡುವಿರಿ. ನಿಮ್ಮ ಗಟ್ಟಿ ನಿರ್ಧಾರಗಳು ಹಾಗೂ ಕಠಿಣ ಕ್ರಮಗಳು ಪ್ರಶಂಸಿಸಲ್ಪಡುತ್ತವೆ. ವಿದ್ಯುತ್ ಉತ್ಪಾದನೆ ಮಾಡುತ್ತಿರುವವರಿಗೆ ಹೆಚ್ಚು ಲಾಭವಿರುತ್ತದೆ. ವಿದೇಶಿ ಕಂಪನಿಗಳ ಸಹಯೋಗ ದೊರೆಯುವ ಸಾಧ್ಯತೆ ಇದೆ. ಕೆಲವರಿಗೆ ಅನಿರೀಕ್ಷಿತ ರಾಜಕೀಯ ಪ್ರವೇಶ ಆಗುವ  ಸಾಧ್ಯತೆಗಳಿವೆ. ಪಿತ್ರಾರ್ಜಿತ ಆಸ್ತಿಗಳನ್ನು ಮಾರಿ ಹೊಸ ಆಸ್ತಿ ಖರೀದಿ ಮಾಡುವಿರಿ. ಸಂಬಂಧಿಕರು ನಿಮ್ಮ ಸಹಾಯವನ್ನು ಪಡೆಯಲು ಈಗ ಬರುವರು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ    ಧನಿಷ್ಠ 1.2)
ನಿಮ್ಮ ಯೋಜನೆಗಳ ಬಗ್ಗೆ ನೀವು ಸರಿಯಾಗಿ ತಿಳಿದು ನಂತರ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಿರಿ. ಕುಕ್ಕುಟೋದ್ಯಮವನ್ನು ಮಾಡುತ್ತಿರುವವರಿಗೆ ಲಾಭವಿರುತ್ತದೆ. ಗೋವಿನ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ನಿಮ್ಮ ಸಭ್ಯ ನಡವಳಿಕೆಯಿಂದ ಜನರನ್ನು ಗೆಲ್ಲುವಿರಿ. ವಿದೇಶಿ ವಸ್ತುಗಳನ್ನು ತರಿಸಿ ಮಾರಾಟ ಮಾಡಬಹುದು. ಸಾಂಪ್ರದಾಯಿಕ ಕೃಷಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಿರಿ. ನರ ದೌರ್ಬಲ್ಯಗಳು ಸ್ವಲ್ಪಮಟ್ಟಿಗೆ ಕಾಡಬಹುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಪಡುತ್ತಿರುವ ಕೆಲವರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಬಂಧುಗಳಿಂದ ನಿಮ್ಮ ಕೃಷಿ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸ್ವಲ್ಪ ಆಲಸೀತನ ಕಾಡಬಹುದು. ಉತ್ತಮ ಮಾತಿನಿಂದ ಜನರನ್ನು ಸೆಳೆಯುವಿರಿ. ವೈರಿಗಳನ್ನು ಮಟ್ಟ ಹಾಕಲು ಹೊಸ ತಂತ್ರ ಹೆಣೆಯುವಿರಿ. ಕೃಷಿ ಮಾಡಲು ಅತಿಯಾದ ಆಸಕ್ತಿ ಮೂಡುತ್ತದೆ. ತೆರಿಗೆ ತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ ಹಾಗೂ ಕೈತುಂಬಾ ಸಂಪಾದನೆ ಇರುತ್ತದೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚಿನ ಶ್ರಮವಹಿಸುವಿರಿ. ಸಂಗಾತಿಯೊಡನೆ ಪ್ರವಾಸ ಮಾಡುವಿರಿ. ಕಾನೂನು ಪಂಡಿತರಿಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಧರ್ಮಪ್ರಚಾರಕರಿಗೆ ಆದ್ಯತೆಯ ಮೇಲೆ ಸಹಕಾರ ಸಿಗುತ್ತದೆ. ಸಾಹಸ ಕಲಾವಿದರುಗಳಿಗೆ ಹೆಚ್ಚು ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ತಂದೆಯಿಂದ ಹೆಚ್ಚಿನ ಧನ ಸಹಾಯ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಉತ್ತಮ ವ್ಯವಹಾರಗಳಿರುತ್ತವೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ವಿದೇಶದಲ್ಲಿರುವವರಿಗೆ ಹೆಚ್ಚಿನ ಧನ ಸಂಪಾದನೆ ಆಗುತ್ತದೆ. ಕಚೇರಿ ಕೆಲಸಗಳಲ್ಲಿ ಚುರುಕುತನ ತೋರಿ ಬಡ್ತಿಯನ್ನು ದೃಢಪಡಿಸಿಕೊಳ್ಳುವಿರಿ. ವೃತ್ತಿಯಲ್ಲಿ ಹೊಸ ಲೆಕ್ಕಾಚಾರಗಳೊಡನೆ ಹೊಸ ಹೆಜ್ಜೆ ಹಾಕುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಮಕ್ಕಳ ಸಂತೋಷಕ್ಕಾಗಿ ಧನವ್ಯಯ ಮಾಡುವಿರಿ. ಹಿರಿಯ ಆಯುರ್ವೇದ ವೈದ್ಯರಿಗೆ ಬೇಡಿಕೆ ಬರಲಿದೆ ಹಾಗೂ ಕೈಗುಣದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತವೆ. ಸಂಗಾತಿಯ ಹಟಮಾರಿತನವು ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ಉಸಿರಾಟದ ಸಮಸ್ಯೆ ಇರುವವರು ಚಿಕಿತ್ಸೆಗೆ ಹೋಗುವುದು ಬಹಳ ಉತ್ತಮ. ಸಂಬಂಧಿಕರ ಆಸ್ತಿಯನ್ನು ಕಡಿಮೆ ಬೆಲೆಗೆ ಪಡೆಯುವಿರಿ. ಧನ ಆದಾಯವು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.