ಸಂವಿಧಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ

7

ಸಂವಿಧಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ

Published:
Updated:
Deccan Herald

ವಿಜಯಪುರ: ‘ನಾಗರಿಕರ ಹಕ್ಕು, ಕರ್ತವ್ಯ, ಸಾರ್ವಭೌಮತ್ವ ಮತ್ತು ಜಾತ್ಯತೀತದ ಪ್ರತೀಕವಾಗಿರುವ ಭಾರತದ ಸಂವಿಧಾನಕ್ಕೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು’ ಎಂದು ಸಿದ್ಧೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಎಚ್‌.ಎಸ್‌.ಸಲಗಾರ ಹೇಳಿದರು.

ನಗರದ ಕಾಳಿದಾಸ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ, ಕಾಳಿದಾಸ ಶಿಕ್ಷಣ ಸಂಸ್ಥೆ, ದುರ್ಗಾದೇವಿ ಯುವಕ ಸಂಘ, ಸ್ಪಿನ್ನಿಂಗ್ ಮಿಲ್ ಎಲ್.ಟಿ ವತಿಯಿಂದ ಹಮ್ಮಿಕೊಂಡಿದ್ದ ಭಾರತೀಯ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ನಾಳಿನ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕೆಂದರೆ ನಮ್ಮ ಸಂವಿಧಾನವನ್ನು ಸಾಧ್ಯವಾದ ಮಟ್ಟೆಗೆ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಡಿ.ದಯಾನಂದ ಮಾತನಾಡಿ, ಸ್ವಾತಂತ್ರ್ಯ ನಂತರ ರಾಷ್ಟ್ರದ ಒಗ್ಗಟ್ಟು, ಏಕತೆಗೆ ಮತ್ತು ಜನಸಾಮಾನ್ಯರ ಹಕ್ಕು ಬಾಧ್ಯತೆಗೆ ಆದ್ಯತೆ ನೀಡಿ ರಚಿಸಿರುವ ಭಾರತೀಯ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬ ನಾಗರಿಕನೂ ತಮ್ಮ ಕರ್ತವ್ಯ ಅರಿತು ನಡೆದರೆ ಖಂಡಿತವಾಗಿ ಭಾರತ ಶಾಂತಿಯುತ ರಾಷ್ಟ್ರವಾಗಲಿದೆ ಎಂದು ಹೇಳಿದರು.

ಪ್ರಾಚಾರ್ಯ ವಿ.ಡಿ.ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ರಮೇಶ ಲಮಾಣಿ ಸೇರಿದಂತೆ ಇತರರು ಇದ್ದರು. ಸುರೇಶ ಗಡದಿ ಸ್ವಾಗತಗೀತೆ ಹಾಡಿದರು. ಉಪನ್ಯಾಸಕ ಸುರೇಶ ಗೌಡಪ್ಪಗಿಡ ಸ್ವಾಗತಿಸಿದರು. ರಾಷ್ಟ್ರೀಯ ಯುವ ಸ್ವಯಂ ಸೇವಕಿ ಪೂಜಾ ಬಾಗಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !