ಯಲ್ಲಾಪುರ: ‘ಹವ್ಯಕ ಸಮಾಜದ ಜನಸಂಖ್ಯೆ ವೇಗವಾಗಿ ಕ್ಷೀಣಿಸುತ್ತಿದೆ. ಹೆಣ್ಣು– ಗಂಡಿನ ನಡುವೆ ಸಂಖ್ಯೆಯ ಅನುಪಾತ ಹೆಚ್ಚುತ್ತಿದೆ. ಇದು ಸಮಾಜದ ಬೆಳವಣಿಗೆಗೆ ಆತಂಕಕಾರಿ’ ಎಂದು ಹಿರಿಯ ಸಹಕಾರಿ ಜಿ.ಎನ್.ಹೆಗಡೆ ಹಿರೇಸರ ಹೇಳಿದರು.

ಅಖಿಲ ಹವ್ಯಕ ಮಹಾಸಭಾ ಪಟ್ಟಣದ ಕಾರ್ಮಿಕ ಭವನದಲ್ಲಿ ಶನಿವಾರ ಯಲ್ಲಾಪುರ, ಅಂಕೋಲಾ ಹಾಗೂ ಜೊಯಿಡಾ ತಾಲ್ಲೂಕು ವ್ಯಾಪ್ತಿಯ ಹವ್ಯಕರಿಗಾಗಿ ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹವ್ಯಕ ಮಠಾಧಿಪತಿಗಳು ಒಂದೇ ವೇದಿಕೆಯಲ್ಲಿ ಸೇರಬೇಕು. ಜನಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು ಗಂಭೀರ ಚಿಂತನೆ ನಡೆಸಬೇಕು. ಶ್ರೇಷ್ಠ ಸಂಸ್ಕೃತಿ ಹೊಂದಿದ ಹವ್ಯಕ ಸಮಾಜ ಚಿಕ್ಕ ಸಮಾಜವಾಗಿದ್ದು ಅದನ್ನು ಉಳಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮಾತನಾಡಿ, ‘ಹವ್ಯಕರು ಕೃಷಿಭೂಮಿ ಮಾರಾಟ ಮಾಡುತ್ತಿರುವುದು ಆತಂಕದ ಸಂಗತಿ. ವಂಶವಾಹಿನಿಗೆ ವರ್ಣಸಂಕರ ಆಗುತ್ತಿರುವುದು ಸಮಾಜಕ್ಕೆ ಮಾರಕವಾಗುತ್ತಿದೆಯೇ? ಇದರಿಂದ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳಿಗೆ ತೊಂದರೆ ಆಗುತ್ತಿದೆಯೇ? ಎನ್ನುವುದನ್ನು ಗಮನಿಸಬೇಕಿದೆ. ಸಂತಾನ ಹೆಚ್ಚುವಂತಹ ಕಾರ್ಯದಲ್ಲಿ ಯುವಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕು’ ಎಂದರು.

ಹವ್ಯಕ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ ಮಾತನಾಡಿ, ‘ಹವ್ಯಕ ಮಹಾಸಭೆ ಹತ್ತಾರು ಕಾರ್ಯಕ್ರಮಗಳ ಮೂಲಕ ಸಮಾಜದ ಸಂಘಟನೆ ಜೊತೆ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು ಮಾತೃಮಂಡಳಿ ಅಧ್ಯಕ್ಷೆ ಆಶಾ ಬಗನಗದ್ದೆ ಮಾತನಾಡಿ, ‘ಹವ್ಯಕರ ವಿಶಿಷ್ಟ ಆಹಾರ ಪರಂಪರೆ ಉಳಿಸಿಕೊಳ್ಳೊಣ’ ಎಂದರು.

ತಾಲ್ಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಅಂಕೋಲಾ ಹವ್ಯಕ ಸಂಘದ ಅಧ್ಯಕ್ಷ ಎಂ.ಪಿ.ಭಟ್ಟ, ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ.ಹೆಗಡೆ ಮಾತನಾಡಿದರು.

ನಾಗರತ್ನಾ, ಭಾರತಿ, ಸಾವಿತ್ರಿ ಮತ್ತು ನಾಗೇಂದ್ರ ಸುದೇಶ ಪ್ರಾರ್ಥಿಸಿದರು. ಪ್ರತಿಬಿಂಬದ ಸಂಚಾಲಕ ಅನಂತ ಗಾಂವ್ಕರ ಸ್ವಾಗತಿಸಿದರು. ನಂದಿತಾ ಭಾಗ್ವತ ನಿರ್ವಹಿಸಿದರು. ಅಂಕೋಲಾ ತಾಲ್ಲೂಕು ಪ್ರತಿಬಿಂಬ ಸಂಚಾಲಕ ಶಶಾಂಕ ಹೆಗಡೆ ಹಳವಳ್ಳಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-20-914999606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.