ಯಾದಗಿರಿ: ‘ನಮ್ಮ ಭಾರತದಲ್ಲಿ ಹಲವು ಮಹಾಪುರುಷರು, ದಾರ್ಶನಿಕರು, ಶರಣರ ಜಯಂತಿಗಳನ್ನು ಆಚರಿಸಲಾಗುತ್ತದೆ. ಈ ಆಚರಣೆಗಳಿಂದ ಸನಾತನ ಧರ್ಮದ ಪರಂಪರೆಯ ಸ್ಮರಣೆಯಾಗುತ್ತದೆ’ ಎಂದು ಗಾಯತ್ರಿ ಸಮಾಜದ ಮುಖಂಡ ದಿನೇಶ ಶರ್ಮಾ ಹೇಳಿದರು.

ನಗರದ ಬಾಲಾಜಿ ಮಂದಿರದಲ್ಲಿ ಭಾನುವಾರ ಗಾಯತ್ರಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಪರಶುರಾಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಯಾ ಸಮಾಜದವರು ಆ ಸಮಾಜದ ಮಹಾತ್ಮರ ಜಯಂತಿ ಆಚರಿಸುವ ಮೂಲಕ ತಮ್ಮ ಪರಂಪರೆಯನ್ನು ನೆನಪಿಸಿಕೊಳ್ಳುತ್ತಾರೆ’ ಎಂದರು.

‘ಗಾಯಿತ್ರಿ ಸಮಾಜದದಿಂದ ಪರಶುರಾಮ ಜಯಂತಿಯನ್ನು ಆಚರಿಸುತ್ತಿದ್ದು, ಈ ಆಚರಣೆಗಳು ಮುಂದಿನ ಪೀಳಿಗೆಯವರೂ ಆಚರಿಸಬೇಕು. ಆ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ’ ಎಂದು ಕರೆ ನೀಡಿದರು.

ನಗರದ ಚಕ್ಕರ ಕಟ್ಟಾ ಬಡಾವಣೆಯಿಂದ ಮಹಾತ್ಮ ಗಾಂಧಿ ವೃತ್ತ, ಬಾಲಾಜಿ ಮಂದಿರದವರೆಗೆ ಭಜನೆ ಮತ್ತು ಮಂಗಳ ವಾದ್ಯಗಳೊಂದಿಗೆ ಪರಶುರಾಮ ಭಾವಚಿತ್ರದ ಮೆರವಣಿಗೆ ಜರುಗಿತು.

ಮುಖಂಡರಾದ ದಿನೇಶ ಪಾರಿಕ್, ಸತ್ಯನಾರಾಯಣ ಗೌರ, ವಿಜಯ ಗೌರ, ಶ್ರೀಕಾಂತ ಜೋಶಿ, ಬದ್ರಿನಾರಾಯಣ ವ್ಯಾಸ, ರೂಪೇಶ ಪಾಂಚಾರಿಯಾ, ಆನಂದ ಗೌರ, ಸತೀಶ ಪಾಂಚಾರಿಯಾ, ಅಶ್ವಿನ ಪಂಚಾಚಾರ್ಯ ಸೇರಿದಂತೆ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-30-1392393818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.