ವಿಜಯಪುರ: ಸಮಾಜವಾದ, ಮಾರ್ಕ್ಸ್ವಾದದ ರಾಮಮನೋಹರ ಲೋಹಿಯಾ ಅವರ ಚಿಂತನೆಗಳು ಸತ್ಯ, ನಿಷ್ಠೆ, ತತ್ವ ಸಿದ್ದಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಸೋಮಲಿಂಗ ಗೆಣ್ಣೂರ ಹೇಳಿದರು.

ವಿಜಯಪುರ ಪ್ರೊ. ಎ.ಎಸ್. ಹಿಪ್ಪರಗಿ ಪ್ರತಿಷ್ಠಾನ ಹಾಗೂ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ಜರುಗಿದ ಡಾ. ರಾಮಮನೋಹರ ಲೋಹಿಯಾ ಅವರ 116ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಲೋಹಿಯಾ ಚಿಕ್ಕವರಿದ್ದಾಗ ಮಹಾತ್ಮ ಗಾಂಧೀಜಿ ಅವರ ಜೊತೆ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ದೇಶಾಭಿಮಾನ, ಸಮಾನತೆಗಾಗಿ ಹೋರಾಟ ಮಾಡುತ್ತ ಸಮಾಜವಾದದ ತತ್ವ, ಸಿದ್ದಾಂತವನ್ನು ಪ್ರಪಂಚಕ್ಕೆ ಪರಿಚಯಿಸುತ್ತ ಜಗತ್ತು ಒಂದೇ ಆಗಬೇಕು. ಬದುಕನ್ನು ಸಾಗಿಸಬೇಕು ಎಂದು ಹೇಳುತ್ತಿದ್ದರು ಎಂದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಡಾ. ರಾಮಮನೋಹರ ಲೋಹಿಯಾ ಅವರು ಒಬ್ಬ ಶ್ರೇಷ್ಠ ಸಮಾಜ ಸುಧಾರಕ. ಜನರ ಪ್ರೀತಿ, ವಿಶ್ವಾಸ ಗಳಿಸಿದ ಉತ್ತಮ ವ್ಯಕ್ತಿ. ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿದ್ಯಾವತಿ ಅಂಕಲಗಿ, ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ, ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಸೋಮಲಿಂಗ ಗೆಣ್ಣೂರ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಟಿ. ಮೇರವಾಡಿ ಅವರನ್ನು ಪ್ರತಿಷ್ಠಾನದ ಪದಾಧಿಕಾರಿಗಳು ಸನ್ಮಾನಿಸಿದರು.

ಬಿ.ಆರ್. ಬನಸೋಡೆ, ಪ್ರತಿಷ್ಠಾನದ ಅಧ್ಯಕ್ಷ ಡಾ. ವಿ.ಡಿ. ಐಹೊಳ್ಳಿ, ಕಾರ್ಯದರ್ಶಿ ಎಸ್.ಎನ್. ಶಿವಣಗಿ, ಪ್ರಾಚಾರ್ಯ ಡಾ. ಎಸ್.ಟಿ. ಮೇರವಾಡೆ, ಸಾಹಿತಿ ಸಂಗಮೇಶ ಬದಾಮಿ, ಎಸ್.ಬಿ.ದೊಡಮನಿ, ವಿ.ಬಿ. ಸಾಲಕ್ಕಿ, ವಿ.ಸಿ. ನಾಗಠಾಣ, ಸಹದೇವ ನಾಡಗೌಡರ, ಮ.ನು. ಪತ್ತಾರ, ಮ.ಗು. ಯಾದವಾಡ, ಕೆ.ಎಫ್. ಅಂಕಲಗಿ, ಶಕುಂತಲಾ ದೊಡಮನಿ, ಭಾಗ್ಯಶ್ರೀ ಕೋಟಿ, ಶಿಕ್ಷಕಿ ದಾಕ್ಷಾಯಿಣಿ ಹುಡೇದ, ಸತ್ಯಾನಂದ ಪಾತ್ರೋಟ, ಬಸವರಾಜ ಯಂಕಂಚಿ, ಅನಿಲ ಹೊಸಮನಿ, ಅಶೋಕ ಹಿಪ್ಪರಗಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-26-40107576

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.