ಕ್ರಿಯಾಶೀಲತೆ ಒರೆಗೆ ಹಚ್ಚಿದ ಕರಕುಶಲ ತರಬೇತಿ

7

ಕ್ರಿಯಾಶೀಲತೆ ಒರೆಗೆ ಹಚ್ಚಿದ ಕರಕುಶಲ ತರಬೇತಿ

Published:
Updated:

ಮಹಿಳೆಯರು ಯಾವುದೇ ಒಂದು ಕೆಲಸವನ್ನು ಮಾಡಲು ಮುಂದಾದರೆ ಸಾಕು. ಬಹಳ ಆಸಕ್ತಿಯಿಂದ ಅಷ್ಟೇ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಎಷ್ಟೋ ಬಾರಿ ತಮ್ಮ ಬಿಡುವಿನ ವೇಳೆಯಲ್ಲಿ ಕಲಿತು ಕರಗತ ಮಾಡಿಕೊಳ್ಳುವ ಕರಕುಶಲ ಹವ್ಯಾಸಗಳೇ ಅವರ ಸ್ವಾವಲಂಬಿ ಜೀವನಕ್ಕೆ ದಾರಿಯಾಗುತ್ತವೆ. ಮಹಿಳೆಯರಲ್ಲಿ ಸುಪ್ತವಾಗಿರುವ ಕ್ರಿಯಾಶೀಲತೆಗೆ ಒಂದಷ್ಟು ತರಬೇತಿ ದೊರೆತುಬಿಟ್ಟರೆ ಯಾರ ಹಂಗಿಲ್ಲದೆ ಸ್ವಂತ ಜೀವನವನ್ನು ನಡೆಸಲು ಸಹಾಯವಾಗಲಿದೆ. ಅಂತ ಉಪಯುಕ್ತ ತರಬೇತಿ ಶಿಬಿರ ದೇಶಪಾಂಡೆ ಫೌಂಡೇಷನ್‌ನಲ್ಲಿ ನಡೆಯಿತು.

ನವೋದ್ಯಮಿ ಪ್ರಗತಿ ಕಾರ್ಯಕ್ರಮದಡಿ ಫೆವಿಕ್ರೀಲ್ ಕಂಪನಿಯವರು ಮಹಿಳೆಯರಿಗಾಗಿ ಏರ್ಪಡಿಸಿದ್ದ ಆರ್ಟ್ ಆ್ಯಂಡ್‌ ಕ್ರಾಫ್ಟ್ ತರಬೇತಿ ಶಿಬಿರದಲ್ಲಿ ಉಪಯೋಗಿಸಿ ಬಿಟ್ಟ ವಸ್ತುಗಳಿಂದ ಚಿತ್ತಾಕರ್ಷಕ ವಸ್ತುಗಳನ್ನು ಸಿದ್ಧಪಡಿಸಲು ಮಾರ್ಗದರ್ಶನ ನೀಡಲಾಯಿತು. ಬಟ್ಟೆ, ಬ್ಯಾಗ್, ಬಾಟಲಿ ಮುಂತಾದವುಗಳ ಮೇಲೆ ವಿಭಿನ್ನವಾದ ಶೈಲಿಯಲ್ಲಿ ಚಿತ್ರಗಳನ್ನು ಬಿಡಿಸಿ, ಹಳೆಯ ವಸ್ತುಗಳನ್ನು ಬಣ್ಣಗಳ ಮೂಲಕ ಚಿತ್ತಾಕರ್ಷಕವಾಗಿ ಕಾಣುವಂತೆ ಮಾಡಲಾಯಿತು.

ದುಪ್ಪಟ್ಟಾ ಪೇಂಟಿಂಗ್‌, ಟೈ ಆ್ಯಂಡ್ ಡೈ, ಬಾಟಲ್ ಆರ್ಟ್, ಒನ್ ಸ್ಟ್ರೋಕ್ ಪೇಂಟಿಂಗ್, ಡಿಸೈನರ್‌ ಬ್ಲೌಸ್‌, ಸ್ಯಾರಿ ಪೇಂಟಿಂಗ್‌, ಬ್ಲಾಕ್ ಪೇಂಟಿಂಗ್, ಸ್ಟೇನ್ಸಿಲ್ (ಟೂಥ್ ಬ್ರಷ್‌), ಶೇಡಿಂಗ್ ಪೇಂಟಿಂಗ್, ಮೀನೈಚರ್‌ ಪೇಂಟಿಂಗ್, ಶಿಲ್ಪಕಾರ ಪೇಂಟಿಂಗ್‌ ಸೇರಿದಂತೆ ಕಸೂತಿ, ಹೆಣಿಕೆ, ಸ್ಟೀಚ್‌, ರನ್ನಿಂಗ್‌ ಸ್ಟೀಚ್‌ಗಳ ಕುರಿತು ಮಹಿಳೆಯರಿಗೆ ಮೂರು ದಿನಗಳ ಕಾಲ ತರಬೇತಿ ನೀಡಲಾಯಿತು. ಬಿಡುವಿನ ವೇಳೆಯಲ್ಲಿ ಮತ್ತು ತಮ್ಮ ಹವ್ಯಾಸವಾಗಿ ಮಹಿಳೆಯರು ಈ ಎಲ್ಲ ಪೇಂಟಿಂಗ್‌ಗಳನ್ನು ಮಾಡಬಹುದಾಗಿದೆ.

‘ಮನೆಯಲ್ಲಿನ ಬಳಕೆಯಾಗದ ವಸ್ತುಗಳನ್ನು ಬಳಸಿಕೊಂಡು ವಿವಿಧ ಬಗೆಯಲ್ಲಿ ಬಣ್ಣಗಳನ್ನು ಬಳಸಿ ಚಿತ್ತಾಕರ್ಷಕವಾಗಿ ಕಾಣುವ ವಸ್ತುಗಳನ್ನು ಮಾಡಬಹುದು. ಮಕ್ಕಳ ಉಡುಗೊರೆಗಳು, ಆಭರಣಗಳು, ಆಟಿಕೆ ಸಾಮಾನುಗಳು, ಬ್ಯಾಗ್‌, ಟಿಪ್ಪನ್ ಬಾಕ್ಸ್, ಬಾಟಲಿಗಳು ಸೇರಿದಂತೆ ವಿಧ ವಿಧದ ವಸ್ತುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ದೇಶಪಾಂಡೆ ಫೌಂಡೇಷನ್‌ ನಡೆಸುವ ನವೋದ್ಯಮಿ ಸಂತೆಯಲ್ಲಿ ತರಬೇತಿ ಪಡೆದವರು ತಾವು ಸಿದ್ಧಪಡಿಸಿದ ವಸ್ತುಗಳನ್ನು ಪ್ರದರ್ಶಿಸಿ, ಮಾರಾಟ ಮಾಡಬಹುದಾಗಿದೆ. ಆ ಮೂಲಕ ಮಹಿಳೆಯರನ್ನು ಪ್ರೋತ್ಸಾಹಿಸಲಾಗುತ್ತಿದೆ. ಒಟ್ಟಿನಲ್ಲಿ ಈ ಎಲ್ಲ ತರಬೇತಿಗಳು ಉಚಿತವಾಗಿವೆ’ ಎನ್ನುತ್ತಾರೆ ಫೆವಿಕ್ರೀಲ್‌ ಕಂಪನಿಯ ತರಬೇತುದಾರರಾದ ಸೀಮಾ ಕಟಾವಕರ್.

ಚಿತ್ರಗಳು: ತಾಜುದ್ದೀನ್ ಆಜಾದ್

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !