ಯಳಂದೂರು: ‘ಭಾರತೀಯ ಪರಂಪರೆಯಲ್ಲಿ ಇರುವ ಆರ್ಷೇಯ ತತ್ವ, ಚಿಂತನೆ, ಅಧ್ಯಾತ್ಮ, ಯೋಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವ ದೈವತ್ವಕ್ಕೆ ಏರಬಹುದು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತ್ರೀಶ್ವರ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಜನರು ಧಾವಂತದಲ್ಲಿ ಇದ್ದು, ವೇಗದ ಜೀವನಕ್ಕೆ ಹೊರಳಿಕೊಳ್ಳುವ ಹಪಾಹಪಿಯಲ್ಲಿ ತಮ್ಮನ್ನೇ ಮರೆತಿದ್ದಾರೆ. ಹೀಗಾಗಿ, ಒತ್ತಡ, ಖಿನ್ನತೆ, ಮನೋವಿಕಾರಕ್ಕೆ ಸಿಲುಕಿದ್ದಾರೆ. ಆಧುನಿಕ ಜೀವನಶೈಲಿಯ ಭಾಗವಾಗಿ ಮೊಬೈಲ್ ಗೀಳಿಗೆ ಸಿಲುಕಿ, ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಬಂಧಿಯಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಮನೋರೋಗ ದೂರ ಸರಿಸಿ, ಮನಸ್ಸು ಅರಳಿಸುವ ಕಾಯಕಗಳಲ್ಲಿ ಮನುಕುಲ ತೊಡಗಿಸಿಕೊಂಡರೆ ಜೀವನದಲ್ಲಿ ಉಲ್ಲಾಸ ಮತ್ತು ಉತ್ಸಾಹ ಚಿಮ್ಮುತ್ತದೆ’ ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಇಂದು ವಿಶ್ವದಲ್ಲಿ ಯುದ್ಧ, ಆತಂಕ, ತಲ್ಲಣಗಳೇ ತುಂಬಿವೆ. ಇಂತಹ ಸಮಯದಲ್ಲಿ ಜನರಿಗೆ ಅಗತ್ಯವಾಗಿ ಶಾಂತಿ ಮತ್ತು ನೆಮ್ಮದಿ ಬೇಕಾಗಿದೆ. ಮನಸ್ಸಿನ ಒಳಗೆ ಇರುವ ಭಾವತಂತುಗಳನ್ನು ಎಚ್ಚರಗೊಳಿಸುವ ಕೆಲಸವನ್ನು ಮಾಡಬೇಕಿದೆ. ಇದರಿಂದ ಜೀವನಕ್ಕೆ ಬೇಕಾದ ಶಾಂತಿ, ಸೌಹಾರ್ದ, ಸ್ನೇಹಪರತೆ ಹಾಗೂ ಸಂಬಂಧಗಳ ಸಿಂಚನದ ಅರಿವು ಆಗುತ್ತದೆ. ಈ ದಿಸೆಯಲ್ಲಿ ಜೆಎಸ್ಎಸ್ ಸಂಸ್ಥೆ ಎಳೆಯರಿಂದ ವೃದ್ಧರ ತನಕ ನೂರಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಬದುಕನ್ನು ಸಕಾರಾತ್ಮಕವಾಗಿ ನೋಡಲು ಜನಜೀವನಕ್ಕೆ ಬೇಕಾದ ಜೀವದ್ರವ್ಯವನ್ನು ಜೀವನೋತ್ಸಾಹ ಶಿಬಿರ ಮಾಡುತ್ತಿದೆ’ ಎಂದು ವಿವಸರಿಸಿದರು.

ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ ಮಾತನಾಡಿ, ‘ಜೆಎಸ್ಎಸ್ ಸಂಸ್ಥೆ ದೇಶ ವಿದೇಶಗಳಲ್ಲೂ ಪ್ರತಿ ವರ್ಷ ನೂರಾರು ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಿಸುತ್ತಾ ಬಂದಿದ್ದು, ಜ್ವಾನ-ವಿಜ್ಞಾನಗಳ ಜೊತೆ ಮನುಷ್ಯನ ವಿಕಾಸಕ್ಕೆ ಬೇಕಾದ ಸ್ಥಿತಿ ಪ್ರಜ್ಞತೆ, ಪ್ರಾಣಿಕ್ ಹೀಲಿಂಗ್, ನಿಸರ್ಗ ಚಿಕಿತ್ಸೆಗಳ ಬಗ್ಗೆ ಅರಿವು ನೀಡುತ್ತ ಬಂದಿದೆ. ಕುಟುಂಬಕ್ಕೆ ಬೇಕಾದ ಪ್ರೀತಿ, ಸಹನೆ, ಕರುಣೆಯ ಸಾರವನ್ನು ಉಣಿಸುತ್ತ ಬಂದಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್, ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಮಣ್ಯಂ, ಕುಲಸಚಿವ ರಾಮೇಗೌಡ, ಆಂಧ್ರ ಸಿಲ್ಕ್ ಬೋರ್ಡ್ ನಿವೃತ್ತ ಅಧಿಕಾರಿ ರಾಜು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-37-21990756

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.