ಚಾಮರಾಜನಗರ: ಗೊಂದಲ–15ನೇ ವಾರ್ಡ್‌ ಫಲಿತಾಂಶ ಬದಲು

7

ಚಾಮರಾಜನಗರ: ಗೊಂದಲ–15ನೇ ವಾರ್ಡ್‌ ಫಲಿತಾಂಶ ಬದಲು

Published:
Updated:

ಚಾಮರಾಜನಗರ: ಇಲ್ಲಿನ 15ನೇ ವಾರ್ಡ್‌ನ ಮತ ಎಣಿಕೆ ಸಂದರ್ಭದಲ್ಲಿ ಆದ ಗೊಂದಲದಿಂದಾಗಿ ವಾರ್ಡ್‌ನ ಫಲಿತಾಂಶವೇ ಬದಲಾದ ಪ್ರಸಂಗ ನಡೆಯಿತು.

ಆರಂಭದಲ್ಲಿ 15ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಜಗದೀಶ್ ಅವರು ಕೇವಲ ನಾಲ್ಕು ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಹೇಳಲಾಗಿತ್ತು. ಮಾಧ್ಯಮಗಳಿಗೂ ಇದೇ ಮಾಹಿತಿಯನ್ನು ನೀಡಲಾಗಿತ್ತು.

 ನಾಲ್ಕು ಮತಗಳ ಅಂತರದಿಂದ ಸೋತಿದ್ದರಿಂದ ಮರುಎಣಿಕೆ ನಡೆಸುವಂತೆ ಬಿಜೆಪಿ ಅಭ್ಯರ್ಥಿ ಹೇಮಂತ್‌ ಕುಮಾರ್‌ ಅವರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದರು. ಹಾಗಾಗಿ, ಧ್ವನಿವರ್ಧಕದ ಮೂಲಕ ಫಲಿತಾಂಶವನ್ನು ಘೋಷಿಸಿರಲಿಲ್ಲ.

ಎರಡನೇ ಬಾರಿ ಫಲಿತಾಂಶ ಪ್ರಕಟಿಸಿದಾಗ ಕಾಂಗ್ರೆಸ್‌ನ ಆರ್‌.ಪಿ.ನಂಜುಂಡಸ್ವಾಮಿ ನಾಲ್ಕು ಮತಗಳ ಅಂತರದಿಂದ ಗೆದ್ದಿದ್ದರು!

ಆಗಿದ್ದು ಏನು?: ಮತಯಂತ್ರ, ಎಣಿಕೆಯಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ಕಂಪ್ಯೂಟರ್‌ನಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ನಮೂದಿಸುವ ಸಂದರ್ಭದಲ್ಲಿ ಆರ್‌.ಪಿ. ನಂಜುಂಡಸ್ವಾಮಿ ಅವರ ಹೆಸರು ಇರಬೇಕಾದ ಜಾಗದಲ್ಲಿ ಜಗದೀಶ್‌ ಅವರ ಹೆಸರನ್ನು ನಮೂದಿಸಲಾಗಿತ್ತು. ವಾಸ್ತವದಲ್ಲಿ ಜಗದೀಶ್‌ ಅವರು 123 ಮತಗಳನ್ನಷ್ಟೇ ಪಡೆದಿದ್ದರು. ನಂಜುಂಡಸ್ವಾಮಿ ಅವರು 334 ಮತಗಳನ್ನು ಪಡೆದಿದ್ದರು.

ವಾರ್ಡ್‌ನ ಅಂತಿಮ ಫಲಿತಾಂಶ ಪ್ರಕಟವಾಗುವ ಹೊತ್ತಿಗೆ ಉಳಿದ ಎಲ್ಲ ವಾರ್ಡ್‌ಗಳ ಫಲಿತಾಂಶ ಪ್ರಕಟಗೊಂಡಿತ್ತು. ಮತ ಎಣಿಕೆ ಕೇಂದ್ರದಲ್ಲಿದ್ದ ಪಕ್ಷಗಳ ಏಜೆಂಟರು, ಕಾರ್ಯಕರ್ತರೆಲ್ಲ ಹೋಗಿದ್ದರು. ಟಿವಿ, ಆನ್‌ಲೈನ್‌ ಮಾಧ್ಯಮಗಳಲ್ಲಿ ಪಕ್ಷಾವಾರು ಬಲಾಬಲ ಪ್ರಕಟವಾಗಿತ್ತು.

ಒಂದು ವೇಳೆ ಮರುಎಣಿಕೆಗೆ ಮತ್ತೆ ಮನವಿ ಮಾಡದೇ ಹೋಗಿದ್ದರೆ, ಮೊದಲಿನ ಫಲಿತಾಂಶವೇ ಅಧಿಕೃತವಾಗುವ ಸಾಧ್ಯತೆ ಇತ್ತು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !