ಯಲಬುರ್ಗಾ: ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಈ ಮೆರವಣಿಗೆಯಲ್ಲಿ ಜೋಡೆತ್ತುಗಳೊಂದಿಗೆ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಭಾಗವಹಿಸುವ ಉದ್ದೇಶದಿಂದಲೇ ಎತ್ತುಗಳನ್ನು ಶೃಂಗಾರಗೊಳಿಸಲಾಗಿರುತ್ತದೆ. ಆಕರ್ಷಕ ಜೋಡಿಗೆ ಬಹುಮಾನ ವಿತರಣೆಯಾಗುವುದರಿಂದ ರೈತರು ತಮ್ಮ ಎತ್ತುಗಳನ್ನು ಭರ್ಜರಿಯಾಗಿಯೇ ಶೃಂಗಾರ ಮಾಡಿರುತ್ತಾರೆ.

ಮೆರವಣಿಗೆಗೆ ಚಾಲನೆ ನೀಡಿದ ನಿಡಗುಂದಿಕೊಪ್ಪದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಗ್ರಾಮೀಣರ ಹಾಗೂ ರೈತರ ಬದುಕಿಗೆ ಆಧಾರವಾಗಿರುವ ಎತ್ತುಗಳನ್ನು ವಿಶೇಷ ಪೂಜೆ ಸಲ್ಲಿಸಿ ಅವುಗಳನ್ನು ಮೆರವಣಿಗೆ ಮಾಡಿ ಗೌರವಿಸುವ ಈ ಸಂಪ್ರದಾಯವು ನಿಜವಾದ ಬಸವಣ್ಣನಿಗೆ ಗೌರವಿಸಿದಂತಾಗಿದೆ. ಬಸವ ಜಯಂತಿ ಪ್ರಯುಕ್ತ ಆಯೋಜನೆಗೊಳ್ಳುವ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಹಾಗೆಯೇ ಎತ್ತುಗಳನ್ನು ಸರಿಯಾಗಿ ಜೋಪಾನ ಮಾಡಬೇಕು’ ಎಂದು ಸಲಹೆ ನೀಡಿದರು.

ಗ್ರಾ.ಪಂ ಮಾಜಿ ಸದಸ್ಯ ಮಂಜುನಾಥ್ ಇಟಗಿ, ವಿಎಸ್ಎಸ್ ಸದಸ್ಯ ಮುತ್ತಪ್ಪ ಹವಳದ, ನೀಲಪ್ಪ ಐನಕ್ಕಿ, ಶರಣಪ್ಪ ಸಜ್ಜನ್, ಶಿವಪ್ಪ ಗೌಡ್ರ, ಶರಣಪ್ಪ ಧರಣ, ಬಸಪ್ಪ ಜಕ್ಕಲಿ, ಉಮೇಶ್ ಹವಳದ, ಬಸನಗೌಡ ಪಾಟೀಲ್, ಗುರುಬಸವ, ತ್ರಿಲಿಂಗೇಶ್ವರ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು. ಗ್ರಾಮದ ಪ್ರಮುಖರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-35-950139367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.