7

ಕ್ರಿಕೆಟ್‌ ಆಡಬೇಡಿ ಎಂದಿದ್ದಕ್ಕೆ ಹಲ್ಲೆ

Published:
Updated:
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೀವ್

ಕೊಳ್ಳೇಗಾಲ: ಬೆಂಗಳೂರು ನಗರದ ನಿವೃತ್ತ ಪೊಲೀಸ್ ಕಮಿಷನರ್, ತಾಲ್ಲೂಕಿನ ಸತ್ತೇಗಾಲದ ಮರಿಸ್ವಾಮಿ ಅವರ ತಮ್ಮ ರಾಜೀವ್ ಎಂಬುವರಿಗೆ ಗುರುವಾರ ನಾಲ್ವರು ಯುವಕರು ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.

ಗ್ರಾಮದ ನಿವಾಸಿಗಳಾದ ಮಹೇಶ್, ಪ್ರಜ್ವಲ್, ನಿಶಾಂತ್, ಚಂದು ಹಲ್ಲೆ ನಡೆಸಿದವರು. ರಾಜೀವ್‌ ಅವರ ಜಮೀನಿನಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ‘ನಮ್ಮ ಜಮೀನಿನಲ್ಲಿ ಕ್ರಿಕೆಟ್ ಆಡಬೇಡಿ’ ಎಂದು ಹೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ.

ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರಾಜೀವ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !