ಯಳಂದೂರು: ಬುದ್ಧನ ತತ್ವಗಳ ಅನುಷ್ಠಾನದಿಂದ ಬದುಕಿನಲ್ಲಿ ನೆಮ್ಮದಿ– ಶಾಂತಿ ಮೂಡುತ್ತದೆ ಎಂದು ಭಾಷಣಕಾರ ದೇವರಾಜು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ಆಚರಣಾ ಸಮಿತಿ ಶನಿವಾರ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಬುದ್ಧ ಧರ್ಮ ಸ್ವೀಕಸಿ ಸಂಚರಿಸಿದ ಪ್ರದೇಶ ಪವಿತ್ರ ಸ್ಥಳಗಳಾಗಿವೆ. ಅನುಯಾಯಿಗಳು ಈ ಸ್ಥಳಗಳ ಮಹತ್ವ ಮನಗಂಡು ಜ್ಞಾನ ದರ್ಶನ ಪಡೆಯಬೇಕು. ಅವರ ಆದರ್ಶ ತತ್ವಗಳನ್ನು ಜೀವನ ಪೂರ್ತಿ ಅನುಸರಿಸಿದಾಗ ಬದುಕು ಸಾರ್ಥಕ ಪಡೆಯುತ್ತದೆ ಎಂದರು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪಟವನ್ನು ಬೆಳ್ಳಿ ರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ಅಭಿಮಾನಿಗಳು ನೃತ್ಯ ಮಾಡಿ ಸಂಭ್ರಮಿಸಿದರು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾವನ ಬುದ್ಧ ವಿಹಾರದ ಬಿಕ್ಕು ಬೋದಿರತ್ನ ಬಂತೇಜಿ, ಅಧ್ಯಕ್ಷ ಗುರುಪ್ರಸಾದ್, ಸಂಘದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಗ್ರಾಮದ ಯಜಮಾನರು, ಗೌಡರು, ಸರ್ಕಾರಿ ನೌಕರರು, ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-37-445235782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.