ಕಾಂಗ್ರೆಸ್‌ ಬೆಂಬಲದಿಂದಲೇ ಪ್ರಧಾನಮಂತ್ರಿ ಆಯ್ಕೆ: ಎಚ್‌.ಡಿ.ದೇವೇಗೌಡ

ಭಾನುವಾರ, ಮೇ 26, 2019
31 °C

ಕಾಂಗ್ರೆಸ್‌ ಬೆಂಬಲದಿಂದಲೇ ಪ್ರಧಾನಮಂತ್ರಿ ಆಯ್ಕೆ: ಎಚ್‌.ಡಿ.ದೇವೇಗೌಡ

Published:
Updated:

ವಿಜಯಪುರ: ‘ಕಾಂಗ್ರೆಸ್‌ ಬೆಂಬಲದಿಂದಲೇ ಮುಂದಿನ ಪ್ರಧಾನಮಂತ್ರಿಯ ಆಯ್ಕೆ ನಡೆಯಲಿದೆ. ನಾನು ರಾಹುಲ್‌ ಗಾಂಧಿ ಬೆಂಬಲಿಸುವೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಪುನರುಚ್ಚರಿಸಿದರು.

‘ರಾಹುಲ್‌ ನನ್ನ ಆಯ್ಕೆ. ಇದರಾಚೆಗೂ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಮಾಯಾವತಿ ಸಹ ಪ್ರಧಾನಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ’ ಎಂದು ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಈಶ್ವರಪ್ಪ ಅವರಿಗೆ ಸವಾಲು ಹಾಕುವ ಸಂದರ್ಭದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವೆ ಎಂದು ಹೇಳಿದ್ದಾರೆ. ಆ ವಿಷಯದಲ್ಲಿ ಹೆಚ್ಚಿನ ಚರ್ಚೆ ಬೇಕಿಲ್ಲ’ ಎಂದು ದೇವೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕನಸು ಕಾಣುತ್ತಿಲ್ಲ:

‘ಪ್ರಧಾನಮಂತ್ರಿಯಾಗುವ ಕನಸು ಕಾಣಲು ದೇವೇಗೌಡರು, ಬಿ.ಎಸ್‌.ಯಡಿಯೂರಪ್ಪ ಅಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ದೇವೇಗೌಡರು ಎಲ್ಲಿಯೂ ನಾನು ಮತ್ತೆ ಪ್ರಧಾನಿಯಾಗುತ್ತೇನೆಂದು ಹೇಳಿಲ್ಲ. ಆದರೂ ವಿರೋಧಿಗಳ ಟೀಕೆ ಈ ರೀತಿಯೇ ನಡೆದಿರುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮೈತ್ರಿ ಕೂಟ 22ರಿಂದ 25 ಸ್ಥಾನ ಗೆಲ್ಲಲಿದೆ’ ಎಂದು ಇದೇ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !