ಲಾರಿಗೆ ಸ್ಕೂಟರ್ ಡಿಕ್ಕಿ; ದಂಪತಿ ಸಾವು

ಮಂಗಳವಾರ, ಮೇ 21, 2019
31 °C

ಲಾರಿಗೆ ಸ್ಕೂಟರ್ ಡಿಕ್ಕಿ; ದಂಪತಿ ಸಾವು

Published:
Updated:

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ವೀರಸಂದ್ರ ಟೋಲ್‌ ಗೇಟ್ ಬಳಿ ಗುರುವಾರ ರಾತ್ರಿ ಸ್ಕೂಟರ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.

ತಮಿಳುನಾಡಿನ ಧರ್ಮಪುರಿಯವರಾದ ಶಂಬರಸನ್ (29) ಹಾಗೂ ಪುಷ್ಪಾ (24) ಮೃತರು. ವರ್ಷದ ಹಿಂದಷ್ಟೇ ವಿವಾಹವಾಗಿದ್ದ ದಂಪತಿ, ಆರ್.ಟಿ.ನಗರ ಸಮೀಪದ ಭುವನೇಶ್ವರಿನಗರದಲ್ಲಿ ನೆಲೆಸಿದ್ದರು. ಶಂಬರಸನ್ ಟೆಂಪೊ ಚಾಲಕರಾಗಿದ್ದು, ಪುಷ್ಪಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

ಗುರುವಾರ ರಾತ್ರಿ 8.30ರ ಸುಮಾರಿಗೆ ದಂಪತಿ ಸ್ಕೂಟರ್‌ನಲ್ಲಿ ಧರ್ಮಪುರಿಗೆ ತೆರಳುತ್ತಿದ್ದರು. ಟೋಲ್ ದಾಟಿದ ನಂತರ ವೇಗವಾಗಿ ಸ್ಕೂಟರ್ ಚಾಲೂ ಮಾಡಿಕೊಂಡು ಬಂದ ಶಂಬರಸನ್, ಲಾರಿಯನ್ನು ಹಿಂದಿಕ್ಕಲು ಯತ್ನಿಸಿದ್ದಾರೆ. ಈ ವೇಳೆ ಚಾಲಕ ಅವರನ್ನು ನೋಡದೆ ವಾಹನವನ್ನು ಒಮ್ಮೆಲೆ ಬಲಕ್ಕೆ ತೆಗೆದುಕೊಂಡಿದ್ದಾನೆ.

ಈ ವೇಳೆ ಡಿಕ್ಕಿ ಸಂಭವಿಸಿ ದಂಪತಿ ಕುಸಿದು ಬಿದ್ದಿದ್ದು, ಮೈಮೇಲೆ ಚಕ್ರ ಹರಿದಿದ್ದರಿಂದ ಶಂಬರಸನ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡಿದ್ದ ‍ಪುಷ್ಪಾ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಸ್ವಲ್ಪ ಸಮಯದಲ್ಲೇ ಅವರೂ ಕೊನೆಯುಸಿರೆಳೆದರು. ಚಾಲಕನನ್ನು ವಶಕ್ಕೆ ಪಡೆದು, ಲಾರಿ ಜಪ್ತಿ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ‍ಪೊಲೀಸರು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !