ಶುಕ್ರವಾರ, ನವೆಂಬರ್ 22, 2019
20 °C

ಮೈಲೇಜ್‌ ನೀಡದ ಜೀಪು; ದೂರು

Published:
Updated:

ಬೆಂಗಳೂರು: ‘ಯಶವಂತಪುರದ ಆರ್‌.ಎಂ.ಸಿ ಯಾರ್ಡ್‌ ಬಳಿ ಇರುವ ‘ಕೆ.ಎಸ್‌.ಟಿ ಪ್ರೈಮ್’ ಮಳಿಗೆಯಲ್ಲಿ ಖರೀದಿಸಿದ್ದ ಜೀಪು, ಭರವಸೆ ನೀಡಿದ್ದಕ್ಕಿಂತಲೂ ಕಡಿಮೆ ಮೈಲೇಜ್‌ ನೀಡುತ್ತಿದೆ. ಜೀಪು ತಯಾರಕರು ಹಾಗೂ ಮಾರಾಟಗಾರರಿಂದ ವಂಚನೆ ಆಗಿದೆ’ ಎಂದು ಗ್ರಾಹಕ ಆರ್. ಶಶಿಕುಮಾರ್ ಎಂಬುವರು ಜೆ.ಪಿ.ನಗರ ಠಾಣೆಗೆ ದೂರು ನೀಡಿದ್ದಾರೆ.

‘ಅನ್ಯಾಯದ ವಿರುದ್ಧ ಶಶಿಕುಮಾರ್, 4ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯದ ತೀರ್ಪಿನಂತೆ ಆರೋಪಿಗಳ ವಿರುದ್ಧ ನಂಬಿಕೆ ದ್ರೋಹ,ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೀಪು ತಯಾರಿಸಿರುವ ಎಫ್‌ಸಿಎ ಇಂಡಿಯಾ ಆಟೊಮೊಬೈಲ್ ಕಂಪನಿಯ ಸಿಇಒ, ಮಾರಾಟಗಾರ ಸೇರಿ ಆರು ಮಂದಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ತಿಳಿಸಿದರು.

‘2018ರ ನವೆಂಬರ್‌ ತಿಂಗಳಿನಲ್ಲಿ ₹ 26.32 ಲಕ್ಷ ನೀಡಿ ಜೀಪು ಖರೀದಿಸಿದ್ದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 16 ಕಿ.ಮೀ ಮೈಲೇಜ್‌ ನೀಡುವುದಾಗಿ ನನಗೆ ಹೇಳಿ ನಂಬಿಸಿದ್ದರು. ಖರೀದಿ ಬಳಿಕ ಚಾಲನೆ ಮಾಡಿದಾಗ, ಪ್ರತಿ ಲೀಟರ್‌ಗೆ ಕೇವಲ 5 ಕಿ.ಮೀ ಮೈಲೇಜ್ ನೀಡುತ್ತಿದೆ’ ಎಂದು ದೂರಿನಲ್ಲಿ ಶಶಿಕುಮಾರ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)