ಯಲ್ಲಾಪುರ: ‘ವಿಶ್ವ ಭಾತೃತ್ವವನ್ನು ಪ್ರತಿಪಾದಿಸುವ ಭಗವದ್ಗೀತೆ; ಜಾತಿ, ಧರ್ಮ, ಲಿಂಗ, ವಯಸ್ಸು ಇತ್ಯಾದಿ ಯಾವುದೇ ಕಟ್ಟುಪಾಡುಗಳಿಲ್ಲದೇ ಎಲ್ಲರೂ ಒಮ್ಮನಸ್ಸಿನಿಂದ ಅಧ್ಯಯನ ಮಾಡಬೇಕಾದ ಗ್ರಂಥ’ ಎಂದು ವಿದ್ವಾನ್ ಶಂಕರ ಭಟ್ಟ ಬಾಲಿಗದ್ದೆ ಹೇಳಿದರು.

ಪಟ್ಟಣದ ಕಾರ್ಮಿಕ ಭವನದಲ್ಲಿ ಗೀತಾಜ್ಞಾನ ಯಜ್ಞ ಸಮಿತಿ ಟ್ರಸ್ಟ್ನ ತಾಲ್ಲೂಕು ಸಮಿತಿ ಭಾನುವಾರ ಆಯೋಜಿಸಿದ್ದ 11ನೇ ರಾಜ್ಯಮಟ್ಟದ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಶೋಕ ರಾಹಿತ್ಯ ಮತ್ತು ಆನಂದ ಪ್ರಾಪ್ತಿಯೇ ಭಗವದ್ಗೀತೆಯ ಆಶಯ. ನಿತ್ಯಾನುಷ್ಠಾನದಿಂದ ಜೀವನದ ಪದ್ಧತಿಯಾಗಬೇಕು. ಮೋಕ್ಷದ ದಾರಿಯಲ್ಲಿ ಸಾಗುವವನಿಗೆ ಮಾರ್ಗವನ್ನು ತೋರಿಸುವ ಗೀತೆ ಮಾತೃಹೃದಯವನ್ನು ಅಂತರ್ಗತ ಮಾಡಿಕೊಂಡಿದೆ. ಇದು ಎಲ್ಲರಿಗೂ ಅಭಯ ನೀಡುವ ಅಭಯ ಶಾಸ್ತ್ರ. ಉಪನಿಷತ್ತಿನ ಸಾರ ಹೊಂದಿ ಜ್ಞಾನದ ಕ್ಷೀರಾಮೃತವನ್ನೇ ಹರಿಸುತ್ತದೆ’ ಎಂದರು.

ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಕೆರೆಹೊಂಡ, ‘ನಮ್ಮ ಶ್ರದ್ಧೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಬಲ ಮತ್ತು ವಿವೇಕ ಎರಡೂ ಅತ್ಯಗತ್ಯ. ನಾವು ಬೌದ್ಧಿಕ ಕ್ಷತ್ರಿಯರಾಗುವ ಮೂಲಕ ಪ್ರಗತಿಪರತೆಯ ಹೆಸರಿನಲ್ಲಿ ಸೃಷ್ಟಿಸಲಾಗುತ್ತಿರುವ ಸನಾತನ ವಿರೋಧಿ ಸಂಕಥನಗಳನ್ನು ಎದುರಿಸಬೇಕು. ಭಾರತೀಯ ಮೂಲದ ವೈಚಾರಿಕ ನೆಲೆಗಳನ್ನು ತಿಳಿಸಬೇಕು. ಸ್ವಘೋಶಿತ ಬುದ್ಧಿಜೀವಿಗಳ ನೈತಿಕ ಪೊಲೀಸ್ಗಿರಿಗೆ ಸೂಕ್ತ ಉತ್ತರ ನೀಡಬೇಕು. ಗೀತೆ ಉಳಿದಿರುವುದು ಪಠಣದಿಂದ. ಅದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವುದು ಕಂಠಸ್ಥವಾದುದರಿಂದ ಹಾಗಾಗಿ ಅದರ ನಿತ್ಯಾನುಷ್ಠಾನ ಅಗತ್ಯ’ ಎಂದರು.

ಸೌಮ್ಯಾ ಕೆ.ವಿ. ಮಾತನಾಡಿ, ‘ಗೀತೆ ಆತ್ಮೀಯತೆ ಮತ್ತು ಆತ್ಮಶಕ್ತಿ ನೀಡುವ ಗ್ರಂಥ. ಗೀತಾಧ್ಯಯನ ನಮ್ಮಲ್ಲಿನ ಅಹಂಕಾರ ಇಲ್ಲವಾಗಿಸುತ್ತದೆ’ ಎಂದರು.

ಗೀತಾಜ್ಞಾನ ಯಜ್ಞ ಸಮಿತಿ ಟ್ರಸ್ಟ್ನ ಗುರುಗಳಾದ ಸುಬ್ರಾಯ ನಂದೋಡಿ ಮಾತನಾಡಿದರು. ಗೀತಾಜ್ಞಾನ ಯಜ್ಞ ಸಮಿತಿ ಟ್ರಸ್ಟ್ನ ತಾಲ್ಲೂಕು ಸಮಿತಿ ಸಂಚಾಲಕಿ ವಿನುತಾ ಕೋಟೆಮನೆ ಸ್ವಾಗತಿಸಿದರು. ಪ್ರಧಾನ ಸಂಚಾಲಕಿ ರಚನಾ ಹೆಗಡೆ ಸಂದೇಶ ವಾಚಿಸಿದರು. ಮಾದೇವಿ ಭಟ್, ಮಮತಾ ಪ್ರಕಾಶ ನಿರ್ವಹಿಸಿದರು. ಸಂಧ್ಯಾ ಹೆಗಡೆ ಕೊಂಡದಕುಳಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-20-1035239741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.