ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

7

ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

Published:
Updated:

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಗೋವುಗಳನ್ನು ಕೊಡಿಗೇಹಳ್ಳಿ ಪೊಲೀಸರು ಶನಿವಾರ ರಕ್ಷಿಸಿದ್ದಾರೆ.

ಗೌರಿಬಿದನೂರಿನಿಂದ ನಗರಕ್ಕೆ ವಾಹನದಲ್ಲಿ ಗೋವುಗಳನ್ನು ತರಲಾಗುತ್ತಿತ್ತು. ಹೆಬ್ಬಾಳದ ಎಸ್ಟಿಮ್‌ ಮಾಲ್‌ ಬಳಿ ಪೊಲೀಸರು ವಾಹನ ತಡೆದಿದ್ದರು. ಭಯಗೊಂಡ ಚಾಲಕ ಹಾಗೂ ಮತ್ತೊಬ್ಬ, ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ.

‘ಮನೆ ಮುಂದೆ ಕಟ್ಟಿದ್ದ ಗೋವುಗಳನ್ನು ಕಳವು ಮಾಡಿಕೊಂಡು ಸಾಗಣೆ ಮಾಡಲಾಗುತ್ತಿತ್ತು ಎಂದು ಗೊತ್ತಾಗಿದೆ. ರಕ್ಷಿಸಲಾಗಿರುವ ಗೋವುಗಳನ್ನು ಗೋಶಾಲೆಗೆ ಒಪ್ಪಿಸಿದ್ದೇವೆ. ತಪ್ಪಿಸಿಕೊಂಡಿರುವವರು ಯಾರು ಹಾಗೂ ಗೋವುಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !