ಯಾದಗಿರಿ: ‘ಆದ್ಯ ವಚನಕಾರ ಜೇಡರ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದಿದ್ದಾರೆ’ ಎಂದು ದಾಸಬಾಳಧೀಶ್ವರ ಮಠದ ವೀರೇಶ್ವರ ಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಜಿಲ್ಲಾ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಆಯೋಜಿಸಿದ್ದ ಆದ್ಯ ವಚನಕಾರ ಜೇಡರ ದಾಸಿಮಯ್ಯ ಹಾಗೂ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜೇಡರ ದಾಸಿಮಯ್ಯ ಅವರ ಪ್ರತಿ ವಚನವೂ ಮಾನವ ಕುಲಕೋಟಿಯ ಉದ್ಧಾರದ ಕುರಿತು ಬರೆದಿದ್ದರೆ; ಶತಮಾನದ ಸಂತ ಸಿದ್ದಗಂಗಾದ ಶಿವಕುಮಾರ ಸ್ವಾಮೀಜಿ ತ್ರಿವಿಧ ಅನ್ನ, ಅಕ್ಷರ ಮತ್ತು ಆಶ್ರಯದ ಮೂಲಕ ವಿದ್ಯಾವಂತ ಸಮಾಜ ಕಟ್ಟಿದ್ದರು. ಇಬ್ಬರು ಮಹಾನ್ ಚೇತನರು’ ಎಂದರು.

‘ಕುರುಹಿನಶೆಟ್ಟಿ ಸಮಾಜದಲ್ಲಿ ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಜನರ ಮಾನ ಮುಚ್ಚಲು ಬಟ್ಟೆ ನೆಯ್ದು ಕೊಡುವ ಸಮಾಜವಿದು’ ಎಂದು ಹೇಳಿದರು.

ಬಿಜೆಪಿ ಮುಖಂಡ ರಾಚನಗೌಡ ಮುದ್ನಾಳ ಮಾತನಾಡಿ, ‘ಜೇಡರ ದಾಸಿಮಯ್ಯ ಅವರು ಯಾದಗಿರಿ ಜಿಲ್ಲೆಯವರು ಎಂಬ ಹೆಮ್ಮೆ ಇದೆ. ಅವರ ವಚನಗಳ ಆಸೆಯವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ಕುರುಹಿನಶೆಟ್ಟಿ ಸಣ್ಣ ಸಮಾಜವಾದರೂ ಶ್ರಮಿಕರು. ಬಟ್ಟೆ ನೆಯ್ದು ಜನರಿಗೆ ಉಡಲು ಕೊಡುವ ಮೂಲಕ ಶ್ರೇಷ್ಠ ಕಾಯಕ ಮಾಡುವ ಸಮಾಜವಾಗಿದೆ’ ಎಂದು ಹೇಳಿದರು.

‘ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಮಕ್ಕಳಿಗೆ ಅನ್ನ ಮತ್ತು ಅಕ್ಷರ ನೀಡುವ ಮೂಲಕ ನಡೆದಾಡುವ ದೇವರಾಗಿದ್ದರು. ಅವರ ಆಶ್ರಯದಲ್ಲಿ ಬೆಳೆದು ವಿದ್ಯಾವಂತರಾದ ಅಸಂಖ್ಯಾತರು ಎಲ್ಲಡೆ ಇದ್ದಾರೆ’ ಎಂದರು.

ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ‘ಜೇಡರ ದಾಸಿಮಯ್ಯ ಅವರ ಪ್ರತಿ ವಚನಗಳಲ್ಲಿ ಬದುಕುವ ವಿಧಾನ ಅಡಗಿದೆ. ಸಂಸಾರದ ಜಂಜಾಟದಲ್ಲಿ ಯಶಸ್ಸಿ ಜೀವನ ನಡೆಸುವ ಬಗ್ಗೆಯೂ ತಿಳಿಸಿದ್ದಾರೆ. ಕಾಯಕ ಜೀವಿಯಾಗಿದ್ದು ವಚನಗಳನ್ನು ರಚಿಸಿ, ಅವುಗಳನ್ನು ಸಮಾಜಕ್ಕೆ ನೀಡುವ ಮೂಲಕ ಮಹಾನ್ ಸಾಧನೆ ಮಾಡಿದ್ದಾರೆ’ ಎಂದು ಹೇಳಿದರು.

ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟ್, ಸಮಾಜದ ರಾಜ್ಯ ನಿರ್ದೇಶಕ ಕುಶಾಲ ಯಡವಳ್ಳಿ ಮಾತನಾಡಿದರು. ಎಂ.ಬಿ.ಕಟ್ಟಿ ಉಪನ್ಯಾಸ ನೀಡಿದರು. ಸಮಾಜದ ಜಿಲ್ಲಾ ಅಧ್ಯಕ್ಷ ಶಾಂತಪ್ಪ ನಿಡಗುಂದಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ ಮಲ್ಲೇಶಪ್ಪ ಬೇಲಿ, ಉಪಾಧ್ಯಕ್ಷೆ ಸುಮಾ ವಿರೇಂದ್ರ ಜೋತಾ, ಪದಾಧಿಕಾರಿಗಳಾದ ಬಸವರಾಜ ಕರದಳ್ಳಿ, ಚಂದ್ರಶೇಖರ ಮ್ಯಾಳಗಿ, ಚನ್ನಮಲ್ಲಿಕಾರ್ಜುನ ಗುಂಡಾನೋರ್, ಶ್ರೀಶೈಲ ಯಡವಳ್ಳಿ, ಶಿವಲಿಂಗಪ್ಪ ಸುಲಹಳ್ಳಿ, ಬಾಬುರಾವ ಹಳ್ಳಿ, ಸಿ.ಬಿ. ಬಾಗೋಡಿ, ಮುಖಂಡರಾದ ಮುತ್ತಪ್ಪ ಗಡೇದಗೌಡರ, ಮಲ್ಲಿಕಾರ್ಜುನ ಚಂದ್ರಿಕಿ, ಶಿವಪುತ್ರಪ್ಪ ಬೇಲಿ, ಜಗದೀಶ ಜೋತಾ, ರಾಜು ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-30-2069385254

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.