ಹುಳಿಗೆ ರಾಗಿ ಹಿಟ್ಟು ಹಾಕಿ ಫಜೀತಿ!

7

ಹುಳಿಗೆ ರಾಗಿ ಹಿಟ್ಟು ಹಾಕಿ ಫಜೀತಿ!

Published:
Updated:
ಪಾಂಡುರಂಗ

ನನಗೆ ಮೊದಲಿನಿಂದಲೂ ಅಡುಗೆ ಮಾಡುವುದರಲ್ಲಿ ಅತೀವ ಆಸಕ್ತಿ. ನಾನು ಬೆಳೆದಿದ್ದು ಸಂಪ್ರದಾಯಸ್ಥ ಕುಟುಂಬದಲ್ಲಿ. ಏಳು ಮಕ್ಕಳ ಪೈಕಿ ನಾನು ಮೂರನೆಯವನು. ನಮ್ಮನೆಯಲ್ಲಿ ಎಲ್ಲರೂ ಅಡುಗೆ ಮಾಡಬೇಕಾಗಿತ್ತು.

ಹುಡುಗ– ಹುಡುಗಿ ಎಂದು ಯಾವುದೇ ಮುಲಾಜು ಇರುತ್ತಿರಲಿಲ್ಲ. ಅವರವರಿಗೆ ವಹಿಸಿಕೊಟ್ಟ ಕೆಲಸವನ್ನು ತಪ್ಪದೇ ಮಾಡಬೇಕಾಗಿತ್ತು. ಇದಲ್ಲದೇ ಹಬ್ಬ ಹರಿದಿನಗಳಲ್ಲಿ ನಮ್ಮ ತಾಯಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುವುದು ಸಾಮಾನ್ಯವಾಗಿತ್ತು.

ಒಂದು ಬಾರಿ ನನ್ನದೇ ಅಡುಗೆ ಮನೆ ಜವಾಬ್ದಾರಿ. ತರಕಾರಿ ಹುಳಿ ಮಾಡುವಾಗ ಹುಳಿ ಗಟ್ಟಿ ಬರಲು ಸ್ವಲ್ಪ ಕಾಯಿ ಮತ್ತು ಅಕ್ಕಿ ಹಿಟ್ಟು ಬೆರೆಸಿ ಹಾಕುವುದು ಪದ್ಧತಿ. ಆ ದಿನ ಅಕ್ಕಿಹಿಟ್ಟು ಖಾಲಿಯಾಗಿತ್ತು. ಅಕ್ಕಿಹಿಟ್ಟಿಗಾಗಿ ಅಂಗಡಿಗೆ ಹೋದರೆ ಅಡುಗೆ ತಡವಾಗುತ್ತದೆ. ರಾಗಿ ಹಿಟ್ಟು ಕಲಸಿ ಹಾಕುವ ಯೋಚನೆ ಮಾಡಿ, ಹಾಕಿದೆ.

ತಕ್ಷಣ ಗಟ್ಟಿ ಬರಲಿಲ್ಲವಾದುದರಿಂದ ಮತ್ತೆ ಮತ್ತೆ ಎರಡು ಮೂರು ಸಲ ರಾಗಿ ಹಿಟ್ಟನ್ನು ನೀರಿನಲ್ಲಿ  ಹಾಕಿ ಕುದಿಯಲು ಬಿಟ್ಟೆ. ಅದು ಕುದಿದ ಮೇಲೆ ಎಲ್ಲರಿಗೂ ಬಡಿಸಿದಾಗ ಅವರ ಮುಖ ನೋಡಬೇಕಾಗಿತ್ತು. ಆಗಲೇ ನನಗೆ ರಾಗಿ ಹಿಟ್ಟು ಹಾಕಿದ ಅವಾಂತರ ಗೊತ್ತಾಯಿತು. ಸುಮಾರು 55 ವರುಷಗಳು ಕಳೆದರೂ ಇಂದಿಗೂ ಮನೆಯಲ್ಲಿ ನನ್ನ ರಾಗಿ ಹಿಟ್ಟಿನ ಹುಳಿಯ ಬಗ್ಗೆ ತಮಾಷೆ ಮಾಡುತ್ತಾರೆ.

–ಪಾಂಡುರಂಗ ಎಸ್‌.ಆರ್‌., ರಾಜರಾಜೇಶ್ವರಿ ನಗರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !