ಯಾದಗಿರಿ: ‘ಭಾರತೀಯ ಪರಂ ಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದ್ದು, ಮಠ– ಮಾನ್ಯಗಳಲ್ಲಿ ಮಹಿಳೆಯರಿಗೆ ಗೌರವಿಸುವ ಕಾರ್ಯ ಕೃತಜ್ಞತೆಯಿಂದ ಕೂಡಿದೆ’ ಎಂದು ರುಕ್ಮಾಪುರದ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.

ನಗರದ ದಾಸಬಾಳಧೀಶ್ವರ ಮಠದಲ್ಲಿ ಈಚೆಗೆ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಹಾಪುರದ ಚರಬಸವೇಶ್ವರ ಗದ್ದುಗೆಯ ಬಸವಾರ್ಯ ಶರಣರು ಮಾತನಾಡಿ, ‘ದಾಶಬಾಳಧೀಶ್ವರ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಶ್ರೀಗಳು ಭಕ್ತರಲ್ಲಿ ತಾಳ್ಮೆ, ಸಹನೆ ಮತ್ತು ಶಾಂತಿಯುತ ಬದುಕು ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ’ ಎಂದರು.

ಬಿಜೆಪಿ ಮುಖಂಡರಾದ ನಾಗರತ್ನ ಕುಪ್ಪಿ ಮಾತನಾಡಿ, ‘ಸರ್ವರನ್ನು ಸಮಾನತೆಯಿಂದ ಕಾಣುವ ಏಕೈಕ ಮಠ ಇದು. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜ್ಞಾನಾಮೃತವನ್ನು ಧಾರೆ ಎರೆಯಲಾಗಿದೆ’ ಎಂದು ಹೇಳಿದರು.

ಉಪನ್ಯಾಸ ನೀಡಿದ ಜ್ಯೋತಿಲತಾ ತಡಿಬಿಡಿಮಠ, ‘ಭಾರತೀಯ ಸಂಸ್ಕೃತಿ ನಶಿಸಿದರೆ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ನಷ್ಟವಿದೆ. ಸಂಸ್ಕೃತಿಗೆ ನಮ್ಮ ದೇಶದಲ್ಲಿ ಅದ್ಭುತವಾದ ಶಕ್ತಿಯಿದೆ. ಹೊರ ದೇಶದವನ್ನು ನಮ್ಮ ದೇಶದ ಸಂಸ್ಕೃತಿಯನ್ನು ಅನುಸರಿಸುತ್ತಾರೆ’ ಎಂದರು.

ಸಾನಿಧ್ಯ ವಹಿಸಿದ್ದ ಮಠದ ವೀರೇಶ್ವರ ಸ್ವಾಮೀಜಿ ಮಾತನಾಡಿ, ‘ಮಠದ ಜಾತ್ರಾ ದಿನವೇ ಹನುಮಾನ ಜಯಂತಿ ಇದ್ದದ್ದು ಶ್ರೇಷ್ಠ ದಿನವಾಗಿದೆ. ಆಂಜನೇಯ ಸಕಲ ಕಷ್ಟಗಳನ್ನು ದೂರ ಮಾಡುವ ಶಕ್ತಿಯುಳ್ಳವ’ ಎಂದು ಹೇಳಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಲ್ಲಿಕಾರ್ಜುನ ಸ್ವಾಮಿ, ವೀರಯ್ಯ ಸ್ವಾಮಿ ಹಿರೇಮಠ, ಸಿದ್ದಯ್ಯ ಸ್ವಾಮಿ, ಮಲ್ಲಿಕಾರ್ಜುನ ಶಾಸ್ತ್ರಿಗಳು ನಡೆಸಿಕೊಟ್ಟರು. ಸಂಜೆ ಪಂಚತನಾರತಿ, ಲಕ್ಷ ದೀಪೋತ್ಸವ ಜರುಗಿದವು.

ಪ್ರಮುಖರಾದ ಮಂಜುಳಾ ಘೂಳಿ, ಲಕ್ಷ್ಮಿ ಮಾಲಿ ಪಾಟೀಲ, ಸೋಮನಗೌಡ ಪೊಲೀಸ್ ಪಾಟೀಲ, ಬೀರಪ್ಪ ಪೂಜಾರಿ, ರವಿ ಜಾಕಾ, ಅಮೋಘ ಸಿದ್ದೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-30-762950794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.