ಸೈದಾಪುರ: ‘ಹೇಮರಡ್ಡಿ ಮಲ್ಲಮ್ಮನವರ ಜೀವನಾದರ್ಶಗಳು ಸ್ತ್ರೀ ಕುಲಕ್ಕೆ ಮಾದರಿಯಾಗಿವೆ’ ಎಂದು ಪ್ರಕಾಶ್ ಗೌಡ ಮಾಲಿ ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಮಹಿಳೆಯರು ಆದರ್ಶ ಸೊಸೆ, ಮಡದಿಯಾಗಿ ಹೇಗಿರಬೇಕು ಎಂಬುದನ್ನು ಮಲ್ಲಮ್ಮ ತಿಳಿಸಿಕೊಟ್ಟರು. ಅವರು ಎಷ್ಟೇ ಕಷ್ಟಗಳು ಬಂದರೂ ಪತಿ ಸೇವೆಯನ್ನು ಅಚಲ ಭಕ್ತಿಯಿಂದ ನೆರವೇರಿಸಿ, ಮಹಾ ಪತಿವ್ರತೆಯಾಗಿ ಜಗತ್ತಿಗೆ ಆದರ್ಶ ತೋರಿದ ಶಿವಶರಣೆ . ಅಂತಹ ಮಹಾನ್ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರು ಕೇವಲ ಒಂದು ಧರ್ಮಕ್ಕೆ ಸೀಮಿತಗೊಳಿಸದೆ ಅವರನ್ನು ಸರ್ವಧರ್ಮದ ಅನುಯಾಯಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

ಈ ಸಂದರ್ಭದಲ್ಲಿ ಭೀಮಣ್ಣಗೌಡ ಪೊಲೀಸ್ ಪಾಟೀಲ ಗೊಂದಡಿಗಿ, ಮಹಿಪಾಲ್ ರೆಡ್ಡಿ ವಕೀಲ, ಬಸರೆಡ್ಡಿಗೌಡ ಹೆಗ್ಗಣಗೇರಾ, ಮಲ್ಲನಗೌಡ ಮಾಲಿಪಾಟೀಲ, ಈಶಪ್ಪ ಗೌಡ ಬಿಳ್ಹಾರ, ನರಸರೆಡ್ಡಿ ಪರ್ಲೆ ಶೆಟ್ಟಿಹಳ್ಳಿ, ಗುರುಲಿಂಗ ಸ್ವಾಮಿ , ಮರೀಗೌಡ ಬಾಡಿಯಾಳ, ಜಗದೀಶ್ ಸಜ್ಜನ್, ಪರ್ವತರೆಡ್ಡಿ ಗೌಡ ದದ್ದಲ, ಸಿದ್ದುಗೌಡ ಸಾವುರ್, ಈಶಪ್ಪ ಸಾಹುಕಾರ, ಹಣಮಂತ ದೊಡ್ಡಮನಿ, ಮೋನಪ್ಪ ಬೆಳಗುಂದಿ, ಪ್ರಭು ಗೂಗಲ್, ಬಸಲಿಂಗಯ್ಯ ಸ್ವಾಮಿ, ವೀರೇಶ್ ಸಜ್ಜನ್, ಬಂದಪ್ಪ ಗೌಡ, ಆಂಜನೇಯ ರಾಂಪೂರ, ದುಪ್ಪಲ್ಲಿ ಹಾಗೂ ಮೋಹನ್ ರೆಡ್ಡಿ ಸೇರಿದಂತೆ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-30-1365221065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.